www.karnatakatv.net: ಗುಂಡ್ಲುಪೇಟೆ: ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಭೀಮನಬೀಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು.
ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೀಮನಬೀಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ಜಿ ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಪೋಷಣ ಅಭಿಯಾನ ಕಾರ್ಯಕ್ರಮವನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಕಾರ್ಯಕ್ರಮವು ಗ್ರಾಮಾಂತರ ಜನತೆಯಲ್ಲಿ ಪೋಷಕರಲ್ಲಿ ವಿದ್ಯಾರ್ಥಿಗಳಲ್ಲಿ, ಪೋಷಕಾಂಶಗಳ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಮೂಡಿಸುತ್ತದೆ.
ನಮ್ಮ ಪೋಷಕರು ಹೆಚ್ಚು ರೈತಾಪಿ ಕುಟುಂಬ ವರ್ಗದವರಾಗಿದ್ದು ತಾವು ಬೆಳೆದ ತರಕಾರಿ, ಸೊಪ್ಪು ಏಕದಳ ದ್ವಿದಳ ಧಾನ್ಯಗಳನ್ನು ಪ್ರಮುಖವಾಗಿ ಆರೋಗ್ಯದ ದೃಷ್ಟಿಯಿಂದ ತಮ್ಮ ಮನೆಗಳಲ್ಲಿ ಬಳಸಿಕೊಳ್ಳಬೇಕು. ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸಬೇಕು, ಗರ್ಭಿಣಿಯರು ಬಾಣಂತಿಯರು ಮತ್ತು ಮಕ್ಕಳಿಗೆ ಉತ್ತಮವಾದ ಪೋಷಕಾಂಶದ ಆಹಾರ ದೊರಕಬೇಕೆಂದು ತಿಳಿಸಿದರು.
ಪೋಷಕರಿಗೆ ಅರಿವು ಮೂಡಿಸಿ ಮನೆಯಲ್ಲಿಯೇ ಪೋಷಕಾಂಶದ ಆಹಾರವನ್ನು ಸಿದ್ಧಪಡಿಸಿ ಸೇವಿಸಿದರೆ ಉತ್ತಮ ಆರೋಗ್ಯವಾಗಿ ಇರಬಹುದು ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಹಾಜರಿದ್ದ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ನಂಜುಂಡಸ್ವಾಮಿ, ಸಿಏರ್ ಪಿ ಅಧಿಕಾರಿಗಳಾದ ಮಾದೇಗೌಡ ಅವರು, ಮುಖ್ಯ ಶಿಕ್ಷಕರಾದ ವರದೇಶ ಅವರು ಸದಸ್ಯರುಗಳಾದ ಬಿ ಎಸ್ ಮಹದೇವಶೆಟ್ಟಿ, ಜಿ.ಸ್ವಾಮಿ, ರವಿ, ಕೃಷ್ಣಶೆಟ್ಟಿ, ಹಾಜರಿದ್ದರು.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ