ಅಕ್ಟೋಬರ್ 12ರಿಂದ 5ಜಿ ಸೇವೆಗಳು ಆರಂಭ…!

National News:

ಭಾರತದಲ್ಲಿ 5G ಸೇವೆಗಳನ್ನು ಆರಂಭಿಸಲು ದಿನಗಣನೆ ಆರಂಭವಾಗಿದೆ. ಏರ್​ಟೆಲ್ ಮತ್ತು ಜಿಯೊ ಕಂಪನಿಗಳು 5ಜಿ ಸೇವೆ ಒದಗಿಸಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ. ಜನರು ಕಾತರದಿಂದ 5ಜಿ ಸಾಮರ್ಥ್ಯದ ಫೋನ್​ಗಳನ್ನು ಅಮೆಜಾನ್, ಫ್ಲಿಪ್​ಕಾರ್ಟ್​ಗಳಲ್ಲಿ ತಡಕಾಡುತ್ತಿದ್ದಾರೆ. ಮೊಬೈಲ್​ ಹ್ಯಾಂಡ್​ಸೆಟ್ ಮಾಡುವ ಶೋರೂಂಗಳಲ್ಲಿಯೂ ‘ಈ ಫೋನ್​ನಲ್ಲಿ 5ಜಿ ಬರುತ್ತಾ’ ಎನ್ನುವ ಪ್ರಶ್ನೆಯನ್ನು ಗ್ರಾಹಕರು ತೀರಾ ಸಾಮಾನ್ಯ ಎನ್ನುವಂತೆ ಕೇಳುತ್ತಿದ್ದಾರೆ

ಭಾರತದಲ್ಲಿ 5ಜಿ ಸೇವೆಗಳು ಅಕ್ಟೋಬರ್ 12ರಿಂದ ಆರಂಭವಾಗಲಿದೆ. ಇನ್ನೊಂದು ವರ್ಷದಲ್ಲಿ ದೇಶದ ಮೂಲೆಮೂಲೆಗಳಲ್ಲಿ 5ಜಿ ತಂತ್ರಜ್ಞಾನ ಲಭ್ಯವಾಗಿದ್ದು, ಜನರ ಕೈಗೆಟುಕುವ ಬೆಲೆಯಲ್ಲಿ 5ಜಿ ಲಭ್ಯವಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಬೆಂಗಳೂರು, ಅಹಮದಾಬಾದ್, ಛತ್ತೀಸಗಡ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್​ನಗರ್, ಕೊಲ್ಕತ್ತಾ, ಲಖನೌ, ಮುಂಬೈ ಮತ್ತು ಪುಣೆ ನಗರಗಳಲ್ಲಿ 5ಜಿ ಸೇವೆಗಳು ಲಭ್ಯವಾಗಲಿವೆ ಎಂದು ತಿಳಿದು ಬಂದಿದೆ.

2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ…! ಸಿಎಂ ಬೊಮ್ಮಾಯಿ ಹೇಳಿದ್ದೇನು..?

“ಮತ್ತೆ ಸಿಎಂ ಆಗೇ ಆಗ್ತೀನಿ”…! ಕತ್ತಿಗೆ ಖುರ್ಚಿ ಮೇಲಾಸೆ..?!

ಕೃಷಿ ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಣೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

About The Author