Odissa News:
ಆ ಊರಿಗೆ ಕರಿಬೆಕ್ಕು ಉಪಟಳ ಅಧಿಕವಾಗಿದೆ. ಒಡಿಶಾದ ರಾಜಧಾನಿ ಭುವನೇಶ್ವರದ ಶಾಸ್ತ್ರಿನಗರ ಪ್ರದೇಶದ ಸುತ್ತಮುತ್ತ ಕರಿ ಬೆಕ್ಕೊಂದು 25 ಮಂದಿಯ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಕಪ್ಪು ಬೆಕ್ಕು ,ಮಕ್ಕಳು, ಹಿರಿಯರು ಎನ್ನದೆ ಎಲ್ಲರ ಮೇಲೆ ದಾಳಿ ನಡೆಸುತ್ತಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಇನ್ನೂ ಕೆಲವರು ಕೈಯಲ್ಲಿ ಕೋಲು ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮನೆಯ ಮಾಳಿಗೆಯ ಮೇಲೆ ಬಟ್ಟೆ ಒಣಗಿಸಲು ಹೋಗಿದ್ದ ಮಹಿಳೆಯ ಕಾಲಿಗೆ ಕರಿ ಬೆಕ್ಕು ಕಚ್ಚಿ ಪರಾರಿಯಾಗಿದ್ದು, ಬೆಕ್ಕಿನ ದಾಳಿಯಿಂದ ಕಂಗೆಟ್ಟ ಜನ ಮಹಾನಗರ ಪಾಲಿಕೆಗೆ ದೂರು ನೀಡಿ ಬೆಕ್ಕನ್ನು ಸೆರೆಹಿಡಿಯಲು ಮನವಿ ಮಾಡಿದ್ದಾರೆ. ಮಹಾನಗರ ಪಾಲಿಕೆ ಸತತ ಕಾರ್ಯಾಚರಣೆ ಬಳಿಕ ಬೆಕ್ಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಬಿಗಿ ಭದ್ರತೆಯಲ್ಲೂ ಬ್ರಿಟನ್ ರಾಣಿ ಎಲಿಜಬೆತ್ ಶವ ಪೆಟ್ಟಿಗೆ ಮುಟ್ಟಲೆತ್ನಿಸಿದ ಭೂಪ..!
ಆಕೆಗೆ ಜನಿಸಿದ್ದು ಅವಳಿ ಮಕ್ಕಳು ತಂದೆ ಮಾತ್ರ ಬೇರೆ ಬೇರೆ,…! ಹೀಗೂ ಆಗುವುದುಂಟೇ..?!




