ಬೆಂಗಳೂರು: ಓಲಾ, ಊಬರ್ ಆಟೋಗಳು ಪ್ರಾಯಾಣಿಕರ ಬಳಿ ಜಾಸ್ತಿ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪ ಕೇಳಿ ಬರುತ್ತಿತ್ತು. ಇದೀಗ ಸಾರಿಗೆ ಇಲಾಖೆ ಓಲಾ, ಊಬರ್ ಆಟೋಗಳಿಗೆ ದರ ನಿಗದಿ ಮಾಡಿದೆ. ಕನಿಷ್ಠ ದರ ಜತೆಗೆ ಶೇ. 5 ರಷ್ಟು ದರ ನಿಗದಿ ಮಾಡಿದೆ. ಕನಿಷ್ಠ ದರ 30, 40, 60ರೂಪಾಯಿ ಜೊತೆ ಈಗ ಶೇ.5ರಷ್ಟು ಹೆಚ್ಚಳ ಮಾಡಿದೆ. ಶೇ. 5ರಷ್ಟು ಹೆಚ್ಚುವರಿ ದರದ ಜೊತೆ 5% ಜಿಎಸ್ ಟಿ ಸೇರಿಸಲು ಆದೇಶಿಸಿದೆ. ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಹೈಕೋರ್ಟ್ ಗೆ ವರದಿ ಸಲ್ಲಿಸಿದೆ.
ಓಲಾ, ಉಬರ್, ರ್ಯಾಪಿಡೋ ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸಭೆಯಲ್ಲಿ ಕನಿಷ್ಠ 2ಕಿಮೀ ಗೆ 100 ರೂ. ಮಾಡುವಂತೆ ಕಂಪನಿಗಳು ಬೇಡಿಕೆ ಇಟ್ಟಿದ್ದವು,. ಆದರೆ ಸಾರಿಗೆ ಇಲಾಖೆ ಕನಿಷ್ಠ ದರದ ಜೊತೆ ಶೇ.5ರಷ್ಟು ಹೆಚ್ಚಳ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ : ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಗೆ ಜಾಮೀನು
ಮಲೇಷ್ಯಾದ ನೂತನ ಪ್ರಧಾನಿ ಅನ್ವರ್ ಇಬ್ರಾಹಿಂಗೆ ಪ್ರಧಾನಿ ಮೋದಿ ಅಭಿನಂದೆನೆ