Monday, December 23, 2024

Latest Posts

ವಯೋ ವೃದ್ಧರ ಸೆಲ್ಪಿ ಕ್ರೇಜ್…!

- Advertisement -

www.karnatakatv.net: ಹುಬ್ಬಳ್ಳಿ: ವಾಣಿಜ್ಯನಗರಿ ಪಾಲಿಕೆ ಚುನಾವಣೆ ರಂಗು ಪಡೆದುಕೊಳ್ಳುತ್ತಿದ್ದು, ವಯೋ ವೃದ್ಧರು, ವಿಕಲಚೇತನರು ಹಾಗೂ ಅಂಗವಿಕಲರು ಕೂಡ ಉತ್ಸಾಹದಿಂದಲೇ ಮತಗಟ್ಟೆಗಳ ಬಳಿಗೆ ಆಗಮಿಸುತ್ತಿದ್ದಾರೆ.

ಹುಬ್ಬಳ್ಳಿಯ ಪಿ.ವಿ.ದತ್ತ ರೋಟರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯ ಆವರಣದಲ್ಲಿ ವಯೋ ವೃದ್ಧರು ವೀಲ್ ಚೇರ್ ಹಾಗೂ ಕುಟುಂಬಸ್ಥರ ಸಹಾಯದಿಂದ ಮತ ಚಲಾವಣೆಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.

ಇಷ್ಟು ಹೊತ್ತು ತಣ್ಣಗಿದ್ದ ಚುನಾವಣೆ ಮತದಾನ ಪ್ರಕ್ರಿಯೆ ಈಗ ಚುರುಕುಗೊಂಡಿದ್ದು, ಮತದಾರರು ಮತಗಟ್ಟೆಯ ಬಳಿಯಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ. ಅಲ್ಲದೇ ಕುಟುಂಬದ ಸದಸ್ಯರು ಮತ ಚಲಾವಣೆ ಬಳಿಕ ಸೆಲ್ಪಿ ತೆಗೆದುಕೊಳ್ಳುವ ಮೂಲಕ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss