Sunday, April 27, 2025

Latest Posts

ಪುರಾತನ ವಿಗ್ರಹ ವಿದೇಶಕ್ಕೆ ಸಾಗಾಣಿಕೆಗೆ ಯತ್ನ- 1 ಕೆಜಿ ಚಿನ್ನ ವಶ..!

- Advertisement -

www.karnatakatv.net: ಅಕ್ರಮವಾಗಿ ಸಾಗಿಸುತ್ತಿದ್ದ ಪುರಾತನ ಕಾಲದ ವಿಗ್ರಹಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ವಿಮಾನ ನಿಲ್ದಾಣದಲ್ಲಿ ಏರ್ ಪೋರ್ಟ್ ಕಸ್ಟಮ್ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೇಸಿದ್ದು ಪುರಾತನ ಕಾಲದ ವಿಗ್ರಹಗಳನ್ನು ಬೆಂಗಳೂರಿನಿoದ ಜಪಾನ್ ಗೆ ಸಾಗಣೆ ಮಾಡುತ್ತಿರುವ ಯತ್ನವನ್ನು ತಡೆದಿದ್ದಾರೆ. ಈ ವಿಗ್ರಹವನ್ನು ಏರ್ ಕಾರ್ಗೋ ಮೂಲಕ ಅಕ್ರಮವಾಗಿ ವಿದೇಶಕ್ಕೆ ಸಾಗಣಿ ಮಾಡುತ್ತಿರುವಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಪುರಾತನ ಕಲಾ ಸಂಪತ್ತು ಸಾಗಣೆ ನಿಷೇಧ ಖಾಯ್ದೆಯಡಿ ವಿಗ್ರಹ ವಶ ಪಡಿಸಿಕೊಂಡು, ವಿಗ್ರಹ ರಫ್ತು ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿ, ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ದೆಹಲಿ ಮೂಲದ ರಫ್ತುದಾರ ಮಹಾ ವಿಷ್ಣುವಿನ ಈ ಪುರಾತನ ವಿಗ್ರಹವನ್ನು ಜಪಾನ್ ಗೆ ಅಕ್ರಮ ಸಾಗಣೆ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಹಾಗೇ ಇಷ್ಟೇ ಅಲ್ಲದೇ ಇನ್ನೋಂದು ಕಾರ್ಯಾಚರಣೆಯ ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ 1 ಕೆಜಿ ಚಿನ್ನದ ಗೋಲ್ಡ್ ಬಿಸ್ಕೆಟ್ ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಚಿನ್ನದ ಬಿಸ್ಕೆಟ್ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕರನ್ನು ಸಹ ವಶಕ್ಕೆ ತೆಗೆದುಕೊಂದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇಂಡಿಗೋ 6ಇ- 096 ವಿಮಾನದಲ್ಲಿ ಬಂದ ವೇಳೆ ಕಳ್ಳಸಾಗಣೆ ಪತ್ತೆಯಾಗಿದೆ. ಪ್ರಯಾಣಿಕನ ಬಳಿಯಿದ್ದ 15 ಚಿನ್ನದ ಚಿಸ್ಕೆಟ್ ಗಳನ್ನು ಕಸ್ಟಮ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. 49.60 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 15 ಗ್ರಾಂ ತೂಕದ ಚಿನ್ನದ ಬಿಸ್ಕೆಟ್?ಗಳು ಇವಾಗಿವೆ.

ಪ್ರಯಾಣಿಕರ ಬಾಯಿಯೊಳಗೆ ಚಿನ್ನದ ತುಣುಕುಗಳನ್ನು ಇಟ್ಟುಕೊಂಡು ಬಂದಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ. ಬೆಂಗಳೂರು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಅಕ್ರಮ ಚಿನ್ನ ಸಾಗಾಣಿಕೆ ಪತ್ತೆಯಾಗಿದ್ದು, ಪ್ರಯಾಣಿಕನ ಬಾಯಲ್ಲಿ 100 ಗ್ರಾಂ ತೂಕದ 4.9 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಎರಡು ಚಿನ್ನದ ತುಣುಕುಗಳು ಪತ್ತೆಯಾಗಿವೆ.

- Advertisement -

Latest Posts

Don't Miss