- Advertisement -
www.karnatakatv.net: ಇಂಧನ ಅಭಾವ ಎದುರಿಸುತ್ತಿರೋ ಶ್ರೀಲಂಕಾ ತೈಲ ಪೂರೈಕೆ ಸ್ಥಗಿತವಾಗೋದನ್ನ ತಪ್ಪಿಸಲು, ಭಾರತದಿಂದ ಆರ್ಥಿಕ ನೆರವು ಕೋರಿದೆ.
ಶ್ರೀಲಂಕಾದ್ಯoತ ತೈಲ ಪೂರೈಕೆಗೆ ಭಾರತದಿಂದ 3,749 ಕೋಟಿ ರೂ. ಸಾಲ ಪಡೆಯಲಿದ್ದು, ಈ ಕುರಿತಾದ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಮುಂದಿನ ವರ್ಷ ಜನವರಿವರೆಗೂ ಶ್ರೀಲಂಕಾಗೆ ತೈಲ ಪೂರೈಕೆ ನಡೆಯಲಿದೆ. ಜನವರಿ ನಂತರ ತೈಲ ಪೂರೈಕೆ ಯಾಗಬೇಕಾದರೆ ಮೊದಲು ಓಮನ್ ಗೆ ಇಂಧನ ಶುಲ್ಕ ಪಾವತಿಸಬೇಕಿದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರೋ ಶ್ರೀಲಂಕಾ ಭಾರತದ ನೆರವು ಕೋರಿದೆ ಅಂತ ಶ್ರೀಲಂಕಾ ಇಂಧನ ಸಚಿವ ಉದಯ ಗಮನ್ ಪಿಲಾ ಮಾಹಿತಿ ನೀಡಿದ್ದಾರೆ. ಭಾರತದ ಇಂಡಿಯನ್ ಆಯಿಲ್ ಸಂಸ್ಥೆಯ ಅಧೀನದಲ್ಲಿರುವಾ ಲಂಕಾದ ಐಒಸಿ 1 ಲೀ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 5ರೂ.ಗೆ ಏರಿಕೆ ಮಾಡಿತ್ತು.
- Advertisement -