Saturday, July 5, 2025

Latest Posts

 ಧೂಳಿನಿಂದ ಧೂಳಿಗೆ, ಮುಂದಿನ ಹೊಡೆತಕ್ಕೆ ಬೂದಿ ಮಾಡ್ತೀವಿ! : ಕ್ರಿಕೆಟ್‌ ಉಲ್ಲೇಖಿಸಿ ಪಾಕ್‌ಗೆ ಸೇನೆಯ ಖಡಕ್‌ ವಾರ್ನ್..!

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಕಾಕತಾಳೀಯವೆಂಬಂತೆ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಇಂದೇ ಗುಡ್‌ ಬೈ ಹೇಳಿದ್ದಾರೆ. ಅವರ ಅಪ್ಪಟ ಅಭಿಮಾನಿಯಾಗಿರುವ ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಾಯ್‌ ಅವರು ಕ್ರಿಕೆಟ್‌ನಲ್ಲಿನ ಒಂದು ಸನ್ನಿವೇಶವನ್ನು ಉಲ್ಲೇಖಿಸಿ ಪಾಕಿಸ್ತಾನಕ್ಕೆ ವಾರ್ನಿಂಗ್‌ ಮಾಡಿದ್ದಾರೆ.

ಬೂದಿಗೆ ಬೂದಿ, ಧೂಳಿಗೆ ಧೂಳು..

ಇನ್ನೂ ಆಪರೇಷನ್‌ ಸಿಂಧೂರ್‌ ಕುರಿತು ಸುದ್ದಿಗೋಷ್ಠಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುವ ವೇಳೆ ಅವರು, 1970ರ ದಶಕದಲ್ಲಿ ನಡೆದಿದ್ದ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಿರ್ಣಾಯಕ ಪಂದ್ಯದಲ್ಲಿ ಆಸೀಸ್‌ನ ದೈತ್ಯ ಬೌಲರ್‌ಗಳು ಥಾಮ್ಸನ್‌, ಲಿಲ್ಲಿ ಇಬ್ಬರೂ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಪುಡಿಗಟ್ಟಿದ್ದರು ಎಂದು ಉಲ್ಲೇಖಿಸಿದ್ದಾರೆ. ಆ ಪಂದ್ಯದ ಸಂರ್ಭದಲ್ಲಿ ಆಸ್ಟ್ರೇಲಿಯಾ ಒಂದು ಒಕ್ಕಣೆ ಬರೆದುಕೊಂಡಿತ್ತು. ಬೂದಿಗೆ ಬೂದಿ, ಧೂಳಿಗೆ ಧೂಳು.. ಅಂದರೆ ಥಾಮ್ಸನ್‌ ವಿಕೆಟ್‌ ಪಡೆಯದಿದ್ದರೆ, ಲಿಲ್ಲಿ ಖಂಡಿತವಾಗಿಯೂ ಪಡೆಯುತ್ತಾರೆ ಎಂದಿತ್ತು. ಹಾಗೆಯೇ ಭಾರತದ ಹಲವು ಹಂತಗಳ ರಕ್ಷಣಾ ಕೋಟೆಯನ್ನು ಭೇದಿಸಲು ಕನಿಷ್ಠ ಒಂದರಲ್ಲಾದರೂ ಪೆಟ್ಟು ತಿನ್ನುವುದು ಖಚಿತ, ಬಾಲ ಬಿಚ್ಚಿದರೆ ಬೂದಿ ಮಾಡುತ್ತೇವೆ ಎನ್ನುವ ಮೂಲಕ ಮಾರ್ಮಿಕವಾಗಿ ಪಾಕಿಸ್ತಾನಕ್ಕೆ ಅವರು ಎಚ್ಚರಿಕೆ ನೀಡಿದ್ದಾರೆ.

ಪಾಕ್‌ ವಿರುದ್ಧ ಭಾರತ ಸಮರ್ಥವಾಗಿ ಉತ್ತರಿಸಿದೆ..

ಈ ಸಂದರ್ಭದಲ್ಲಿ, ಇಂದು ನಾವೆಲ್ಲರೂ ಕ್ರಿಕೆಟ್ ಬಗ್ಗೆ ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದನ್ನು ನಾನು ಇವತ್ತು ಕೇಳಿದ್ದೇನೆ. ಇತರ ಅನೇಕ ಭಾರತೀಯರಂತೆ, ಅವರು ನನ್ನ ನೆಚ್ಚಿನ ಕ್ರಿಕೆಟಿಗ ಕೂಡ. ಅಲ್ಲದೆ ಪಾಕಿಸ್ತಾನ ನಡೆಸಿದ ಎಲ್ಲಾ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತ ನಿಲ್ಲಿಸಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಪ್ರತಿದಾಳಿ ಮಾಡುವಲ್ಲಿ ತಮ್ಮದೇ ಪರಾಕ್ರಮ ಮೆರೆದಿವೆ ಎಂದು ಶ್ಲಾಘಿಸಿದ್ದಾರೆ. ಪಾಕ್‌ ವಿರುದ್ಧ ಭಾರತದ ಯಶಸ್ಸಿನ ವಿವರಗಳನ್ನು ಹಂಚಿಕೊಂಡು, ಭಾರತ ಪಾಕಿಸ್ತಾನದ ಸ್ಥಳಗಳ ಮೇಲೆ ನಡೆಸಿರುವ ದಾಳಿಗಳ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಒಂದೂ ಕ್ಷಿಪಣಿ ನೆಲಕ್ಕೆ ಬೀಳಲು ಬಿಡಲಿಲ್ಲ..

ಇನ್ನೂ ಭಾರತೀಯ ಸಶಸ್ತ್ರ ಪಡೆಗಳ ಹೋರಾಟವು ಪಾಕಿಸ್ತಾನ ಮಿಲಿಟರಿಯ ವಿರುದ್ಧವಲ್ಲ, ಭಯೋತ್ಪಾದಕರು, ಅವರ ಬೆಂಬಲಿಗರನ್ನು ಹಾಗೂ ಅವರನ್ನು ಪೋಷಿಸುವವರ ವಿರುದ್ಧ ಮಾತ್ರ. ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆಯು ಕೇವಲ ಭಯೋತ್ಪಾದಕರ ವಿರುದ್ಧ ನಡೆಸಲಾಗಿದೆ, ಇದರಲ್ಲಿ ಯಾವುದೇ ನಾಗರಿಕರನ್ನು ಗುರಿಯಾಗಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ಸಹ ಪಾಕಿಸ್ತಾನದ ಸೇನೆಯು ಉಗ್ರರಿಗೆ ಬೆಂಬವಾಗಿ ನಿಲ್ಲುವ ನೀಚ ಕೃತ್ಯ ಮಾಡಿದೆ. ಅಲ್ಲದೆ ಭಯೋತ್ಪಾದಕರನ್ನು ರಕ್ಷಿಸುವ ಸಲುವಾಗಿ ಭಾರತದ ಮೇಲೆ ದಾಳಿಯ ದುಸ್ಸಾಹಸ ಮಾಡಿದೆ, ಅವರಲ್ಲಿ ಯಾವುದೇ ಹಾನಿಯಾದರೆ ಅದಕ್ಕೆ ಪಾಕಿಸ್ತಾನದ ಸೇನೆಯೇ ಹೊಣೆಯಾಗುತ್ತದೆ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಕಿಡಿ ಕಾರಿದ್ದಾರೆ. ಪಾಕಿಸ್ತಾನವು, ಭಾರತದ 26 ಸ್ಥಳಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಒಂದೇ ಒಂದು ಶತ್ರು ರಾಷ್ಟ್ರಗಳ ಕ್ಷಿಪಣಿಗಳನ್ನು ಭಾರತದೊಳೆಗೆ ನುಗ್ಗಲು ಬಿಡಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನಿ ಮಿಲಿಟರಿಯೊಂದಿಗೆ ನಮ್ಮ ಹೋರಾಟವಿಲ್ಲ..

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಯಶಸ್ವಿಯಾಗಿ ಜಂಟಿ ಕಾರ್ಯಾಚರಣೆಗಳನ್ನು ನಡೆಸಿದ ಬಳಿಕ ನಮಗೆ ವಿವರವಾದ ಮಾಹಿತಿ ಸಿಕ್ಕಿತ್ತು. ನಮ್ಮ ಹೋರಾಟ ಭಯೋತ್ಪಾದಕರು ಮತ್ತು ಅವರ ಬೆಂಬಲಿತ ಮೂಲಸೌಕರ್ಯ ಸೌಕರ್ಯ ಒದಗಿಸುವ ವ್ಯವಸ್ಥೆಯ ವಿರುದ್ಧವಷ್ಟೇ. ಬದಲಿಗೆ ಪಾಕಿಸ್ತಾನಿ ಮಿಲಿಟರಿಯೊಂದಿಗೆ ಅಲ್ಲ ಎಂದು ನಾವು ಪುನರುಚ್ಚರಿಸಿದ್ದೇವೆ. ಆದಾಗ್ಯೂ, ಪಾಕಿಸ್ತಾನಿ ಮಿಲಿಟರಿ ಬೇಕಾಗಿಯೇ ಮಧ್ಯಪ್ರವೇಶ ಮಾಡಿದ್ದು ವಿಷಾದಕರ.! ಅಲ್ಲದೆ ಭಯೋತ್ಪಾದಕರ ವಿರುದ್ಧ ಹೋರಾಡುವಂತೆ ಪಾಕಿಸ್ತಾನವೇ ನಮಗೆ ಹೇಳಿದಂತಿತ್ತು ಎಂದು ಅವರು ಟೀಕಿಸಿದ್ದಾರೆ.

ನಮ್ಮ ರಕ್ಷಣಾ ವ್ಯವಸ್ಥೆಯ ಕಾರ್ಯಕ್ಕೆ ಹೆಮ್ಮೆಯಿದೆ..

ಪಾಕಿಸ್ತಾನ ಯಾವುದೇ ನಷ್ಟವನ್ನು ಅನುಭವಿಸಿದರೂ, ಅದು ಅವರ ಸ್ವಂತ ಜವಾಬ್ದಾರಿಯಾಗಿದೆ ಎಂದು ಭಾರ್ತಿ ಹೇಳಿದ್ದಾರೆ. ಅಲ್ಲದೆ ನಮ್ಮ ಎಲ್ಲಾ ಮಿಲಿಟರಿ ನೆಲೆಗಳು ಮತ್ತು ವ್ಯವಸ್ಥೆಗಳು ಯಾವುದೇ ಕಾರ್ಯಾಚರಣೆಯನ್ನು ನಡೆಸಲು ಸನ್ನದ್ದವಾಗಿದೆ. ನಮ್ಮ ಸ್ವದೇಶಿ ನಿರ್ಮಿಕ ಆಕಾಶ್ ಕ್ಷಿಪಣಿಯಂತಹ ವಾಯು ರಕ್ಷಣಾ ವ್ಯವಸ್ಥೆಗಳು ಅದ್ಭುತವಾಗಿ ಕೆಲಸವನ್ನು ಮಾಡಿವೆ. ಈ ವಿಚಾರ ಹೇಳಲು ನಮಗೆ ಹೆಮ್ಮೆಯಿದೆ ಎಂದು ಭಾರ್ತಿ ಸಂತಸ ವ್ಯಕ್ತ ಪಡಿಸಿದ್ದಾರೆ.

ಪಾಕಿಸ್ತಾನ ಎಲ್ಲಾ ವ್ಯವಸ್ಥೆಗಳನ್ನು ದಾಟಿದ್ದರೂ ಸಹ, ಈ ಲೇಯರ್ಡ್ ಗ್ರಿಡ್ ವ್ಯವಸ್ಥೆಯಿಂದ ಅಂದರೆ ಯಾರಾದರೂ ವಿಮಾನ ನಿಲ್ದಾಣ ಅಥವಾ ಲಾಜಿಸ್ಟಿಕ್ಸ್ ವ್ಯವಸ್ಥೆಯಿಂದ ನಿಮ್ಮನ್ನು ನಾಶ ಮಾಡುತ್ತಾರೆ ಎನ್ನುವ ಮೂಲಕ ಕಳೆದ ಅಕ್ಟೋಬರ್ 25, 2024 ರಂದು ಭಾರತೀಯ ಸೇನೆಯು ಉಗ್ರರ ವಿರುದ್ಧದ ನಡೆಸಿದ್ದ ಕಾರ್ಯಾಚರಣೆಯನ್ನು ಅವರು ಉಲ್ಲೇಖಿಸಿದ್ದಾರೆ. ಬಿಎಸ್‌ಎಫ್‌ ಸೇರಿದಂತೆ ಎಲ್ಲ ಪಡೆಗಳಿಗೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.

ಯಾರಿವರು ಥಾಮ್ಸನ್‌ , ಲಿಲ್ಲಿ..?

ಇನ್ನೂ ಲೆಫ್ಟಿನೆಂಟ್‌ ಜನರಲ್‌ ರಾಜೀವ್‌ ಘಾಯ್ ಉಲ್ಲೇಖಿಸಿರುವ ಲಿಲ್ಲೆ ಮತ್ತು ಥಾಂಪ್ಸನ್ ಇಬ್ಬರೂ ಎಪ್ಪತ್ತು ಮತ್ತು 70ರ ದಶಕದಲ್ಲಿ ತಮ್ಮ ಮಾರಕ ಬೌಲಿಂಗ್‌ನಿಂದ ಕ್ರಿಕೆಟ್ ಲೋಕವನ್ನು ಆಳಿದ ಆಸ್ಟ್ರೇಲಿಯಾದ ಇಬ್ಬರು ಶ್ರೇಷ್ಠ ಆಟಗಾರರಾಗಿದ್ದರು. ಬಲಗೈ ವೇಗಿಯಾಗಿದ್ದ ಲಿಲ್ಲಿ, ವೇಗ ಮತ್ತು ಕಾಲ್ಬೆರಳುಗಳನ್ನು ಪುಡಿಮಾಡುವುದಕ್ಕೆ ಹೆಸರುವಾಸಿಯಾಗಿದ್ದರು. ಅಲ್ಲದೆ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾಗಿದ್ದರು. ಅವರು ಆಸ್ಟ್ರೇಲಿಯಾ ಪರ 70 ಟೆಸ್ಟ್ ಪಂದ್ಯಗಳನ್ನು ಆಡಿದ್ದರು, 355 ವಿಕೆಟ್‌ಗಳನ್ನು ಕಬಳಿಸಿದ್ದರು. ನಂತರ ಲಿಟಲ್ ಅವರನ್ನು ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು.

ಲಿಟಲ್ ನಂತೆಯೇ, ಥಾಮ್ಸನ್‌ ಕೂಡ ಬಲಗೈ ವೇಗಿಯಾಗಿದ್ದರು ಮತ್ತು ಅವರ ಅಸಾಧಾರಣ ವೇಗ ಮತ್ತು ಅತ್ಯಂತ ಫಾಸ್ಟ್‌ ಬೌನ್ಸರ್ ಗಳನ್ನು ನೀಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು. ವಾಸ್ತವವಾಗಿ, 1975 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಥಾಮ್ಸನ್‌ ಪ್ರತಿ ಗಂಟೆಗೆ 160.6 ಕಿಲೋಮೀಟರ್‌ಗಳಷ್ಟು ಎಸೆತವು ಆ ಸಮಯದಲ್ಲಿ ಅತ್ಯಂತ ವೇಗವಾಗಿತ್ತು.

ಘಾಯ್‌ ಹೇಳಿದಂತೆ ಏನಾಗಿತ್ತು ಆಗ..?

ನ್ಯೂ ಸೌತ್ ವೇಲ್ಸ್‌ನಲ್ಲಿ ಜನಿಸಿದ್ದ ಈ ವೇಗಿ ಥಾಮ್ಸನ್‌ ಆಸ್ಟ್ರೇಲಿಯಾ ಪರ 51 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 200 ವಿಕೆಟ್‌ಗಳನ್ನು ಪಡೆದಿದ್ದಾರೆ. 1975 ರ ಕ್ರಿಕೆಟ್‌ ಉದ್ಘಾಟನಾ ಪಂದ್ಯವು ವಿಶ್ವಕಪ್‌ನ ಫೈನಲ್ ತಲುಪಿದ ಆಸ್ಟ್ರೇಲಿಯಾ ತಂಡದ ಭಾಗವಾಗಿ ಥಾಮ್ಸನ್ ಕೂಡ ಇದ್ದರು. ಇನ್ನೂ1974-75ರ ಆಸ್ಟ್ರೇಲಿಯಾ ಆರು ಟೆಸ್ಟ್ ಸರಣಿಯಲ್ಲಿ 4-1 ಅಂತರದಿಂದ ಗೆದ್ದಿತ್ತು. ಥಾಮ್ಸನ್ ಮತ್ತು ಲಿಲ್ಲಿ ಕ್ರಮವಾಗಿ 33 ಮತ್ತು 25 ವಿಕೆಟ್‌ಗಳೊಂದಿಗೆ ಸರಣಿಯನ್ನು ಮುಗಿಸಿದರು, ಹೀಗಾಗಿ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದರು. ವಾಸ್ತವವಾಗಿ, ಆ ಸರಣಿಯಲ್ಲಿ ಥಾಮ್ಸನ್‌ ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್‌ ಅನ್ನು ಬಗ್ಗು ಬಡಿದಿದ್ದರು. ಇದೇ ಮಾದರಿಯಲ್ಲಿಯೇ ಘಾಯ್‌ ಅವರು ಪಾಕಿಸ್ತಾನಕ್ಕೆ ತಮ್ಮ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

- Advertisement -

Latest Posts

Don't Miss