Political News: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೂರವಾಣಿ ಸಂಭಾಷಣೆ ನಡೆಸಿ ಮಾತುಕತೆ ನಡೆಸಿದ್ದು, ಪರೋಕ್ಷವಾಗಿ ಪಾಕ್ ಮತ್ತು ಭಾರತ ಯುದ್ಧದ ಬಗ್ಗೆ ಮಾತನಾಡಿರುವ ಮೋದಿ, ಭಾರತ ಯಾರ ಮಧ್ಯಸ್ಥಿಕೆಯನ್ನೂ ಒಪ್ಪಲ್ಲ ಎಂದು ಹೇಳಿದ್ದಾರೆಂದು, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಪ್ರೆಸ್ಮೀಟ್ನಲ್ಲಿ ಹೇಳಿದ್ದಾರೆ.
ಆದರೆ ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ಹೇಳಿಕೆಯನ್ನು ನಂಬಲಸಾಧ್ಯ ಎಂದಿದ್ದಾರೆ. ಪ್ರಧಾನಿ ಮೋದಿ, ಟ್ರಂಪ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರಂತೆ. ಈ ವೇಳೆ ಭಾರತ ಯಾರ ಮಧ್ಯಸ್ಥಿಕೆಯನ್ನು ಒಪ್ಪಲ್ಲ ಎಂದು ಮೋದಿ ಟ್ರಂಪ್ ಅವರಿಗೆ ಕಡ್ಡಿ ಮುರಿದಂತೆ ಹೇಳಿದ್ದಾರಂತೆ. ಹೀಗಂತ ಹೇಳಿರುವುದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ.
ಆದರೆ ವಿಕ್ರಮ್ ಮಿಸ್ರಿ ಹೇಳಿಕೆಯನ್ನು ಯಾವ ಆಧಾರದಲ್ಲಿ ನಂಬುವುದು.? ಯಾಕೆಂದರೆ ಮಿಸ್ರಿ ಈ ಹೇಳಿಕೆ ಕೊಟ್ಟ ಬೆನ್ನಲ್ಲೇ ಟ್ರಂಪ್ ನನ್ನ ಮಧ್ಯಸ್ಥಿಕೆಯಲ್ಲೇ ಕದನ ವಿರಾಮ ಏರ್ಪಟಿತ್ತು ಎಂದು ಪುನರುಚ್ಚರಿಸಿದ್ದಾರೆ. ಜೊತೆಗೆ ಪೆಹಲ್ಗಾಮ್ ಉಗ್ರ ಕೃತ್ಯದ ರೂವಾರಿ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ಗೆ ಔತಣಕೂಟ ಏರ್ಪಡಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಿಸಿದ ವಿಚಾರದಲ್ಲಿ ಮೋದಿಯವರ ನಿಲುವಿನ ಬಗ್ಗೆ ಅನೇಕ ಸಂಶಯಗಳಿವೆ. ಹಾಗಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಪ್ರಧಾನಿಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಜೊತೆಗೆ ಕದನ ವಿರಾಮ ವಿಚಾರದಲ್ಲಿ ಅಮೆರಿಕ ಪಾತ್ರವೇನಿತ್ತು ಎಂದು ದೇಶದ ಜನರಿಗೆ ತಿಳಿಸಬೇಕು. ಈ ಧೈರ್ಯ ಮೋದಿಯವರಿಗೆ ಇದೆಯೇ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಟ್ರಂಪ್ ಔತಣಕೂಟಕ್ಕೆ ಕರೆದ್ರೆ ಯಾರೂ ನಿರಾಕರಿಸೋದಿಲ್ಲ. ಯಾಕಂದ್ರೆ ಅಮೆರಿಕದ ಜತೆ ಎಲ್ಲರಿಗೂ ಉತ್ತಮ ಸಂಬಂಧ ಇರಬೇಕೆಂದು ಆಸೆ ಇದೆ. ಆದರೆ ಮೋದಿ ಮಾತ್ರ, ಪಾಕ್ ಮತ್ತು ಭಾರತದ ಯುದ್ಧದ ಮಧ್ಯೆ ಮೂಗುತೂರಿಸಿರುವ ಟ್ರಂಪ್ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಟ್ರಂಪ್ ನೀಡಿರುವ ಔತಣ ಕೂಟಕ್ಕೆ ತಾನು ಬರುವುದಿಲ್ಲವೆಂದಿರುವ ಮೋದಿ, ಭಾರತ ಯಾರ ಮಧ್ಯಸ್ಥಿಕೆಯನ್ನೂ ಒಪ್ಪಲ್ಲ ಎಂದು ಹೇಳಿದ್ದಾರೆಂದು, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಪ್ರೆಸ್ಮೀಟ್ನಲ್ಲಿ ಹೇಳಿದ್ದಾರೆ.