ಯಾವ ದಿನ ಯಾವ ದೇವರಿಗೆ ಪೂಜಿಸಲಾಗುತ್ತದೆ..?

ಹಿಂದೂ ಧರ್ಮದಲ್ಲಿರುವಷ್ಟು ದೇವರು, ಪದ್ಧತಿಗಳು ಬೇರೆ ಯಾವುದರಲ್ಲೂ ಇಲ್ಲ ಅಂತಾನೇ ಹೇಳಬಹುದು. ಹೀಗಾಗಿ ಒಂದೊಂದು ದಿನ ಒಂದೊಂದು ದೇವರಿಗಂತಲೇ ಮೀಸಲಾಗಿದೆ. ಹಾಗಾದ್ರೆ ಯಾವ ದಿನ ಯಾವ ದೇವರಿಗೆ ಪೂಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೊದಲನೇಯದಾಗಿ ರವಿವಾರ. ರವಿವಾರದ ದಿನ ಸೂರ್ಯದೇವನನ್ನು ಪೂಜಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡುವ ಮೂಲಕ, ನಮಸ್ಕರಿಸಲಾಗುತ್ತದೆ.

ಎರಡನೇಯದಾಗಿ ಸೋಮವಾರ. ಎಲ್ಲರಿಗೂ ಗೊತ್ತಿರುವ ಪ್ರಕಾರ ಸೋಮವಾರ ಶಿವನನ್ನು ಪೂಜಿಸಲಾಗುತ್ತದೆ. ಈ ದಿನ ಶಿವನಾಮಸ್ಮರಣೆ ಮಾಡಿ, ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿದರೆ ಅಥವಾ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರೆ, ನಮ್ಮ ಇಷ್ಟಾರ್ಥಗಳು ಈಡೇರುತ್ತದೆ ಅನ್ನೋ ನಂಬಿಕೆ ಇದೆ.

ಮೂರನೇಯದಾಗಿ ಮಂಗಳವಾರ. ಈ ದಿನ ಹನುಮಂತನ ಜೊತೆಗೆ ಮಹಾಗಣಪತಿಯನ್ನ ಕೂಡ ಪೂಜಿಸಲಾಗುತ್ತದೆ. ಈ ದಿನ ಕೆಲವರು ಮದ್ಯಪಾನ, ಮಾಂಸ ಸೇವನೆ ಮಾಡುವುದಿಲ್ಲ. ಮಂಗಳವಾರದ ದಿನ ಹನುಮನಿಗೆ ವೀಳ್ಯದೆಲೆ ಮಾಲೆ, ತುಳಸಿ ಮಾಲೆ ಅರ್ಪಿಸುವುದು ಅಥವಾ ಎಳನೀರಿನ ಅಭಿಷೇಕ ಮಾಡುವುದು ಉತ್ತಮ ಅಂತಾ ಹೇಳಲಾಗುತ್ತದೆ. ಈ ದಿನ ಗಣೇಶನ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿ ಬರುವುದು ಉತ್ತಮ ಅಂತಾ ಹೇಳಲಾಗುತ್ತದೆ.

ನಾಲ್ಕನೇಯದಾಗಿ ಬುಧವಾರ. ಬುಧವಾರದ ದಿನವೂ ಕೂಡ ಕೆಲವರು ಗಣೇಶನ ಪೂಜೆ ಮಾಡುತ್ತಾರೆ. ಈ ದಿನ ಗಣೇಶನಿಗೆ 21 ಗರಿಕೆ ಅರ್ಪಿಸುವುದರಿಂದ, ಬಾಳೆಹಣ್ಣು, ಹೂವು ಅರ್ಪಿಸುವುದರಿಂದ ಗಣೇಶನ ಕೃಪೆ ಸದಾ ನಮ್ಮ ಮೇಲಿರುತ್ತದೆ ಅನ್ನೋ ನಂಬಿಕೆ ಇದೆ. ಈ ದಿನ ಗಣೇಶನ ಸ್ತೋತ್ರ ಪಠಿಸುವುದು ಉತ್ತಮ. ಇಷ್ಟೇ ಅಲ್ಲದೇ, ವಿಷ್ಣು ಅವತಾರಗಳಾದ, ವೆಂಕಟೇಶ್ವರ ಸ್ವಾಮಿ, ಪಾಂಡುರಂಗ ವಿಠಲನನ್ನೂ ಪೂಜಿಸಲಾಗುತ್ತದೆ.

ಐದನೇಯದಾಗಿ ಗುರುವಾರ. ಗುರುವಾರವಿರುವುದು ಗುರುವಿಗಾಗಿ. ಈ ದಿನ ಸಮಸ್ತ ಜೀವಿಗಳಿಗೆ ಗುರುವಾದ ದಕ್ಷಿಣೇಶ್ವರ, ದತ್ತಾತ್ರೇಯ, ಸಾಯಿಬಾಬಾ, ಗುರು ರಾಯರನನ್ನು ಪೂಜಿಸಲಾಗುತ್ತದೆ. ಅಲ್ಲದೇ, ವಿಷ್ಣು, ಬ್ರಹಸ್ಪತಿಯನ್ನ ಕೂಡ ಪೂಜಿಸಲಾಗುತ್ತದೆ.

ಆರನೇಯದಾಗಿ ಶುಕ್ರವಾರ. ಶುಕ್ರವಾರ ಲಕ್ಷ್ಮೀ ದಿನ. ಈ ದಿನ ಮನೆಯನ್ನ ಸ್ವಚ್ಛಗೊಳಿಸಿ, ಲಕ್ಷ್ಮೀ ದೇವಿಗೆ ಕೆಂಪು ಹೂವು ಹಾಕಿ, ಗೂಡಾನ್ನ ಪ್ರಸಾದ(ಅಥವಾ ಬೆಲ್ಲ) ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ತುಪ್ಪದ ದೀಪ ಹಚ್ಚಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ.

ಕೊನೆಯದಾಗಿ ಶನಿವಾರ. ಶನಿವಾರದ ದಿನ ಶನಿದೇವನ ಜೊತೆ ಹನುಮಂತನ ಪೂಜೆ ಕೂಡ ಮಾಡಲಾಗುತ್ತದೆ. ಈ ದಿನ ಶನಿದೇವರ ದೇವಸ್ಥಾನಕ್ಕೆ ಹೋಗಿ, ಶನಿ ದೇವನಿಗೆ ಎಳ್ಳೆಣ್ಣೆ ಅಥವಾ ಕಪ್ಪು ಎಳ್ಳು ದಾನ ಮಾಡುವುದರಿಂದ ಶನಿ ದೇವನ ಕೃಪೆ ನಮ್ಮ ಮೇಲಾಗುತ್ತದೆ ಅನ್ನೋ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author