Horoscope: ಪ್ರೀತಿ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಅದರಲ್ಲೂ ಇಂದಿನ ಕಾಲದಲ್ಲಿ ಪ್ರೀತಿ ಮಾಡೋದು ಅಂದ್ರೆ, ಆಟವಾಗಿ ಹೋಗಿದೆ. ಕೆಲವರು ಪ್ರೀತಿ ಮಾಡಿ, ತಿಂಗಳಿಗೋ, ಎರಡು ತಿಂಗಳಿಗೋ, ಬ್ರೇಕಪ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವರೆಲ್ಲ ನಿಯತ್ತಾಗಿ ಪ್ರೀತಿಸುವವರು ಅಲ್ಲ. ಬದಲಾಗಿ, ಏನನ್ನೋ ಬಯಸಿ ಪ್ರೀತಿ ಮಾಡುವವರು. ಇಂಥ ಪ್ರೀತಿ ಪರ್ಮನೆಂಟ್ ಆಗಿರೋದಿಲ್ಲ. ಆದರೆ ನೀವು ಪ್ರೀತಿ ಮಾಡುವವರು ಈ ರಾಶಿಯವರೇನಾದ್ರೂ ಆಗಿದ್ದರೆ, ನಿಮ್ಮನ್ನು ಅವರು ಕೊನೆತನಕ ಪ್ರೀತಿಸುತ್ತಾರೆ. ಹಾಗಾದ್ರೆ ಅಷ್ಟು ನಿಯತ್ತಾಗಿರುವ ರಾಶಿಯವರು ಯಾರು ಅಂತಾ ತಿಳಿಯೋಣ ಬನ್ನಿ..
ಮಿಥುನ: ಮಿಥುನ ರಾಶಿಯ ಜನರು ಬರೀ ಜೀವನ ಸಂಗಾತಿಗಷ್ಟೇ ಅಲ್ಲ, ತಮ್ಮ ಸಂಬಂಧಿಕರು, ಮನೆ ಜನ ಎಲ್ಲರಿಗೂ ಪ್ರೀತಿ, ಕಾಳಜಿ ಮಾಡುವವರಾಗಿರುತ್ತಾರೆ. ಅಲ್ಲದೇ, ಕಷ್ಟಕಾಲದಲ್ಲಿರುವವರಿಗೆ ಸಹಾಯ ಮಾಡುವ ಉತ್ತಮ ಗುಣ ಇವರದ್ದಾಗಿರುತ್ತದೆ. ಇಂಥವರನ್ನು ನೀವು ಜೀವನ ಸಂಗಾತಿಯಾಗಿ ಪಡದರೆ, ನೀವು ಲಕ್ಕಿ ಎಂದರ್ಥ.
ಕಟಕ: ಕಟಕ ರಾಶಿಯವರಿಗೆ ಇರುವಷ್ಟು ತಾಳ್ಮೆ ಬೇರೆ ರಾಶಿಯವರಿಗೆ ಇರುವುದಿಲ್ಲ. ಸಹನೆ, ತಾಳ್ಮೆ, ಕಾಳಜಿಯ ಗುಣ ಇವರನ್ನು ಸದಾ ಕಾಪಾಡುತ್ತದೆ. ಕಟಕ ರಾಶಿಯ ಜೀವನ ಸಂಗಾತಿ ನಿಮಗೆ ಸಿಕ್ಕರೆ, ಅದು ನಿಮ್ಮ ಪುಣ್ಯವೆಂದೇ ನೀವು ಭಾವಿಸಬೇಕು. ಏಕೆಂದರೆ, ಎಂಥ ಕಾಲದಲ್ಲೂ ಇವರು ತಮ್ಮ ಜೀವನ ಸಂಗಾತಿಯನ್ನು ಬಿಟ್ಟುಕೊಡುವುದಿಲ್ಲ. ಜೀವನ ಸಂಗಾತಿಯ ಗುಣ ಹೇಗಾದರೂ ಇರಲಿ. ಅವರನ್ನು ಸದಾ ಕಾಲ ಪ್ರೀತಿಸುವ ಗುಣ ಇವರದ್ದಾಗಿರುತ್ತದೆ.
ಸಿಂಹ: ಸಿಂಹ ರಾಶಿಯವರು ಸದಾಕಾಲ ಎಲ್ಲದರಲ್ಲೂ ತಾವೇ ಮುಂದಿರಬೇಕು ಎಂದು ಬಯಸುತ್ತಾರೆ. ಎಲ್ಲ ಕೆಲಸದಲ್ಲೂ ತಾನೇ ಫಸ್ಟ್ ಬರಬೇಕು ಎನ್ನುವ ಆಸೆ ಇವರದ್ದು. ಆದರೆ ಪ್ರೀತಿ ವಿಷಯದಲ್ಲಿ ಇವರು ಸದಾ ಉತ್ತಮರು. ಸಿಂಹ ರಾಶಿಯವರು ನಿಮ್ಮನ್ನು ಪ್ರೀತಿಸಲು ಶುರು ಮಾಡಿದರೆ, ಎಂದಿಗೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ.
ವೃಶ್ಚಿಕ: ವೃಶ್ಚಿಕ ರಾಶಿಯವರು ಯಾವುದಾದರೂ ಕೆಲಸ ಮಾಡಬೇಕು ಅಂದ್ರೆ, ಸತತ ಪ್ರಯತ್ನದಿಂದ ಶ್ರಮವಹಿಸಿ, ಕಷ್ಟಪಟ್ಟು ಕೆಲಸ ಮಾಡಿ, ಯಶಸ್ಸು ಸಾಧಿಸುತ್ತಾರೆ. ಅದೇ ರೀತಿ ಯಾರನ್ನಾದರೂ ಪ್ರೀತಿಸಿದರೆ, ಕಾಳಜಿ ಮಾಡಲು ಶುರು ಮಾಡಿದರೆ, ಎಂದಿಗೂ ಅವರನ್ನು ಬಿಟ್ಟು ಕೊಡುವುದಿಲ್ಲ. ಆದರೆ ಇವರ ಮಾತು ಸ್ವಲ್ಪ ಕಹಿಯಾಗಿ, ಸಿಡುಕಾಗಿರುತ್ತದೆ. ಆದರೆ ಪ್ರೀತಿ, ಕಾಳಜಿ ಅದಕ್ಕಿಂತ ಹೆಚ್ಚಾಗಿರುತ್ತದೆ.




