Monday, April 14, 2025

Latest Posts

One Nation One Election: ಒಂದು ದೇಶ ಒಂದು ಚುನಾವಣೆ ,ಸರ್ಕಾರದಿಂದ ಜೆಪಿಸಿ ರಚನೆ

- Advertisement -

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರ ವಿಪಕ್ಷಗಳ ವಿರೋಧದ ಹೊರತಾಗಿಯು ‘ಒಂದು ದೇಶ ಒಂದು ಚುನಾವಣೆ’ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಬಹುಮತ ಸಹ ಪಡೆಯಿತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳು ಕೂಡಿಕೊಂಡು ಮಸೂದೆ ಪರಿಶೀಲಿಸುವ ಹೊಸ ಜಂಟಿ ಸಂಸದೀಯ ಸಮಿತಿಯ (JPC) ರಚನೆ ಮಾಡಿಕೊಂಡಿವೆ.ಇದರಲ್ಲಿ ಪ್ರಿಯಾಂಕ ಗಾಂಧಿ ಸಹ ಇರಲಿದ್ದಾರೆ.

‘ಒಂದು ದೇಶ ಒಂದು ಚುನಾವಣೆ’ ತಿದ್ದುಪಡಿ ಮಸೂದೆ ಪರಿಶೀಲನೆಗಾಗಿ ರಚನೆಯಾದ ಹೊಸ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ)ಯಲ್ಲಿ ಕೇರಳದ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ, ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಅನಿಲ್ ಬಲುನಿ ಅವರು ಸಮಿತಿಯ (ಜೆಪಿಸಿ) ಸದಸ್ಯರಾಗಿದ್ದಾರೆ.

ಈ ಮೇಲಿನವರು ಸೇರಿದಂತೆ ಈ ಜೆಪಿಸಿ ಸಮಿತಿಯು ಲೋಕಸಭೆಯಿಂದ 21 ಸಂಸದರನ್ನು ಹಾಗೂ ರಾಜ್ಯಸಭೆಯಿಂದ 10 ಸಂಸದರನ್ನು ಒಳಗೊಂಡಿರುತ್ತದೆ. ಹೊಸ ತಿದ್ದುಪಡಿ ಮಸೂದೆಸ ಕುರಿತು ಪರಿಶೀಲಿಸಿ, ಚರ್ಚಿಸಿ ಅಧಿವೇಶನ ಕೊನೆಯ ವಾರದ ಮೊದಲ ದಿನದೊಳಗೆ ಸಂಸತ್ತಿಗೆ ವರದಿ ಸಲ್ಲಿಸಲಿದೆ.

 

 

ಇನ್ನೂ ಜೆಪಿಸಿ ಸಮಿತಿಯ ಇತರ ಸದಸ್ಯರನ್ನು ಯಾರೆಂದು ನೋಡುವುದಾದರೆ, ಸಂಬಿತ್ ಪಾತ್ರ, ಸುಪ್ರಿಯಾ ಸುಲೆ, ಶ್ರೀಕಾಂತ್ ಏಕನಾಥ್ ಶಿಂಧೆ, ಮನೀಶ್ ತಿವಾರಿ ಹಾಗೂ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಸದಸ್ಯರು ಇರಲಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಂವಿಧಾನಕ್ಕೆ ತಿದ್ದುಪಡಿ ತರಬಹುದೇ ಎಂಬುದನ್ನು ನಿರ್ಧರಿಸಲು ಜೆಪಿಸಿ ರಚನೆಯಾಗಲಿದೆ.

ಜೆಪಿಸಿ ವರದಿ ಸಲ್ಲಿಕೆ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ನೀಡೋದಾದ್ರೆ, ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡಿಸಲಾಗಿದೆ. ಇದರ ಸಾಂವಿಧಾನಿಕ ಚೌಕಟ್ಟನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿ ಬುಧವಾರ ರಚನೆ ಆಗಿದೆ. ಇದರಲ್ಲಿ ಮುಂದಿನ ಸಂಸತ್ ಅಧಿವೇಶನದ ಕೊನೆಯ ವಾರದ ಮೊದಲ ದಿನದೊಳಗೆ ಸಮಿತಿಯಿಂದ ವರದಿ ಸಲ್ಲಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಮಂಗಳವಾರ ಲೋಕಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆ ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಮಂಡನೆ ಮಾಡಲಾಯಿತು. ಈ ವೇಳೆ ಸೂಚನೆ ನೀಡಿದ್ದರು ಸಹಿತ ಹಾಜರಾಗದ ಬಿಜೆಪಿಯ ಸುಮಾರು 20 ಸಂಸದರಿಗೆ ಪಕ್ಷವು ನೋಟಿಸ್ ನೀಡಲು ಸಜ್ಜಾಗಿದೆ ಅನ್ನೋದು ಗೊತ್ತಾಗಿದೆ.

ಈ ಬಿಲ್‌ ಮಂಡನೆ ಆದ ಒಂದು ದಿನ ಬಳಿಕ ಜೆಪಿಸಿ ಸಮಿತಿ ರಚಿಸಲಾಯಿತು. ಒಂದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ನಿಯಮ ಒಗ್ಗೂಡಿಸುವ ನಿಯಮ ಇದೆ ಎನ್ನಲಾಗಿದೆ. ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆ ನಡೆಸಲು ವಿಧಾನಸಭಾ ನಿಯಮಗಳನ್ನು ಲೋಕಸಭೆಯೊಂದಿಗೆ ಹೊಂದಾಣಿಕೆ ಮಾಡಬೇಕಿದೆ. ಈ ಸಂಬಂಧ ಕಾನೂನುಗಳನ್ನು ತಿದ್ದುಪಡಿ ಮಾಡಲು ಎರಡನೇ ಶಾಸನದ ಅಂಗೀಕಾರ ಮಾಡಬೇಕಿದೆ.

 

- Advertisement -

Latest Posts

Don't Miss