Political News: ಧರ್ಮಸ್ಥಳ ಕೇಸ್ ವಿಚಾರದಲ್ಲಿ ಬಿಜೆಪಿಯ ಕೆಲ ನಾಯಕರು ಇದು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಅಂತಾ ಹೇಳ್ತಿದ್ದಾರೆ. ಇನ್ನು ಕೆಲವರು ನಾವು ಸೌಜನ್ಯ ಪರ ಹೋರಾಡುತ್ತೇವೆ ಎನ್ನುತ್ತಾರೆ. ಬಿಜೆಪಿಗರ ಈ ನಡೆಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಒಂದು ಸೈದ್ಧಾಂತಿಕ ಬದ್ಧತೆ ಇಲ್ಲದೆ ಎಲ್ಲವನ್ನೂ ರಾಜಕೀಯ ‘ಲಾಭ’ದ ಲೆಕ್ಕಾಚಾರದಲ್ಲಿ ನೋಡಿದರೆ ಹೇಗಿರುತ್ತದೆ? ಈ ಬಿಜೆಪಿ ನಾಯಕರ ಬೀದಿ ನಾಟಕಗಳಂತೆ ಇರುತ್ತದೆ. ಬಿಜೆಪಿಯ ಬಣಗಳು- ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆದಂತೆ ಪರಸ್ಪರ ವಿರುದ್ಧ ದಿಕ್ಕಿನಲ್ಲೇ ಸಾಗುವುದು.
ಒಂದು ಸೌಜನ್ಯ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದರೆ, ಇನ್ನೊಂದು ಧಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹೋರಾಡುತ್ತದೆ. ಒಂದು ಬಣ, ಸೌಜನ್ಯ ಮನೆಗೆ ಭೇಟಿ ನೀಡಿ ನ್ಯಾಯ ಕೊಡಿಸುವ ನಾಟಕವಾಡಿದರೆ, ಇನ್ನೊಂದು ಬೀದಿಯಲ್ಲಿ ಧರ್ಮ ರಕ್ಷಣೆಯ ಹಾಡು, ಕುಣಿತ ಮಾಡುತ್ತದೆ ಎಂದು ಖರ್ಗೆ ಹಾಸ್ಯ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಬಣಗಳಿಗೆ ಬೇಕಿರುವುದು ‘ಸೌಜನ್ಯ’ ಕೇಸಿನ ನ್ಯಾಯವೂ ಅಲ್ಲ. ಧರ್ಮ ರಕ್ಷಣೆಯೂ ಅಲ್ಲ. ತಮ್ಮ ತಮ್ಮ ಬಣದ ಶಕ್ತಿ ಪ್ರದರ್ಶನವಷ್ಟೇ! ಎಂದು ಬಿಜೆಪಿ ಬಣಗಳ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

