Tuesday, September 23, 2025

Latest Posts

ಕನ್ನಡ ‘ಬಿಗ್ ಬಾಸ್’ ಹೌಸ್ ಗೆ ಎಂಟ್ರಿ ಕೊಡಲಿದ್ದಾರಂತೆ ‘ಆ’ ರಾಜಕಾರಣಿ….? ಕಿಚ್ಚನಿಗೂ ಪರಿಚಯ ಇದ್ದಾರಂತೆ ಅವರು…!

- Advertisement -

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗೋದಿಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಇದೇ ಭಾನುವಾರದಂದು ಅದ್ಧೂರಿಯಾಗಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ ಶುರುವಾಗ್ತಿದೆ, ಈಗಾಗ್ಲೇ ಕೆಲವೊಂದಷ್ಟು ಸಂಭಾವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಟಿಕ್ ಟಾಕ್ ಸ್ಟಾರ್ಸ್, ಕಿರುತೆರೆ ಸ್ಟಾರ್ಸ್, ಸಿಂಗರ್ ಹೀಗೆ ವಿವಿಧ ವಿಭಾಗದ ಕಲಾವಿದರ ಹೆಸ್ರು ಕೇಳಿ ಬಂದಿತ್ತು. ಆದ್ರೆ ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಈ ಬಾರಿಯ ದೊಡ್ಮನೆ ಆಟದಲ್ಲಿ ಓರ್ವ ರಾಜಕೀಯ ನಾಯಕರು ಭಾಗಿಯಾಗಲಿದ್ದಾರಂತೆ.

ಇವತ್ತು ಬಿಗ್ ಬಾಸ್ ಸೀಸನ್-8ನೇ ಆವೃತ್ತಿ ಆರಂಭದ ಕುರಿತು ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಬ್ಯುಸಿನೆಸ್‌ ಹೆಡ್ ಪರಮೇಶ್ವರ್ ಗುಂಡ್ಕಲ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ಜರುಗಿತು. ಈ ವೇಳೆ ಪರಮೇಶ್ವರ್ ಗುಂಡ್ಕಲ್, ಈ ಬಾರಿಯ ಬಿಗ್ ಬಾಸ್ ನಲ್ಲಿ ರಾಜಕಾರಣಿ ಒಬ್ಬರು ಇರಲಿದ್ದಾರೆ ಎಂದು ಹೇಳಿದರು.

ಆ ರಾಜಕಾರಣಿ ಬಗ್ಗೆ ಸ್ವಲ್ಪ ಹಿಂಟ್ ಕೊಟ್ಟ ಅವರು, ಸುದೀಪ್ ಅವರ ಪರಿಚಯವಿದೆ ಎಂದು ಹೇಳಿ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿದ್ರು. ಸದ್ಯ ಯಾರು ಆ ರಾಜಕಾರಣಿ ಅನ್ನೋ ಚರ್ಚೆ ನಡೆಯುತ್ತಿದೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಕೀಯ ನಾಯಕರೊಬ್ಬರು ಭಾಗಿಯಾಗ್ತಿರುವುದು ಕಿರುತೆರೆ ಪ್ರೇಕ್ಷಕರಿಗೆ ಕುತೂಹಲ ದುಪ್ಪಟ್ಟು ಮಾಡಿದೆ.

- Advertisement -

Latest Posts

Don't Miss