Health tips:
ಈರುಳ್ಳಿಯಿಲ್ಲದೇ ಯಾರೂಕೂಡ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಹಸಿಯಾಗಿ ಹಾಗೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಈರುಳ್ಳಿಯಲ್ಲಿ ಸಲ್ಫರ್ ಅಂಶ ವಿರುವುದ್ರಿಂದ ನೈಸರ್ಗಿಕವಾಗಿ ರಕ್ತವನ್ನು ತೆಳುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹೃದಯ ಘಾತದಂತಹ ಅಪಾಯಗಳು ಉಂಟಾಗುವುದಿಲ್ಲ .
ಈರುಳ್ಳಿಯಲ್ಲಿ ಜೀವಸತ್ವಗಳು, ಸೋಡಿಯಂ, ಪೊಟ್ಯಾಶಿಯಮ್, ಫೋಲೇಟ್‌ಗಳು, ವಿಟಮಿನ್ ಎ, ಸಿ ಮತ್ತು ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕ ಇನ್ನು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರಾಚೀನ ಕಾಲದಿಂದಲೂ ಈರುಳ್ಳಿಯನ್ನು ಕೇವಲ ಆಹಾರಕ್ಕೆ ಮಾತ್ರವಲ್ಲದೆ, ಔಷಧೀಯ ಗುಣಗಳನ್ನು ಹೊಂದಿದೆ ಎಂದು ಗುರುತಿಸಲಾಗಿದೆ. ಇದು ತಲೆನೋವು, ಹೃದ್ರೋಗ, ಬಾಯಿ ಹುಣ್ಣುಗಳಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ.
ಈರುಳ್ಳಿಯಲ್ಲಿರುವ ಉರಿಯೂತದ ಕ್ರಿಯೆಯು ಶ್ವಾಸ ನಾಳದ ಸ್ನಾಯುಗಳನ್ನು ಸಡಿಲ ಗೊಳಿಸುತ್ತದೆ. ಮತ್ತು ಅಸ್ತಮಾವನ್ನು ಕಡಿಮೆ ಮಾಡುತ್ತದೆ ಕೆಮ್ಮು ,ಶೀತ, ಜ್ವರ ,ಸೀನು ,ಮೂಗು ಕಟ್ಟುವಿಕೆಯನ್ನು ಈರುಳ್ಳಿ ಕಡಿಮೆ ಮಾಡುತ್ತದೆ ಹಸಿ ಈರುಳ್ಳಿಯನ್ನು ದಿನಕ್ಕೊಂದು ಸೇವಿಸುವುದರಿಂದ ಮಲಬದ್ದತೆ ಕಡಿಮೆಯಾಗುತ್ತದೆ . ಇದು antimicrobial ಗುಣಗಳನ್ನು ಹೊಂದಿದೆ ಕ್ಷಯರೋಗಕ್ಕೆ ಕಾರಣವಾಗಿರುವ ಮೈಕ್ರೋ ಬ್ಯಾಕ್ಟೀರಿಯಾವನ್ನು ಇದು ನಿಷ್ಕ್ರಿಯ ಗೊಳಿಸುತ್ತದೆ ಮತ್ತು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .
ಹಸಿ ಈರುಳ್ಳಿ ಸೇವಿಸುವುದರಿಂದ ಹಾಲುಣಿಸುತ್ತಿರುವ ತಾಯಿಯರಿಗೆ ಹಾಲಿನ ಉತ್ಪತ್ತಿ ಹೆಚ್ಚುತ್ತದೆ .ಮನುಷ್ಯರಲ್ಲಿ ಉಂಟಾಗುವ ಕೆಲವೊಂದು ಅಲರ್ಜಿ ಸಮಸ್ಯೆಗಳು ,ಕಣ್ಣಿನ ಕೆರೆತ, ಗಂಟಲು ಕೆರೆತ ಮತ್ತು ನೆಗಡಿ. ಇವುಗಳಿಗೆ ಕಾರಣವೆಂದರೆ ‘ ಹಿಸ್ಟಮಿನ್ ‘ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಬಿಡುಗಡೆಯಾಗುವುದು. ಇಂತಹ ಅಲರ್ಜಿ ಸಮಸ್ಯೆಗಳಿಂದ ಪಾರಾಗಬೇಕೆಂದರೆ ಮೊದಲು ಈ ಹಿಸ್ಟಮಿನ್ ಹಾರ್ಮೋನಿನ ಬಿಡುಗಡೆಯನ್ನು ನಿಲ್ಲಿಸಬೇಕು. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿರುವ 1ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಅಲರ್ಜಿ ಸಮಸ್ಯೆಯನ್ನು ದೂರ ಮಾಡಲು ಔಷಧಿಗಳು ಮಾಡುವ ಕೆಲಸವನ್ನು ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶ ಮಾಡುತ್ತದೆ. ದೇಹದಲ್ಲಿ ಬಿಡುಗಡೆಗೊಳ್ಳುವ ಹಿಸ್ಟಮಿನ್ ಹಾರ್ಮೋನಿನ ಜೊತೆಗೆ ಕೆಲವೊಂದು ಇನ್ಫಾಮೇಟರಿ ಮತ್ತು ಅಲರ್ಜಿಗೆ ಕಾರಣವಾಗುವಂತಹ ಅಂಶಗಳು ಬಿಡುಗಡೆಯಾಗುವುದನ್ನು ತಡೆಯುತ್ತದೆ.