ರಾಜ್ಯ ಸುದ್ದಿ: ದಿನಬಳಕೆ ವಸ್ತುಗಳ ಜೊತೆಗೆ ತರಕಾರಿಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ ಇಷ್ಟುದಿನ ಕೆಂಪು ಸುಂದರಿ ಎಂದೆ ಬಿರುದು ಪಡೆದಿದ್ದ ಟೊಮಾಟೋ ಬೆಲೆ ಗಗನಕ್ಕೆ ಏರಿ ನಂತರ ಪಾತಾಳಕ್ಕೆ ಇಳಿದದ್ದೂ ಆಗಿದೆ. ಆದರೆ ಈಗ ಉಳ್ಳಾಗಡ್ಡೆ ಬೆಲೆ ದಿನದಿಂದ ದಿನಕ್ಕೆ ರಾಕೇಟ್ ವೇಗದಲ್ಲಿ ಏರಿಕೆಯಾಗುತ್ತಿದೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಳ್ಳಾಗಡ್ಡೆ ಬೆಳೆಯುತ್ತಾರೆ. ಆದರೆ ಇನ್ನು ಕಟಾವಿಗೆ ಬಂದಿಲ್ಲ.ರಾಜ್ಯದಲ್ಲಿ ಮೊದಲು ಅಕ್ಟೋಬರ್ ತಿಂಗಳಲ್ಲಿ ಚಿತ್ರದುರ್ಗ ಚಳ್ಳಕೆರೆ. ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಉಳ್ಳಾಗಡ್ಡೆ ಮಾರುಕಟ್ಟೆಗೆ ಬರುತ್ತಿತ್ತು ನವೆಂಬರ್ ನಲ್ಲಿ ಗದಗ, ವಿಜಯಪುರ ಜಿಲ್ಲೆಯಿಂದ ಮಾರುಕಟ್ಟೆಗೆ ತರಲಾಗುತ್ತಿದೆ ಆದರೆ ಈ ಬಾರಿ ಪ್ರತಿವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉಳ್ಳಾಗಡ್ಡೆ ಬಳೆಯಲಾಗಿದೆ. ಹಾಗೂ ನಾಸಿಕ್ ಮತ್ತು ಪುಣೆಯಿಂದ ಆಗುತ್ತಿದೆ ಪೂರೈಕೆ ಸ್ಥಗಿತವಾದ ಕಾರಣ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡೆ ಪೂರೈಕೆ ಕಡಿವೆ ಮತ್ತು ಬೇಡಿಕೆ ಜಾಸ್ತಿಯಾಗಿದೆ. ಈ ಕಾರಣದಿಂದಾಗಿ ಉಳ್ಳಾಗಡ್ಡೆ ಬೆಲೆ ಜಾಸ್ತಿ ಆಗುತ್ತಿರುವುದಕ್ಕೆ ಕಾರಣವಾಗುತ್ತಿದೆ.
ಮೊದಲು 15 ರಿಂದ 20 ರೂ ಗೆ ಸಿಗುತ್ತಿದ್ದ ಈರುಳ್ಳಿ ಈಗ ಮಾರುಕಟ್ಟೆಯಲ್ಲಿ40 ರಿಂದ 45 ಕ್ಕೆ ಜಾಸ್ತಿಯಾಗಿದೆ