Sunday, April 20, 2025

Latest Posts

ಬಲಿತ ಭ್ರಷ್ಟಾಚಾರಿಗಳನ್ನ ಮಟ್ಟಹಾಕಲು ಇವರಿಂದ ಮಾತ್ರ ಸಾಧ್ಯವಾಗಬಹುದು

- Advertisement -

ಸಂಪಾದಕೀಯ :  ಶಿವಕುಮಾರ್ ಬೆಸಗರಹಳ್ಳಿ

ಬೆಂಗಳೂರು : ಈ ಹಿಂದೆ ಹೋರಾಟಕ್ಕೆ, ಹೋರಾಟಗಾರರನ್ನ ಕಂಡ್ರೆ ಸರ್ಕಾರ ನಡುಗುತ್ತಿತ್ತು. ಅಧಿಕಾರಿಗಳು ಹೆದರುತಿದ್ರು. ಆದ್ರೆ, ಕಾಲ ಕ್ರಮೇಣ ಹೋರಾಟ ಮಾರಾಟವಾಗೋಕೆ ಶುರುವಾಯ್ತೋ ಭ್ರಷ್ಟಾಚಾರಿಗಳ ಆರ್ಭಟ ಜೋರಾಯ್ತು.  ಜನ ಹೋರಾಟಗಾರರನ್ನ ಕಂಡ್ರೆ ಎಷ್ಟಕ್ಕೆ ಸೇಲ್ ಆಗಿದ್ದಾನೆ ಅಂತ ಪಕ್ಕಾ ಹೇಳುವಷ್ಟರ ಮಟ್ಟಿಗೆ ಬಂದುಬಿಟ್ಟಿದ್ದಾರೆ. ಯಾಕಂದ್ರೆ ಹೋರಾಟದ ಹೆಸರಲ್ಲಿ ಸಾವಿರರು ಜನ ಬಂಗ್ಲೆ ಕಟ್ಟಿಕೊಂಡಿದ್ದಾರೆ, ನೂರಾರು ಎಕರೆ ಜಮೀನು ಮಾಡಿಕೊಂಡಿದ್ದಾರೆ. ಕನ್ನಡದ ಹೆಸರಲ್ಲಿ ಕೋಟ್ಯಂತರ ಮಾಡಿ್ದ ಬಹಳ ನಾಯಕರು ಈಗ ನಮ್ಮ ಮುಂದಿದ್ದಾರೆ. ರೈತರ ಹೆಸರಲ್ಲಿ ಲೂಟಿ ಮಾಡಿದವರು ನಮ್ಮ ಮುಂದೆ ಆಗಿಂದ್ದಾಗ್ಗೆ ಬೆತ್ತಲಾಗ್ತಿದ್ದಾರೆ. ಜನ ಹೋರಾಗಾರರ ಬಗ್ಗೆ ಬೇಸತ್ತು ಭ್ರಷ್ಟಾಚಾರಿಗಳ ಜೊತೆ ಸಂಘರ್ಷ ಮಾಡಿಕೊಳ್ಳದೆ ಚೌಕಾಸಿ ಮಾಡಿ ಹಣ ಕೊಟ್ಟು ಕೆಲಸ ಮಾಡಿಸಿಕೊಂಡು ಮನೆ ಸೇರಿಕೊಳ್ತಿದ್ದಾರೆ..

 

ಕರ್ನಾಟಕ ರಾಷ್ಟ್ರ ಸಮಿತಿ ಕನ್ನಡಿಗರಿಗೆ ಹೊಸ ಆಶಾಕಿರಣ

 

ರವಿಕೃಷ್ಣ ರೆಡ್ಡಿ ಮೊದಮೊದಲು ಭ್ರಷ್ಟಾಚಾರಿಗಳ ವಿರುದ್ಧ ಸಮರ ಸಾರಿದಾಗಿ ಇವರು ಪೇಮೆಂಟ್ ಗಿರಾಕಿ ಅಂತ ಎಲ್ಲರೂ ಭಾವಿಸಿದ್ರು.  ಮನುಷ್ಯ ಹಣ ಮಾಡಲೇ ಬೇಕೆಂದಿದ್ದರೆ ವಿದೇಶದಲ್ಲೇ ಇರಬಹುದಿತ್ತು.. ಆದ್ರೆ, ವಿದೇಶದಲ್ಲಿದ್ದು ಕರ್ನಾಟಕಕ್ಕೆ ವಾಪಸ್ ಬಂದು ಹೋರಾಟ ಮಾಡಿ ಹಣ ಮಾಡುವ ಅವಶ್ಯಕತೆ ಏನಿದೆ ಎಂದು ಮೊದಮೊದಲು ಅನಿಸಿತ್ತು, ಆದರೂ ಹೋರಾಟ ಕೋಟಿ ಲೆಕ್ಕದಲ್ಲಿ ಮಾರಾಟವಾಗಿರುವಾಗ ರವಿಕೃಷ್ಣ ರೆಡ್ಡಿ ಕೂಡ ಕೋಟಿ ಲೆಕ್ಕದಲ್ಲಿ ಪ್ರೊಟೆಸ್ಟ್ ಬ್ಯುಸಿನೆಸ್ ಮಾಡಲು ಬಂದಿರಬಹುದು ಅಂತ ನಾನು ಭಾವಿಸಿದ್ದೆ. ಆದ್ರೆ, ದಿನಕಳೆದಂತೆ ರವಿಕೃಷ್ಣ ರೆಡ್ಡಿಯವರ  ಹೋರಾಟದ ಸ್ವರೂಪ ಜನರಿಗೆ ಅರ್ಥವಾಗ್ತಿದೆ.  ಭ್ರಷ್ಟರು ಚಳಿಯಲ್ಲೂ ಬೆವರುತ್ತಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಹೋರಾಟ ಸ್ವರೂಪ ಕಂಡು ದಂಗಾಗಿ ಹೋಗಿದ್ದಾರೆ. ಕೆಆರ್ ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಸಾವಿರಾರು ಕೇಸ್ ಗಳನ್ನ ದಾಖಲು ಮಾಡಲಾಗಿದೆ. ಅವರ ಕೊಲೆ ಯತ್ನ ಕೂಡ ನಡೆದಿದೆ. ಈ ಸರ್ಕಾರಿ ನೌಕರರು ಸರ್ಕಾರದ ಮೇಲೆ ಒತ್ತಡ  ಏರಿ ಸರ್ಕಾರಿ ಕಚೇರಿಗಳನ್ನ ಸಾರ್ವಜನಿಕರು ವಿಡಿಯೋ ಚಿತ್ರೀಕರಣ ಮಾಡೋದನ್ನ ನಿಷೇಧಿಸಿ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ರು. ಆದ್ರೆ, ಜನರ ಟೀಕೆಗೆ ಹೆದರಿ ರಾತ್ರೋರಾತ್ರಿ ಅರೆಬರೆ ಕನ್ನಡದಲ್ಲಿ ಚಿತ್ರಿಕರಣ ನಿಷೇಧ ಆದೇಶವನ್ನ ವಾಪಸ್ ಪಡೆಯಲಾಯಿತು. ಒಟ್ಟಾರೆ ಕರ್ನಾಟಕ ರಾಷ್ಟ್ರ ಸಮಿತಿಯ ಹೋರಾಟ ಮಾರಾಟವಾಗಿಲ್ಲ. ನಿಜವಾಗಿಯೂ ಭ್ರಷ್ಟರ ಹುಟ್ಟಡಗಿಸಲು ಉದಯವಾಗಿರುವ ಸಂಘಟನೆ ಅನ್ನೋದು ಜನರ ಅರಿವಿಗೆ ಬಂದಿದೆ.  ಆದ್ರೆ, ವಿಧಾನಸೌಧದಲ್ಲಿ ಕುಳಿತ ತಿಮಿಂಗಿಲ ರೂಪದ ಭ್ರಷ್ಟರು ಬದಲಾಗುವವ ವರೆಗೆ ಈ ರಾಜ್ಯ ಈ ದೇಶ ಉದ್ಧಾರವಾಗಲ್ಲ. ಯಾಕಂದ್ರೆ ಅಧಿಕಾರಿಗಳ ಭ್ರಷ್ಟಾಚಾರ ನಿಲ್ಲೋದು ಶಾಸಕರು, ಸಂಸದರ ಸ್ವರೂಪದ ಭ್ರಷ್ಟಾಚಾರ ದೂರವಾದಾಗ ಮಾತ್ರ. ಹೀಗಾಗಿ ವಿಧಾನಸಭೆ, ಲೋಕಸಭೆ ಸೇರಿದಂತೆ ಜನಪ್ರತಿನಿಧಿಗಳಾಗುವವರು ರವಿಕೃಷ್ಣಾರೆಡ್ಡಿಯಂತ ತಂಡ ಮನಸ್ಥಿತಿಯವರು ಆಯ್ಕೆಯಾದಾಗ ಮಾತ್ರ.

- Advertisement -

Latest Posts

Don't Miss