Friday, July 4, 2025

Latest Posts

ಕೇಂದ್ರ ಸರ್ಕಾರದ ವಕ್ಫ್‌ ಮಸೂದೆಗೆ ವಿರೋಧ.. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ರಾಜ್ಯದ ಸೆಡ್ಡು..

- Advertisement -

Political news: ಕೇಂದ್ರದ ಎನ್‌ಡಿಎ ಸರ್ಕಾರ ತಿದ್ದುಪಡಿಗೆ ಮುಂದಾಗಿರುವ ವಕ್ಫ್‌ ಮಸೂದೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಸೆಡ್ಡು ಹೊಡೆಯಲು ಮುಂದಾಗಿದ್ದು, ಮಸೂದೆಯನ್ನು ಹಿಂಪಡೆಯುವಂತೆ ವಿಧಾನಮಂಡಲದ ಎರಡೂ ಸದನಗಳಲ್ಲಿ ನಿರ್ಣಯ ಮಂಡನೆಗೆ ಸಿದ್ದವಾಗಿದೆ. ಸಂಸತ್ತಿನ ಜಂಟಿ ಸಮಿತಿಯು ಜೆಪಿಸಿಯ 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಗೆ 1995ರ ಕೇಂದ್ರ ಕಾಯ್ದೆ ಸಂಖ್ಯೆ 43, 14ರ ತಿದ್ದುಪಡಿಗಳನ್ನು ಪ್ರಸ್ತಾಪಿಸಿರುವ ವರದಿಯು ಲೋಕಸಭೆಯಲ್ಲಿ ಈಗಾಗಲೇ ಮಂಡನೆಯಾಗಿದೆ.

ಇನ್ನೂ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ನಿರ್ಣಯ ಅಂಗೀಕರಿಸಿವೆ. ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ಮತ್ತು ವಿರೋಧ ಪಕ್ಷ ಯುಡಿಎಫ್‌ ರಂಗಗಳು ವಿಧಾನಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಅಂಗೀಕರಿಸಿದರೆ, ಪಶ್ವಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ವಿರೋಧದ ನಡುವೆ ಅಲ್ಲಿನ ಟಿಎಂಸಿ ಸರ್ಕಾರ ಧ್ವನಿಮತದಿಂದ ನಿರ್ಣಯ ತೆಗೆದುಕೊಂಡಿದೆ.

ರಾಜ್ಯದ ನಿಲುವೇನು..?

ಅಲ್ಲದೆ 1995ರ ವಕ್ಫ್ ಕಾಯ್ದೆಗೆ 2013ರಲ್ಲಿ ತಂದಿದ್ದ ತಿದ್ದು‍ಪಡಿಯೂ ಸೇರಿದಂತೆ ಈವರೆಗೆ ಮಾಡಿರುವ ತಿದ್ದುಪಡಿಗಳ ಪ್ರಕಾರ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಚರ ಅಥವಾ ಸ್ಥಿರ ಆಸ್ತಿ ಮತ್ತು ವಸ್ತುಗಳ ಪಾಲನೆಯನ್ನು ರಾಜ್ಯ ವಕ್ಫ್‌ ಮಂಡಳಿಗಳು ಮಾಡುತ್ತಿವೆ. ಅಲ್ಲದೆ ಕಾಯ್ದೆಯಲ್ಲಿ ನಮೂದಿಸಲಾಗಿರುವ 28ರ ಅಂಶವು ದತ್ತಿ ಸಂಸ್ಥೆಗಳು, ಧಾರ್ಮಿಕ ದತ್ತಿ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಸಮವರ್ತಿ ಪಟ್ಟಿಯಲ್ಲಿವೆ. ಇನ್ನೂ ವಕ್ಫ್‌ ಎನ್ನುವುದು ಒಂದು ವಿಶೇಷ ಪರಿಕಲ್ಪನೆ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಮಾತ್ರ ಒಳಪಡುವುದಿಲ್ಲ. ಅಂದಹಾಗೆ ಈ ಕಾಯ್ದೆಗೆ ತಿದ್ದುಪಡಿ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಉದ್ದೇಶಿತ ವಕ್ಫ್‌ ಕಾಯ್ದೆಯ ತಿದ್ದುಪಡಿಯು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸುತ್ತದೆ ಎಂಬುದು ರಾಜ್ಯದ ಸರ್ಕಾರದ ನಿಲುವಾಗಿದೆ.

ಹೀಗಾಗಿ ಸಂವಿಧಾನದ 26ನೇ ವಿಧಿಯು ವಕ್ಫ್‌ ದತ್ತಿಗಳು ಮತ್ತು ವಕ್ಫ್‌ ಸಂಸ್ಥೆಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಆಯಾ ಧಾರ್ಮಿಕ ಸಮುದಾಯಗಳಿಗೆ ಅದರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅಸ್ವಿತ್ವದಲ್ಲಿರುವ ವಕ್ಫ್ ಕಾಯ್ದೆಯು 1954ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ್ದ ಬಲವಾದ ಕಾನೂನು ಆಗಿದೆ. ಬಳಿಕ 1995ರಲ್ಲಿ ಈ ಕಾಯ್ದೆಗೆ ಸಮಗ್ರವಾಗಿ ತಿದ್ದುಪಡಿ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಉದ್ದೇಶಿತ ತಿದ್ದುಪಡಿಯು ಕಾಯ್ದೆಯ ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಧಕ್ಕೆ ಉಂಟು ಮಾಡುತ್ತದೆ. ಯಾಕೆಂದರೆ, ವಕ್ಫ್ ಮಂಡಳಿಯಲ್ಲಿ ಪ್ರಜಾಪ್ರಭುತ್ವದಿಂದ ಚುನಾಯಿತರಾದ ಸದಸ್ಯರು ಇರುತ್ತಾರೆ. ಆದರೆ, ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಮೂಲಭೂತ ಹಕ್ಕುಗಳು, ಸ್ವಾತಂ‌ತ್ರ್ಯ, ಒಕ್ಕೂಟ ವ್ಯವಸ್ಥೆ, ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ನಾಗರಿಕ ನಂಬಿಕೆಯ ಹಕ್ಕನ್ನು ರಕ್ಷಿಸಿಕೊಳ್ಳಬೇಕಾಗಿದೆ. ಈ ಎಲ್ಲ ಕಾರಣಗಳಿಂದ, ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ನಿಬಂಧನೆಗಳನ್ನು ಒಳಗೊಂಡಿರುವ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲೇಬಾರದು ಎಂದು ಎರಡೂ ಸದನದಲ್ಲಿ ನಿರ್ಣಯ ಮಂಡಿಸಿ ವಿನಂತಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯಗಳ ಅಧಿಕಾರ ಕಸಿಯುವ ಹುನ್ನಾರ..

ಇನ್ನೂ ಕೇಂದ್ರ ಸರ್ಕಾರದ ವಕ್ಪ್‌ ತಿದ್ದುಪಡಿಯು ದೇಶದಲ್ಲಿನ ರಾಜ್ಯಗಳ ಅಧಿಕಾರವನ್ನು ವಕ್ಫ್‌ ವಿಚಾರದಲ್ಲಿ ಕಸಿದುಕೊಳ್ಳಲು ನಡೆಸುತ್ತಿರುವ ಹುನ್ನಾರದ ಭಾಗವಾಗಿದೆ. ಒಕ್ಕೂಟದ ವಿಚಾರದಲ್ಲಿನ ಸಾಂವಿಧಾನಿಕ ತತ್ವಗಳು ಹಾಗೂ ವಕ್ಫ್‌ನ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಮಂಡಳಿಗಳಿಗೆ ವಿರುದ್ಧವಾಗಿದೆ. ಅಲ್ಲದೆ ಇದರಿಂದ ವಕ್ಫ್‌ ಮತ್ತು ವಕ್ಫ್‌ ನ್ಯಾಯಮಂಡಳಿಯ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುವ ಮಂಡಳಿಗಳ ಕಾರ್ಯಗಳು ಹಾಗೂ ಅಧಿಕಾರಗಳನ್ನು ಈ ಮಸೂದೆಯು ದುರ್ಬಲಗೊಳಿಸುತ್ತದೆ. ಅಲ್ಲದೆ ಸಂವಿಧಾನದಲ್ಲಿನ ಜಾತ್ಯತೀತ ನಿಲುವುಗಳನ್ನು, ದೃಷ್ಟಿಕೋನಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

- Advertisement -

Latest Posts

Don't Miss