Friday, July 11, 2025

Latest Posts

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಧ್ವಜ ಹಾರಿಸುವುದೇ ನಮ್ಮ ಗುರಿ:ವಿನಯ ನಾವಲಗಟ್ಟಿ

- Advertisement -

www.karnatakatv.net : ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಆಗಿದೆ ನಗರದಲ್ಲಿ ಕಾಂಗ್ರೇಸ್ ಪಕ್ಷ ಸಂಪೂರ್ಣ ಸನ್ನದ್ದವಾಗಿದೆ ಇದರಿಂದ ಈ ಚುನಾವಣೆ ಚಿಹ್ನೆ ಆಧಾರದ ಮೇಲೆ ನಡೆಯುತ್ತಿದೆ ಆದ ಕಾರಣ ಪಾಲಿಕೆ ಮೇಲೆ ಕಾಂಗ್ರೆಸ್‌ ಧ್ವಜವನ್ನ ಹಾರಿಸುವುದೆ ನಮ್ಮ ಗುರಿ.

ಹೌದು ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಬೆಳಗಾವಿ ಕಾಂಗ್ರೆಸ್ ಜಿಲ್ಲಾ ಘಟಕದ  ಅಧ್ಯಕ್ಷಾರಾದ ವಿನಯ ನಾವಲಗಟ್ಟಿ ನಮ್ಮ S9 ಟಿವಿ ಜೊತೆ ಮಾತನಾಡಿ ಇವಾಗ ಚುನಾವಣೆ ಘೋಷಣೆ ಆಗಿದೆ ಅದ್ದರಿಂದ ನಮ್ಮ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ,ಮಾಜಿ ಶಾಸಕರಾದ ಪಿರೋಜ್ ಸೇಠ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ,ನಗರ ಘಟಕದ ಅಧ್ಯಕ್ಷರಾದ ರಾಜು ಸೇಠ ಸೇರಿದಂತೆ ನಾವೆಲ್ಲರೂ ಸಭೆ ನಡೆಸಿ ಪಾಲಿಕೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತೆವೆ .

ಆದರೆ ಕಡಿಮೆ ಸಮಯ ಇದೆ ಆದರೆ ಎಲ್ಲ ಪಕ್ಷದವರಿಗೂ ಒಂದೇ ಸಮಯ ಸಿಕ್ಕಿದೆ ಇದರಲ್ಲಿ ಸಮಯ ಕಡಿಮೆ ಸಿಕ್ಕಿರುವುದು ಅನಿವಾರ್ಯ ಆದರೆ ನಮ್ಮ ಪಕ್ಷದಲ್ಲಿ ನಮ್ಮದೆ ಆದ ಕಾಂಗ್ರೆಸ್ ಕಾರ್ಯಕರ್ತರ ಪಡೆ ಇದೆ ಹಾಗಾಗಿ ನಾವು ಈ ಚುನಾವಣೆಯಲ್ಲಿ ಮಹಾನಗರ ಪಾಲಿಕೆ ಮೇಲೆ ಕಾಂಗ್ರೆಸ್ ಧ್ವಜವನ್ನ ಹಾರಿಸೆ ಹಾರಿಸುತ್ತೆವೆ ಎಂದು ತಿಳಿಸಿದರು.

ಈ ಸಲ ಹೊಸ ನಾಯಕರಿಗೆ ಸ್ಥಾನ ಕೊಟ್ಟು ಜನರಿಗೆ ಒಳ್ಳೆಯ ಆಡಳಿತ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುವುದೆ ನಮ್ಮ ಗುರಿ ಆಗಿದೆ. ಆದರೆ ಹಲವರು ಚುನಾವಣೆಗೆ ಸ್ಪರ್ಧಿಸುತ್ತೆವೆ ಅಂತಾ ಮುಂದೆ ಬರುತ್ತಾರೆ ಆದರೆ ಅವರದು ಕೂಡಾ ಒಂದು ಸಂಘಟನೆ ನಿರ್ಮಾಣ ಮಾಡಿಕೊಂಡು ಕಾಂಗ್ರೆಸ್ ಪಕ್ಷದಿಂದ ಸಮಾಜ ಸೇವೆ ಮಾಡುತ್ತಾ ಬಂದಿರುವ ವ್ಯಕ್ತಿಗಳು ಸಹ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಬಂದಿದ್ದಾರೆ ಹೀಗಾಗಿ ಸೂಕ್ತ ಅಭ್ಯರ್ಥಿ ನೋಡಿ ಆಯ್ಕೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದೇಶದಲ್ಲಿ ಕಾಂಗ್ರೇಸ್  ಸರ್ಕಾರ  ತರುವುದೆ ನಮ್ಮ ಕೆಲಸ ಎಂದು ತಿಳಿಸಿದರು.

ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ

- Advertisement -

Latest Posts

Don't Miss