ಡೊಳ್ಳು ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದಿದೆ. ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್ ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ. ಕೈಲಾಸದಲ್ಲಿ ಕುಳಿತಿರುವ ಶಿವಪ್ಪನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಅಂತಾ ನಂಬಿರುವ ಹಳ್ಳಿ ಮಂದಿ ಸುತ್ತಾ, ಜನಪದ ಕಲೆ ಡೊಳ್ಳಿನ ಸುತ್ತಾ ಟೀಸರ್ ನ್ನು ಕಟ್ಟಿಕೊಡಲಾಗಿದೆ.
ಮಹಾನ್ ಹುತಾತ್ಮ ಕಿರುಚಿತ್ರದ ಸಾರಥಿ ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಹಾಗೂ ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿಧಿ ಡಿಎಸ್ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಸ್ ಕಲಾಥಿ ಛಾಯಾಗ್ರಹಣ, ಬಿಎಸ್ ಕೆಂಪರಾಜು ಸಂಕಲನವಿರುವ ಡೊಳ್ಳು ಸಿನಿಮಾ ಆಗಸ್ಟ್ ನಲ್ಲಿ ಥಿಯೇಟರ್ ಗೆ ಆಗಮನವಾಗಲಿದೆ.
ಈ ಖುಷಿಯ ಸುದ್ದಿಯನ್ನ ಡೊಳ್ಳು ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಮೊದಲ ಬಾರಿಗೆ ಕರ್ನಾಟಕ ಟಿವಿ ಜೊತೆ ಖುಷಿ ಹಂಚಿಕೊAಡಿದ್ದಾರೆ
ಸಾಗರ್ ಪುರಾಣಿಕ್, ನಿರ್ದೇಶಕ
ನಿಜವಾಗಿಯೂ ರಾಷ್ಟಿçÃಯ ಪ್ರಶಸ್ತಿ ಬಂದಿದೆ ಎಂಬ ಅರಿವೇ ಆಗ್ತಿಲ್ಲ. ದೇವರ ದಯೆ ನ್ಯಾಶನಲ್ ಅವಾಡ್ ಬಂದಿದೆ ಖುಷಿಯಾಗ್ತಿದೆ. ನನಗೂ ನಿರೀಕ್ಷೆ ಇರಲಿಲ್ಲ, ಅವಾರ್ಡ್ಗಾಗಿ, ಫೆಸ್ಟಿವಲ್‌ಗಾಗಿ ಯಾರೂ ಸಿನಿಮಾ ಮಾಡೋದಿಲ್ಲ. ಒಂದು ಒಳ್ಳೆ ಕತೆ ಇರುತ್ತೆ ಅದನ್ನ ನ್ಯಾಚುರಲ್ಲಾಗಿ ಜನಕ್ಕೆ ತಿಳಿಸೋ ಹಂಬಲ ನನಗಿತ್ತು. ಅದರಂತೆಯೇ ಒಂದೊಳ್ಳೇ ತಂಡ ನನಗೆ ಸಾಥ್ ಕೊಡ್ತು. ಅದರ ಪ್ರತಿಪಲಾನೇ ಇವತ್ತು ನಮ್ಮ ಡೊಳ್ಳು ಸಿನಿಮಾಗೆ ರಾಷ್ಟಿçÃಯ ಪ್ರಶಸ್ತಿ ಸಿಕ್ಕಿರೋದು. ನಾನು ಆಯ್ಕೆ ಮಾಡಿಕೊಳ್ಳೋ ಕಥೆಗಳೇನೇ ದೇಶದ ಸಂಸ್ಕೃತಿ, ಕಲೆ ಬಗ್ಗೆ ಆಗಿರುತ್ತೆ. ಅದರಂತೆ ಈ ಡೊಳ್ಳು ಚಿತ್ರ ಸಹ ನಮ್ಮ ನೆಲದ ಕಲೆಯನ್ನ ತೋರಿಸುತ್ತೆ. ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಪುರೋಹಿತ್ ಅವರ ಮೊದಲ ನಿರ್ಮಾಣದ ಸಿನಿಮಾ ಕೂಡ ಇದು. ನನಗಷ್ಟೇ ಅಲ್ಲ ಇಡೀ ತಂಡಕ್ಕೆ ಅವರ ಸಪೋರ್ಟ್ ತುಂಬಾ ಇತ್ತು. ವಿಶೇಷ ಅಂದ್ರೆ ಡೊಳ್ಳು ಚಿತ್ರಕ್ಕೆ ಎರಡು ಭಾಗಗಳಲ್ಲಿ ರಾಷ್ಟç ಪ್ರಶಸ್ತಿ ಸಿಕ್ಕಿರೋದು ಖುಷಿಯಿದೆ.