Political News: ಸಂಸದ ತೇಜಸ್ವಿ ಸೂರ್ಯ ಅವರು, ರಸ್ತೆ ನಿರ್ಮಿಸುವ ಬಗ್ಗೆ, ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ, ಸುರಂಗ ನಿರ್ಮಿಸುವುದರಿಂದ ಜನ ಸಂಚಾರ ದಟ್ಟಣೆ ನಿವಾರಿಸಲು ಆಗುವುದಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಮ್ಮ ಬೆಂಗಳೂರಿಗೆ, ವೈಜ್ಞಾನಿಕ ನಗರ ಯೋಜನೆ ಬೇಕೇ ಹೊರತು ‘ರಾಜಕೀಯ ಎಂಜಿನಿಯರಿಂಗ್’ ಅಲ್ಲ. ಸುರಂಗ ರಸ್ತೆ ಪರವಾಗಿ ಇರುವ ಈ ತಜ್ಞರ ಅನುಮೋದನೆಯನ್ನು ನೀಡಿದವರು ಕಾಂಗ್ರೆಸ್ ಪಕ್ಷದ ಒಬ್ಬ ವಕ್ತಾರರು – ರಾಜಕಾರಣಿ, ಆಶ್ಚರ್ಯಕರವಾಗಿ, ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗಗಳು ಮತ್ತು ಬಹು ಆಯಾಮದ ರಸ್ತೆಗಳನ್ನು ನಿರ್ಮಿಸುವುದು ಒಂದೇ ಮಾರ್ಗ ಎಂದು ಇದು ತೀರ್ಮಾನಿಸುತ್ತದೆ ಎಂದು ತೇಜಸ್ವಿ ಸೂರ್ ಹೇಳಿದ್ದಾರೆ.
ಇದರಿಂದಲೇ ಗೊತ್ತಾಗುತ್ತದೆ, ನಗರ ಯೋಜನೆ ಮತ್ತು ಸಾರಿಗೆ ವಿಜ್ಞಾನದ ಬಗ್ಗೆ ಅರಿವಿನ ಕೊರತೆಯನ್ನು ಇದು ತೋರಿಸುತ್ತದೆ. ಸುರಂಗ ರಸ್ತೆಗಳ ವಿರೋಧಕ್ಕೆ ಯಾವುದೇ ಸಿವಿಲ್ ಎಂಜಿನಿಯರಿಂಗ್ ಅಸಾಧ್ಯತೆ ಕಾರಣವಲ್ಲ. ಇದಕ್ಕೆ ಕಾರಣವೆಂದರೆ – ಈ ಸುರಂಗಗಳು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸುವುದಿಲ್ಲ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಾರ್ವಜನಿಕ ಸಾರಿಗೆಗೆ ನೆರವಾಗದ – ಖಾಸಗಿ ವಾಹನಗಳ ವಿಐಪಿ ಕಾರಿಡಾರ್ ಮೇಲೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುವುದು ಮೂಲಭೂತವಾಗಿ ತಪ್ಪು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸಾರ್ವಜನಿಕ ಸಾರಿಗೆ ಅಧ್ಯಯನಗಳು ಪ್ರತಿ ಗಂಟೆಗೆ, ಪ್ರತಿ ದಿಕ್ಕಿಗೆ ಸುಮಾರು 70,000 ಜನರನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ತೋರಿಸಿದಾಗ, ಪ್ರತಿ ಗಂಟೆಗೆ, ಪ್ರತಿ ದಿಕ್ಕಿಗೆ ಕೇವಲ 1800 ಕಾರುಗಳನ್ನು ಮಾತ್ರ ಸಾಗಿಸುವ ದುಬಾರಿ ಸುರಂಗಗಳಲ್ಲಿ ಹೂಡಿಕೆ ಮಾಡುವುದು ಮೂರ್ಖತನ. ಸಣ್ಣ ಸಂಖ್ಯೆಯ ವಾಹನ ಮಾಲೀಕರಿಗೆ ಲಾಭ ಮಾಡಲು ಇಷ್ಟೊಂದು ದೊಡ್ಡ ಹಣವನ್ನು ಏಕೆ ಖರ್ಚು ಮಾಡಬೇಕು ಎಂಬುದಕ್ಕೆ ಟನಲ್ ಪರವಾದ ವಾದ ಮಾಡುವವರ ಬಳಿ ಉತ್ತರವಿಲ್ಲ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಬದಲು, ಏಕೆ ಖಾಸಗಿ ಕಾರ್ ಮಾಲೀಕತ್ವಕ್ಕೆ ಸಬ್ಸಿಡಿ ನೀಡುತ್ತಿದ್ದೇವೆ? ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.
ಈ ವರದಿಯು ಪರಿಸರದ ಪ್ರಭಾವ, ಜಲವಿಜ್ಞಾನದ ಅಪಾಯಗಳು ಮತ್ತು ಭೂವೈಜ್ಞಾನಿಕ ಬೆದರಿಕೆಗಳನ್ನು ಸಹ ಅನುಕೂಲಕರವಾಗಿ ನಿರ್ಲಕ್ಷಿಸುತ್ತದೆ. ಲಾಲ್‌ಬಾಗ್ ಕಲ್ಲಿನ ರಚನೆಯು 3 ಶತಕೋಟಿ ವರ್ಷಗಳಷ್ಟು ಹಳೆಯದು – ಆದರೂ ಅದರ ಕೆಳಗೆ ಸುರಂಗ ನಿರ್ಮಿಸುವುದರ ಪರಿಣಾಮಗಳ ಬಗ್ಗೆ ಯಾವುದೇ ಗಂಭೀರ ಅಧ್ಯಯನ ನಡೆದಿಲ್ಲವೆಂಬುದು ಆತಂಕಕಾರಿ ವಿಷಯ ಎಂದಿದ್ದಾರೆ ಸಂಸದರು.
ಆದ್ದರಿಂದಲೇ ನಾವು ಈ ಕೆಳಗಿನ ಸಂಸ್ಥೆಗಳಿಂದ ಸ್ವತಂತ್ರ ವೈಜ್ಞಾನಿಕ ಅಧ್ಯಯನಕ್ಕೆ ಒತ್ತಾಯಿಸಿದ್ದೇವೆ: – ರಾಷ್ಟ್ರೀಯ ಶಿಲಾ ಯಂತ್ರಶಾಸ್ತ್ರ ಸಂಸ್ಥೆ (National Institute of Rock Mechanics) – ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (Geological Survey of India) – ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ (National Institute of Hydrology) – ಕೇಂದ್ರೀಯ ಗಣಿಗಾರಿಕೆ ಮತ್ತು ಇಂಧನ ಸಂಶೋಧನಾ ಸಂಸ್ಥೆ (Central Institute of Mining & Fuel Research)
ಆದರೆ ಸ್ವತಂತ್ರ ಮೌಲ್ಯಮಾಪನದ ಬದಲು, ಎಂಜಿನಿಯರ್ ವೇಷದಲ್ಲಿರುವ ಪಕ್ಷದ ಕಾರ್ಯಕರ್ತನಿಂದ ರಾಜಕೀಯ ಅನುಮೋದನೆಯನ್ನು ನಮ್ಮ ಕೈಗೆ ಕೊಡಲಾಗಿದೆ.
ಈ ವರದಿಯು ಯೋಜನೆಯ ವೆಚ್ಚದ ಬಗ್ಗೆಯೂ ಸುಳ್ಳು ಹೇಳಿದೆ. ಸುರಂಗದ ಪ್ರತಿ ಕಿಲೋಮೀಟರ್‌ಗೆ ವೆಚ್ಚ 440 ಕೋಟಿ ರೂ ಇರುತ್ತದೆ ಎಂದು ಅದು ಹೇಳುತ್ತದೆ. ಕಾಂಗ್ರೆಸ್ ‘ತಜ್ಞ’ ಕನಿಷ್ಠ ಒಮ್ಮೆಯಾದರೂ ಡಿಪಿಆರ್ (DPR) ಅನ್ನು ಓದಬಹುದಿತ್ತು. ಅಲ್ಲಿ ವೆಚ್ಚವನ್ನು ಪ್ರತಿ ಕಿಲೋಮೀಟರ್‌ಗೆ 1,000 ಕೋಟಿ ರೂ ಗಿಂತ ಹೆಚ್ಚು ಎಂದು ನಿಗದಿಪಡಿಸಲಾಗಿದೆ. ಆದರೆ ಸತ್ಯಗಳ ಬಗ್ಗೆ ಯಾರಿಗೆ ಚಿಂತೆ? ನಮ್ಮಂತಹ ಸಂಪನ್ಮೂಲ-ಸೀಮಿತ ದೇಶಕ್ಕೆ, ಪ್ರತಿ ರೂಪಾಯಿಯು ಹೆಚ್ಚು ಜನರನ್ನು, ಹೆಚ್ಚು ಪರಿಣಾಮಕಾರಿಯಾಗಿ, ಹೆಚ್ಚು ಸುರಕ್ಷಿತವಾಗಿ ಸಾಗಿಸಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕಾರುಗಳಿಗೆ ಸುರಂಗಗಳು ಸಂಚಾರ ದಟ್ಟಣೆಯನ್ನು ಪರಿಹರಿಸುವುದಿಲ್ಲ. ಮಾಸ್ ರಾಪಿಡ್ ಟ್ರಾನ್ಸ್‌ಪೋರ್ಟ್ ಸಂಚಾರ ಸಮಸ್ಯೆಯನ್ನು ಪರಿಹರಿಸುತ್ತದೆ. ಮುಖ್ಯಮಂತ್ರಿಗಳು ಅಸ್ತಿತ್ವದಲ್ಲಿಲ್ಲದ ಸಂಸ್ಥೆಯಿಂದ “ಡಮ್ಮಿ ವಿಶ್ವ ದಾಖಲೆ ಪ್ರಮಾಣಪತ್ರ”ವನ್ನು ಪಡೆದುಕೊಂಡ ನಂತರ, ಈಗ ನಮಗೆ ಡಿಸಿಎಂ ಅವರು ಕಾಂಗ್ರೆಸ್ ಪಕ್ಷದ ಎಂಜಿನಿಯರ್ ರಿಂದ “ಯೋಜನಾ ತಜ್ಞರ ಅನುಮೋದನೆ” ನೀಡಿದ್ದಾರೆ. ಇದು ರಾಜ್ಯದ ಜನತೆಗೆ ಕಾಂಗ್ರೆಸ್‌ನ 2023 ರ “ಕಿವಿ ಮೇಲೆ ಹೂವು” ಅಭಿಯಾನದ ಸಂಪೂರ್ಣ ಮುಂದುವರಿದ ಭಾಗವಷ್ಟೇ ಎಂಬುದು ಸ್ಪಷ್ಟ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಮ್ಮ ಬೆಂಗಳೂರಿಗೆ, ವೈಜ್ಞಾನಿಕ ನಗರ ಯೋಜನೆ ಬೇಕೇ ಹೊರತು ‘ರಾಜಕೀಯ ಎಂಜಿನಿಯರಿಂಗ್’ ಅಲ್ಲ.
ಸುರಂಗ ರಸ್ತೆ ಪರವಾಗಿ ಇರುವ ಈ ತಜ್ಞರ ಅನುಮೋದನೆಯನ್ನು ನೀಡಿದವರು ಕಾಂಗ್ರೆಸ್ ಪಕ್ಷದ ಒಬ್ಬ ವಕ್ತಾರರು – ರಾಜಕಾರಣಿ,
ಆಶ್ಚರ್ಯಕರವಾಗಿ, ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗಗಳು ಮತ್ತು ಬಹು ಆಯಾಮದ ರಸ್ತೆಗಳನ್ನು ನಿರ್ಮಿಸುವುದು ಒಂದೇ…
— Tejasvi Surya (@Tejasvi_Surya) November 20, 2025

