www.karnatakatv.net : ಬೆಂಗಳೂರು : ಕಳೆದ 20 ವರ್ಷಗಳ ಹಿಂದೆ ಟಿವಿ ನೋಡುವ ಸಮಯ ಕೆಲವೇ ಗಂಟೆಗಳು ಮಾತ್ರ. ಆದರೂ ಕಣ್ಣಿನ ಸಮಸ್ಯೆ ಬಹುತೇಕರನ್ನ ಕಾಡೋದು. ಆದ್ರೆ ಈ ಜಮಾನದಲ್ಲಿ ಜನ ಕೆಲವೇ ಗಂಟೆಗಳ ಕಾಲ ಸುಮ್ಮನಿರ್ತಾರೆ. ಎಚ್ಚರ ಇದ್ದಷ್ಟು ಸಮಯ ಮೊಬೈಲ್ ಬಳಕೆ ಮಾಡ್ತಾರೆ.. ಮಕ್ಕಳಿಂದ ಮುದುಕರ ವರೆಗೂ ಹೆಚ್ಚು ಮೊಬೈಲ್ ಬಳಸುವ ಹುಚ್ಚಿದೆ ಇದು ಕಣ್ಣಿನ ಸಮಸ್ಯೆಗೆ ಕಾರಣವಾಗಿದೆ.. ಮೊಬೈಲ್ ಬಳಸುವ 100 ರಲ್ಲಿ 80 ಜನರ ಕಣ್ಣು ಇವತ್ತು ಸಮಸ್ಯೆಗೆ ಸಿಲುಕಿದೆ. ನಿಮಗೆ ನಿಮ್ಮ ಕಣ್ಣು ಚೆನ್ನಾಗಿದೆ ಅಂತ ಅನ್ನಿಸಿದ್ರು. ಟೆಸ್ಟ್ ಮಾಡಿದಾಗ ಸಮಸ್ಯೆ ಏನಿದೆ ಅನ್ನೋದು ಗೊತ್ತಾಗುತ್ತೆ.. ಕಣ್ಣು ಸ್ವಲ್ಪ ನೋವಿದೆ ಅಂತ ಬಹಳ ಜನ ಟೆಸ್ಟ್ ಮಾಡಿಸಿದ 90 % ಜನರಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.. ಕಣ್ಣಿನ ಸಮಸ್ಯೆ ಸಾಸಿವೆ ಕಾಳಷ್ಟು ಕಡಿಮೆ ಇದ್ದಾಗ ಪರಿಹಾರ ಮಾಡಿಕೊಳ್ಳೋದು ಒಳ್ಳೆಯದು.. ಬೆಟ್ಟದಷ್ಟು ಸಮಸ್ಯೆಯಾದಾಗ ಆಸ್ಪತ್ರೆ ಕಡೆ ಹೆಜ್ಜೆಹಾಕಿದ್ರೆ ಲಕ್ಷಾಂತರ ಹಣವೂ ಖರ್ಚಾಗುತ್ತೆ ಜೊತೆಗೆ ಕಣ್ಣಿಗೆ ಹೆಚ್ಚು ಅಪಾಯವಾಗುತ್ತೆ.. ಈ ಹಿನ್ನೆಲೆ ಜನರಿಗೆ ಕಣ್ಣಿನ ಬಗ್ಗೆ ಜಾಗೃತಿ ಮೂಡಿಸಲು ಶಿವಣ್ಣ ಎಂಬುವವರು ಉಚಿತ ಕಣ್ಣಿನ ಪರೀಕ್ಷೆ ಮಾಡಿಸ್ತಿದ್ದಾರೆ. ಬೆಂಗಳೂರಿನ ಜನ ಹಾಗೂ ಬೆಂಗಳೂರಿನ ಹತ್ತಿರ ವಿರುವ ಜನ ಈ ಸೌಲಭ್ಯ ಪಡೆದುಕೊಳ್ಳಬಹುದು.
ದೂರವಾಣಿ ಸಂಖ್ಯೆ : ಶಿವಣ್ಣ +919945534077




