Thursday, May 30, 2024

Latest Posts

ವೇಗಿ ಶಹನಾವಾಜ್‍ಗೆ ಗಾಯ ಟೂರ್ನಿಯಿಂದ ಹೊರಕ್ಕೆ: ಪಾಕ್‍ಗೆ ಮತ್ತೆ ಕಾಡಿದ ಗಾಯದ ಸಮಸ್ಯೆ 

- Advertisement -

ದುಬೈ: ಇಂದು ಭಾರತ ವಿರುದ್ಧ ಕದನಕ್ಕೂ ಮುನ್ನ ಪಾಕಿಸ್ಥಾನ ವೇಗಿ ಶಹನಾವಾಜ್ ದಹಾನಿ ಗಾಯಗೊಂಡು ಏಷ್ಯಾಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಪಾಕಿಸ್ಥಾನ ತಂಡ ಆಘಾತ ಅನುಭವಿಸಿದೆ.

ಮೊನ್ನೆ ಹಾಂಗ್‍ಕಾಂಗ್ ವಿರುದ್ಧ ಆಡಿದ್ದ ಶಹನಾವಾಜ್ ದಹಾನಿ ಸ್ನಾಯು ನೋವಿಗೆ ಗುರಿಯಾಗಿದ್ದಾರೆ.

ಶಹನಾವಾಜ್ ಭಾನುವಾರದ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಹಾಂಗ್‍ಕಾಂಗ್ ವಿರುದ್ಧ ಬೌಲಿಂಗ್ ಮಾಡುವಾಗ ಸ್ನಾಯು ನೋವಿಗೆ ಗುರಿಯಾಗಿದ್ದಾರೆ. ಮುಂದಿನ 48-72 ಗಂಟೆಯಲ್ಲಿ ವೈದ್ಯಕೀಯ ತಂಡ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ.

ಟೂರ್ನಿಯಲ್ಲಿ ಪಾಕ್ ತಂಡ ಸಾಕಷ್ಟು ಗಾಯದ ಸಮಸ್ಯೆಗೆ ಗುರಿಯಾಗಿದೆ. ಈ ಹಿಂದೆ ಶಾಹೀನ್ ಶಾ ಅಫ್ರೀದಿ, ಮೊಹ್ಮದ್ ವಾಸೀಮ್ ಗಾಯದಿಂದಾಗಿ ಆಡಲಿಲ್ಲ.

ಪಾಕಿಸ್ಥಾನ ಮೊಹ್ಮದ್ ಹಸನೈನ್ ಮತ್ತು ಹಸನ್ ಅಲಿಗೆ ಮಣೆ ಹಾಕಿದ್ದು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದೆ.

- Advertisement -

Latest Posts

Don't Miss