ಪಾಕಿಸ್ತಾನ ಸುದ್ದಿ: ಪಾಕಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ಆಗೋದು ಕಾಮನ್. ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ 11 ಸೈನಿಕರು ಸಾವನ್ನಪ್ಪಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಇದೀಗ ರೈತರು ಸಿಡಿದೆದ್ದಿದ್ದಾರೆ. ನಮ್ಮಿಂದ 1 ಲೀಟರ್ ಹಾಲನ್ನು 180 ರೂಪಾಯಿಗೆ ಖರೀದಿಸಿ. 220 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ಲಾಭ ಸಿಗುತ್ತಿಲ್ಲ ಎಂದು ಪಾಕಿಸ್ತಾನದ ರೈತರು ಕಿಡಿಕಾರುತ್ತಿದ್ದಾರೆ.
ಇನ್ನೊಂದೆಡೆ ಪಾಕಿಸ್ತಾನದಲ್ಲಿ ದಿನೇ ದಿನೇ ದಿನಬಳಕೆ ವಸ್ತುಗಳ ದರ ಮುಗಿಲು ಮುಟ್ಟುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ 300 ರೂಪಾಯಿ ಗಡಿ ದಾಟಿದೆ. ತರಕಾರಿ ಬೆಲೆಗಳು ಏರಿಕೆಯಾಗಿವೆ.
ಪಾಕಿಸ್ತಾನದ ಸ್ಥಿತಿ ದಿನೇ ದಿನೇ
ಲೀಟರ್ ಹಾಲಿನ ದರ 220 (180)
ಕೆಜಿ ಸಕ್ಕರೆ 230
ಸಿಲಿಂಡರ್ 2373
ಡೀಸೆಲ್ 300
ಪೆಟ್ರೋಲ್ 310
1 ಮೊಟ್ಟೆ 59
ಕೆಜಿ ಚಿಕನ್ 705
ಕೆಜಿ ಅಕ್ಕಿ 310
ಕೆಜಿ ಸೇಬು 400
ಇನ್ನು ಪಾಕಿಸ್ತಾನ ಯಾಕಿಂಗಾಯ್ತು ಅಂತ ನೋಡೋದಾದ್ರೆ
ಯಾಕಿಂಗಾಯ್ತು ಪಾಕಿಸ್ತಾನ..?
ಪಾಕ್ ತನ್ನ ಜಿಡಿಪಿಯ 76%ನಷ್ಟು ಸಾಲ ಮಾಡಿದೆ
ಕೋವಿಡ್ ಹೊಡೆತದಿಂದ ಚೇತರಿಕೆ ಕಷ್ಟವಾಯ್ತು
ರಷ್ಯಾ-ಉಕ್ರೇನ್ ಯುದ್ಧದಿಂದ ಬೆಲೆಗಳು ಏರಿಕೆ
ಶತಮಾನದಲ್ಲೇ ಕಂಡೂ ಕೇಳರಿಯದ ಪ್ರವಾಹ
ಪ್ರವಾಹದಿಂದ ಆಹಾರ ಆಮದು ಪ್ರಮಾಣ ಏರಿಕೆ
ಹಳೇ ಕೃಷಿ ಪದ್ದತಿಯನ್ನೇ ಅವಲಂಬಿಸಿದೆ ಪಾಕ್.!
ರಫ್ತು ಮಾಡುವಂಥಾ ಯಾವುದೇ ಉದ್ಯಮವಿಲ್ಲ
ಆದಾಯದ ಬಹುತೇಕ ಹಣ ಮಿಲಿಟರಿಗೆ ಮೀಸಲು
ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಭಾರತದ ಜೊತೆ ಪೈಪೋಟಿ
ಈ ಎಲ್ಲಾ ಕಾರಣಗಳಿಂದಾಗಿ ಪಾಕಿಸ್ತಾನ ಆರ್ಥಿಕವಾಗಿ ಸಂಕಷ್ಟವನ್ನು ಒದುರಿಸುತ್ತಿದ್ದು ಇದರ ಬಿಸಿ ಪಾಕ್ ನ ಪ್ರಜೆಗಳಿಗೆ ತಟ್ಟುತ್ತಿದೆ. ಇನ್ನು ರೈತರಿಮದ ಕಡಿಮೆ ಬೆಲೆಗೆ ದಿನಸಿಗಳನ್ನು ಖರೀದಿಸಿ ಗ್ರಾಹಕರಿಗೆ ಅಧಿಕ ಬೆಲೆಗೆ ಮಾರಾಟಕ್ಕೆ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
National Highway: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ..!
BJP: ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಶುರುವಾಯ್ತಾ ರಾಜೀನಾಮೆ ಪರ್ವ?
Road repair:,ರಸ್ತೆ ಡಾಂಬಾರ್ ಕಿತ್ತು ಹಾಕಿ ಆಕ್ರೋಶ ಹೊರಹಾಕಿದ ಗ್ರಾಮಸ್ಥರು..!