ಹುಬ್ಬಳ್ಳಿ :ರಾಜ್ಯ ರಾಜಕಾರಣದಲ್ಲಿ ಈಗ ‘ಬಕೆಟ್’ ಎನ್ನುವ ಶಬ್ದ ಬಹಳವಾಗಿಯೇ ಕೇಳಿಬರುತ್ತಿದೆ ಇದಕ್ಕೆ ಕಾರಣ ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಹಳ ಜನ ಬಿಜೆಪಿ ಶಾಸಕರಿಗೆ ಟಿಕೆಟ್ ಕೈತಪ್ಪಿಸಿ ಹೊಸಬರಿಗೆ ಮಣೆ ಹಾಕಿರುವ ಹಿನ್ನೆಲೆಯಲ್ಲಿ ಈಗ ಹಲವಾರು ಬಿಜೆಪಿ ನಾಯಕರು ಸ್ವಪಕ್ಷದ ವಿರುದ್ದವೇ ತಿರುಗಿ ಬಿದ್ದಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ನಾಲ್ಕು ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೇಟ್ಟರ್ ಅವರು ಸ್ವಪಕ್ಷಿಯ ವಿರುದ್ದ ಆರೋಪ ಮಾಡಿರುವುದು. ಬಿಜೆಪಿಯಲ್ಲಿ ಹಾಲಿ ನಾಯಕರಿಗೆ ಬಕೆಟ್ ಹಿಡಿದರೆ ಮಾತ್ರ ಪಕ್ಷದಲ್ಲಿ ಬೆಲೆ ಸಿಗುತ್ತದೆ ಹೊರತು ಕ್ಷೇತ್ರದಲ್ಲಿ ಮಾಡುವ ಅಭಿವೃದ್ದಿ ಕೆಲಸದಿಂದಲ್ಲ ಹಾಗೂ ಲಿಂಗಾಯತರಿಗೆ ಬಿಜೆಪಿ ಕಡೆಗಣಿಸುತ್ತಿರುವುದು ಬಹಳವಾಗಿ ಬೇಸರವಾಗಿದೆ ಎಂದು ಅಸಮಧಾನ ಹೊರಹಾಕಿದರು. ಇದಕ್ಕೆ ವಿರುದ್ದವಾಗಿ ಮಹೇಶ್ ಟೆಂಗಿನಕಾಗಿಯವರು ಸಹ ಪ್ರದೀಪ್ ಶೇಟ್ಟರ್ ಎಂದೂ ಇಲ್ಲದ ಜಾತಿಯ ಮೇಲಿನ ಅಭಿಮಾನ ಈಗೇಕೆ ಎಂದು ಶೆಟ್ಟರ್ ಗೆ ಟಾಂಗ್ ಕೊಟ್ಟಿದ್ದರು.
ತೆಂಗಿನಕಾಯಿ ಟಾಂಗ್ ಕೊಟ್ಟಿರುವ ಬೆನ್ನಲ್ಲೆ ಪ್ರದೀಪ್ ಶೆಟ್ಟರ್ ಬೆನ್ನಿಗೆ ಅವರ ಅಣ್ಣ ಜಗದೀಶ್ ಶೆಟ್ಟರ ಅವರ ಮಗನಾದ ಸಂಕಲ್ಪ ಶೇಟ್ಟರ್ ನಿಂತಿದ್ದಾರೆ. ಚಿಕ್ಕಪ್ಪನ ಬೆನ್ನಿಗೆ ನಿಂತ ಜಗದೀಶ್ ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ ಶೆಟ್ಟರ್ ಮಾತಿಗೆ ದನಿಗೂಡಿಸಿದ್ದಾರೆ. ಯಾರು ಬಕೆಟ್ ಹಿಡಿದು ಹು-ಧಾ ಸೆಂಟ್ರಲ್ ಬಿಜೆಪಿ ಟಿಕೆಟ್ ತಗೊಂಡಿದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ #BLavaragombe ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂಕಲ್ಪ ಶೆಟ್ಟರ್ ಬರೆದುಕೊಂಡು ಪರೋಕ್ಷವಾಗಿ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂಕಲ್ಪ ಶೆಟ್ಟರ್ ರಾಜಕೀಯ ಮಾತುಗಳನ್ನಾಡಿದ್ದಾರೆ
ಜಗದೀಶ್ ಶೆಟ್ಟರ್ ಗೂ ಟಿಕೆಟ್ ನಿರಾಕರಣೆ ಮಾಡಿದಾಗಲೂ ಏನೂ ಮಾತನಾಡದ ಸಂಕಲ್ಪ ಶೆಟ್ಟರ್ ಇದೀಗ ಪ್ರದೀಪ ಅಸಮಾಧಾನದ ಬೆನ್ನಲ್ಲೆ ಪೇಸಬುಕ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
National Highway: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ..!
Road repair:,ರಸ್ತೆ ಡಾಂಬಾರ್ ಕಿತ್ತು ಹಾಕಿ ಆಕ್ರೋಶ ಹೊರಹಾಕಿದ ಗ್ರಾಮಸ್ಥರು..!
Lokayukta: ಮಿನಿ ವಿಧಾನಸೌಧದ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ..!