Friday, November 22, 2024

Latest Posts

ಭಾರತೀಯರಷ್ಟೇ ಅಲ್ಲ, ಅಕ್ಕ ಪಕ್ಕದ ದೇಶದವರಿಂದಲೂ ಲತಾ ದೀದಿಗೆ ಸಂತಾಪ ಸೂಚನೆ..

- Advertisement -

ಎ ಮೇರೆ ವತನ್‌ ಕೆ ಲೋಗೋ, ಜರಾ ಆಂಖ ಮೇ ಭರಲೋ ಪಾನಿ ಎಂದು ಹಾಡಿ, ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದ್ದ, ಮಮಹಾನ್ ಗಾಯಕಿ, ಲತಾ ಮಂಗೇಶ್ಕರ್ ಇನ್ನು ನೆನಪಷ್ಟೇ. ಕಳೆದ ವರ್ಷ ಕೊರೊನಾದಿಂದ ಬಳಲಿದ್ದ, ಲತಾದೀದಿ, ಕೆಲ ದಿನಗಳಿಂದ ನಿಮೋನಿಯಾದಿಂದ ಬಳಲುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿರಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಇಂದು ಕೊನೆಯುಸಿರೆಳೆದಿದ್ದಾರೆ.

ಈ ಗಾನ ಕೋಗಿಲೆಗೆ ಭಾರತದ ಸಾಮಾನ್ಯ ಜನರು, ಸಿನಿಮಾ ಕಲಾವಿದರು, ರಾಜಕೀಯ ಗಣ್ಯರು ಸೇರಿ, ಎಲ್ಲರೂ ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ, ಅಕ್ಕ ಪಕ್ಕದ ರಾಷ್ಟ್ರವಾದ ಪಾಕಿಸ್ತಾನ, ಅಮೆರಿಕಾ, ಇಸ್ರೇಲ್, ಶ್ರೀಲಂಕಾ ಸೇರಿ ಹಲವು ದೇಶದ ಜನರೂ ಸಂತಾಪ ಸೂಚಿಸಿದ್ದಾರೆ. ಈ ಮೂಲಕ ದೀದಿ ಬರೀ ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಹಲವು ದೇಶಗಳ ಜನರಿಗೆ ಅಚ್ಚುಮೆಚ್ಚಿನ ಗಾಯಕಿಯಾಗಿದ್ದರು ಅನ್ನೋದು ತಿಳಿಯುತ್ತದೆ.

ಸ್ವತಂತ್ರಪೂರ್ವದಲ್ಲೇ ಲತಾ ಮಂಗೇಶ್ಕರ್ ಹಾಡುವುದಕ್ಕೆ ಶುರು ಮಾಡಿದ್ದರು. ಇವರು ಸಿನಿಮಾದಲ್ಲೂ ಕೂಡ ನಟನೆ ಮಾಡಿದ್ದರು. ಇವರು ಮೊದಲು ಹಾಡಿದ್ದು, ಮರಾಠಿ ಹಾಡು. ಆ ಹಾಡು ಹಾಡಿ ಫೇಮಸ್ ಆಗಿದ್ದ ಲತಾ, ನಂತರ ಬಾಲಿವುಡ್‌ಗೆ ಕಾಲಿಟ್ಟರು. ಹೀಗೆ ಶುರುವಾದ, ಲತಾರ ಗಾಯನ ಪಯಣ, ಹಲವು ಭಾಷೆಗಳ ಹಾಡಿನಲ್ಲಿ ಮುಂದುವರಿದಿತ್ತು. ಹೀಗಾಗಿಯೇ ಬರೀ ಮಹಾರಾಷ್ಟ್ರದಲ್ಲಷ್ಟೇ ಅಲ್ಲದೇ, ಕರ್ನಾಟಕ ಸೇರಿ, ಭಾರತದ ಎಲ್ಲ ಭಾಷೆಯ, ಎಲ್ಲ ರಾಜ್ಯದ ಜನರಿಗೆ ಲತಾ ಅಚ್ಚು ಮೆಚ್ಚಿನ ಗಾಯಕಿಯಾಗಿದ್ದರು. ಎಲ್ಲ ವಯಸ್ಸಿನ ಗಾಯಕಿಯರಿಗೂ ಆಕೆಯ ಧ್ವನಿ ಒಗ್ಗುತ್ತಿತ್ತು.  ಆಕೆಯ ನಿಧನದಿಂದ ಭಾರತೀಯ ಚಿತ್ರರಂಗ ಬಡವಾಗಿದೆ.

- Advertisement -

Latest Posts

Don't Miss