Thursday, November 13, 2025

Latest Posts

ಭಾರತದಲ್ಲಿ ಕೋಟಿಗಟ್ಟಲೇ ಪಾಕ್‌ ಆಸ್ತಿ, ಎನಿಮಿ ಪ್ರಾಪರ್ಟಿ ಮಾರಾಟಕ್ಕೆ ಸಜ್ಜು!

- Advertisement -

ದಿಲ್ಲಿ ಸ್ಫೋಟದ ಹಿಂದೆ ಉಗ್ರರ ಕೃತ್ಯ ಇದೆ ಎಂದು ಹೇಳಲಾಗ್ತಿದೆ. ಪಾಕಿಸ್ತಾನ ಮೂಲದ ಜೈಶ್‌ ಸಂಘಟನೆಯ ಕೈವಾಡದ ಬಗ್ಗೆ ಅನುಮಾನ ಮೂಡಿದೆ. ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ, ರಣತಂತ್ರ ಎಣೆಯುತ್ತಿದೆ. ಇದೇ ನಿಟ್ಟಿನಲ್ಲಿ ಇಂದು ಸಂಜೆ ತುರ್ತು ಸಭೆ ಕರೆಯಲಾಗಿದೆ.

ಈ ಮಧ್ಯೆ, ಬೆಂಗಳೂರಿನ ಹೃದಯ ಭಾಗದಲ್ಲಿರುವ, ಪಾಕಿಸ್ತಾನಿಗಳಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಸರ್ಕಾರ ಹರಾಜು ಹಾಕಲು ಮುಂದಾಗಿದೆ. ದೇಶ ವಿಭಜನೆಯ ಸಮಯದಲ್ಲಿ ಬಿಟ್ಟುಹೋದ ಈ ಆಸ್ತಿಗಳು ಇದೀಗ ಸರ್ಕಾರದ ವಶವಾಗಲಿವೆ.

ಶತ್ರು ರಾಷ್ಟ್ರ ಪಾಕಿಸ್ತಾನದ ಪ್ರಜೆಗಳ ಹೆಸರಿನಲ್ಲಿ ಇರುವಂತಹ ಆಸ್ತಿಗಳನ್ನು, ಹರಾಜು ಹಾಕುವಂತಹ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಪಾಕಿಸ್ತಾನ ಪ್ರಜೆಗಳ ಆಸ್ತಿಗೆ ಈಗ ಕೇಂದ್ರ ಶಾಕ್ ಕೊಟ್ಟಿದೆ. ಪಾಕಿಸ್ತಾನಿ ಪ್ರಜೆಗಳ ಆಸ್ತಿ ಮಾರಾಟಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪಾಕಿಸ್ತಾನ ಪ್ರಜೆಗಳ ಆಸ್ತಿ ಬೆಂಗಳೂರಿನಲ್ಲಿದೆ. ರಾಜಧಾನಿಯ ಹೃದಯ ಭಾಗದಲ್ಲೇ ಪಾಕಿಸ್ತಾನ ನಾಗರೀಕರ ಕೋಟಿ ಕೋಟಿ ಆಸ್ತಿ ಇದೆ. ಇದರ ಜೊತೆಗೆ ಚೀನಾ ಪ್ರಜೆಗಳ ಆಸ್ತಿಯು ಮಾರಾಟ ಮಾಡೋಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

1947ರಲ್ಲಿ ಭಾರತ ವಿಭಜನೆಯಾಗಿ ಪಾಕಿಸ್ತಾನ ರೂಪಗೊಂಡ ಸಮಯದಲ್ಲಿ, ಬಹಳ ಜನ ಭಾರತದಿಂದ ಪಾಕ್, ಚೀನಾಗೆ ಹೋಗಿ ನೆಲೆಸಿದ್ದಾರೆ. ಅವರು ಹೊಂದಿರುವಂತ ಆಸ್ತಿನೇ ಎನಿಮಿ ಪ್ರಾಪರ್ಟಿ. ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಫಾರ್ ಇಂಡಿಯಾದಿಂದ ಗುರುತು ಮಾಡಲಾಗಿದೆ.

ಮರಿಯಮ್ ಮಿರ್ಜಾ ಖಲೀಲಿ ಮಾಲೀಕತ್ವದ 1,23,504 ಚದರ ಅಡಿ ವಿಸ್ತೀರ್ಣದ, ಎರಡು ದೊಡ್ಡ ದೊಡ್ಡ ಹೋಟೆಲ್‌ಗಳಿವೆ. ಪಾಕಿಸ್ತಾನದಲ್ಲಿ ನೆಲೆಸಿರುವ ಮರಿಯಮ್ ಮಿರ್ಜಾ ಅವರ ಆಸ್ತಿ ಮೌಲ್ಯ 300ರಿಂದ 400 ಕೋಟಿ ಇದೆ. ಇದೆ ರೀತಿ ಬೆಂಗಳೂರಿನ ಒಟ್ಟು ನಾಲ್ಕು ಸ್ಥಳಗಳಲ್ಲಿರುವ ಶತ್ರುಗಳ ಆಸ್ತಿ ಮಾರಾಟಕ್ಕಿವೆ. ಬೆಂಗಳೂರು ಜಿಲ್ಲಾಡಳಿತದಿಂದ ಏನಿಮಿ ಪ್ರಾಪರ್ಟಿಗೆ ದರ ನಿಗದಿ ಮಾಡಿದೆ.

ಇದೇ ತಿಂಗಳು ಶತ್ರುಗಳ ಆಸ್ತಿ ಹರಾಜು ಪ್ರಕ್ರಿಯೆ ಆರಂಭ ಸಾಧ್ಯತೆ ಇದೆ. ಶತ್ರುಗಳ ಆಸ್ತಿಯಿಂದ ಸರ್ಕಾರಕ್ಕೆ ನೂರಾರು ಕೋಟಿ ಆದಾಯ ಹರಿದು ಬರುವ ನಿರೀಕ್ಷೆ ಇದೆ. ಸರ್ಕಾರದ ಬೊಕ್ಕಸಕ್ಕೆ ಲಾಭವಾಗಲಿದೆ. ಆಸ್ತಿ ಮಾರಾಟದ ಜೊತೆಗೆ, ದೇಶ ವಿರೋಧಿ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss