Thursday, September 19, 2024

Latest Posts

ಪ್ಯಾಲೇಸ್ತೀನ್‌ ಬಾವುಟ ಹಾರಾಟ: ಗಲಭೆಗೆ ರೂಪಿಸಿದ ಸಂಚು ?

- Advertisement -

Viral News: ಇದು ಕರ್ನಾಟಕವಾ? ಅಥವಾ ಮುಸ್ಲಿಂ ರಾಷ್ಟ್ರನಾ? ಇಷ್ಟಕ್ಕೂ ಇಂಥದ್ದೊಂದು ಪ್ರಶ್ನೆ ಬರೋಕೆ ಕಾರಣ, ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್‌ ಬಾವುಟ! ಯೆಸ್‌, ಚಿಕ್ಕಮಗಳೂರಿನ ರಸ್ತೆ ಮೇಲೆ ಬೈಕ್‌ವೊಂದರಲ್ಲಿ ಕೆಲ ಮುಸ್ಲಿಂ ಹುಡುಗರು ಪ್ಯಾಲೇಸ್ತೀನ್‌ ಬಾವುಟ ಹಿಡಿದು ಓಡಾಟ ನಡೆಸಿದ್ದಾರೆ. ನಿಜಕ್ಕೂ ಇದು ರಾಜ್ಯದ ಜನರು ಬೆಚ್ಚಿಬೀಳಿಸುವಂತಾಗಿದೆ. ಅಲ್ಲೆಲ್ಲೋ ನಾಗಮಂಗಲದಲ್ಲಿ ನಡೆದ ಘಟನೆ ಇನ್ನೂ ಹಸಿಯಾಗಿಯೇ ಇದೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದು ಹೋಗಿದೆ. ರಾಜಾರೋಷವಾಗಿ ಹುಡುಗರ ತಂಡವೊಂದು ಪ್ಯಾಲೇಸ್ತೀನ್‌ ಬಾವುಟ ಹಿಡಿದು ಹಾರಾಟ ನಡೆಸಿರೋದು ಜನರಲ್ಲಿ ಭೀತಿ ಹುಟ್ಟಿಸಿದೆ. ಸದ್ಯ ಆ ಹುಡುಗರು ಬೈಕ್‌ ನಲ್ಲಿ ಪ್ಯಾಲೇಸ್ತೀನ್‌ ಬಾವುಟ ಹಿಡಿದು ಓಡಾಟ ನಡೆಸಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇಷ್ಟಕ್ಕೂ ಆ ಬಾಲಕರಿಗೆ ಪ್ಯಾಲೇಸ್ತೀನ್‌ ಧ್ವಜ ಸಿಕ್ಕಿದ್ದು ಹೇಗೆ? ಈ ಪ್ರಶ್ನೆ ಸದ್ಯಕ್ಕೆ ಎಲ್ಲರಿಗೂ ಕಾಡುತ್ತಿದೆ. ಏನಾದರೂ, ಆ ಧ್ವಜ‌ ನೀಡಿ ನಗರದೆಲ್ಲೆಡೆ ಓಡಾಟ ನಡೆಸಿ ಅಂತ ಸೂಚಿಸಲಾಗಿತ್ತಾ? ಇಂದು ಎಲ್ಲೆಡೆ ಈದ್ ಮಿಲಾದ್. ಆ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಿಡಿದು ರಸ್ತೆಗಳಲ್ಲಿ ಪ್ರದರ್ಶನ ಮಾಡೋಕೆ ಪ್ಲಾನ್ ಮಾಡಲಾಗಿತ್ತಾ? ಈ ಪ್ರಶ್ನೆಯೂ ಇದೀಗ ಹರಿದಾಡುತ್ತಿದೆ. ಆದರೆ, ವಿದೇಶದ ಬಾವುಟ ಹಿಡಿದು ಓಡಾಡಿದ್ದೇಕೆ, ಕೊಟ್ಟವರಾರು? ಏನು ಅದರ ಉದ್ದೇಶ ಎಂಬಿತ್ಯಾದಿ ಕುರಿತು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸದ್ಯ, ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು, ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ಯಾಲೇಸ್ತೀನ್‌ ಧ್ವಜ ಸಿಕ್ಕಿದ್ದು ಹೇಗೆ, ಯಾರು ಕೊಟ್ಟವರು, ರೌಂಡ್ಸ್‌ ಹೊಡೆದಿದ್ದೇಕೆ ಎಂಬಿತ್ಯಾದಿ ಪ್ರಶ್ನೆಗಳ ಮೇಲೆ ತನಿಖೆ ಮುಂದುವರೆಸಿದ್ದಾರೆ. ಅಲ್ಲಿನ ಪೊಲೀಸ್‌ ಇನ್ಸ್ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಪ್ಯಾಲೆಸ್ತೀನ್‌ ಧ್ವಜ ಹಾರಾಟದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಚಿಕ್ಕಮಗಳೂರು ನಗರ ಮೊದಲೇ ಕೋಮು ಗಲಭೆಗೆ ಸದ್ದು ಮಾಡಿದ ಊರು. ಹೀಗಾಗಿ ಅಲ್ಲಿ ಗಲಭೆಗೆ ಏನಾದರೂ ಸಂಚು ನಡೆಸಲು ಉದ್ದೇಶಿಸಲಾಗಿತ್ತಾ? ಅಂತ ಕೆಲವು ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಅದೇನೆ ಇರಲಿ, ಶಾಂತಿ ಸೌಹಾರ್ಧಕ್ಕೆ ಧಕ್ಕೆಯಾಗುವಂತಹ ಪ್ರಕರಣ ಇದಾಗಿದ್ದು, ಪೊಲೀಸರು ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸುವ ಮೂಲಕ ಶಾಂತಿ ಕಾಪಾಡಲು ಮುಂದಾಗಬೇಕಿದೆ.

ಇದಷ್ಟೇ ಅಲ್ಲ, ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಿಲ್ಲಾ ಏರಿಯಾದಲ್ಲೂ ಈದ್‌ ಮಿಲಾದ್‌ ಆಚರಣೆ ಹಿನ್ನೆಲೆಯಲ್ಲಿ ಬ್ಯಾನರ್ ವೊಂದನ್ನು ಅಳವಡಿಸಲಾಗಿದ್ದು, ಆ ಬ್ಯಾನರ್​ನ ಒಂದು ಭಾಗದಲ್ಲಿ ಫ್ರೀ ಪ್ಯಾಲೇಸ್ತೀನ್ ಎಂದು ಬರೆಯಲಾಗಿದೆ. ಆ ಬರಹ ನೋಡಿದ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿವೆ. ತಕ್ಷಣ ಇದರಿಂದ ಎಚ್ಚೆತ್ತ ಅಧಿಕಾರಿಗಳು ಫ್ರೀ ಪ್ಯಾಲೇಸ್ತೀನ್ ಬರಹಕ್ಕೆ ಬಿಳಿ ಬಣ್ಣ ಬಳಿದಿದ್ದಾರೆ. ಸದ್ಯ ಇದೀಗ ಬ್ಯಾನರ್ ಬದಲಾಯಿಸಿ ಹೊಸ ಬ್ಯಾನರ್ ಹಾಕಲಾಗಿದೆ.

- Advertisement -

Latest Posts

Don't Miss