ದಿ ಮಾಸ್ಕ್‌ಡ್ ಸಿಂಗರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಗಾಯಕಿಯೊಬ್ಬಳು, ಹಾಡು ಹಾಡುವಾಗ ಕೆಮ್ಮಿ ಕೆಮ್ಮಿ, ಉಸಿರಾಟದ ಸಮಸ್ಯೆಯಿಂದ ಬಳಲಿದ ಘಟನೆ ನಡೆದಿದೆ. ಆಕೆಗೆ ತಕ್ಷಣ ಚಿಕಿತ್ಸೆ ನೀಡಿದ್ದು, ಆಕೆ ಚೇತರಿಸಿಕೊಂಡಿದ್ದಾಳೆ. ಸ್ಪರ್ಧೆಯಲ್ಲಿ ದಿ ಗುಡ್ ದಿ ಬ್ಯಾಡ್ ಆ್ಯಂಡ್ ದಿ ಕಡ್ಲಿ ಎಂದು ಫಾರ್ಮ್ಯಾಟ್ ಮಾಡಲಾಗಿದ್ದು, ಅದರಲ್ಲಿ ದಿ ಗುಡ್ ಎಂಬ ಫಾರ್ಮ್ಯಾಟ್ ಆಯ್ಕೆ ಮಾಡಿಕೊಂಡು, ಗಾಯಕಿ ಹಾಡುತ್ತಿದ್ದಳು.
ಆಕೆಯ ಫಾರಮ್ಯಾಟ್‌ಗೆ ತಕ್ಕಂತೆ ಆಕೆಗೆ ಬಟ್ಟೆ ಹಾಕಲಾಗಿತ್ತು. ಆಕೆ ಕೀಟದ ವೇಷ ತೊಟ್ಟು, ಚಾಕಾ ಖಾನ್ ಅವರ ಯಾರೂ ಅಲ್ಲ ಎಂಬ ಇಂಗ್ಲೀಷ್ ಹಾಡನ್ನ ಹಾಡುತ್ತಿದ್ದಳು. ಆದ್ರೆ ಹಾಡುತ್ತ ಹಾಡುತ್ತ, ಆಕೆಗೆ ಕೆಮ್ಮು ಶುರುವಾಯಿತು. ಅವರ ಮುಖವನ್ನ ಪೂರ್ತಿಯಾಗಿ ಮುಚ್ಚಿದ್ದಕ್ಕೆ ಉಸಿರುಗಟ್ಟಿದಂತಾಗಿ, ಈ ರೀತಿಯಾಗಿದೆ ಎಂದು ಹೇಳಿದ್ದಾರೆ.
ಗಾಯಕಿಗೆ ಕೆಮ್ಮು ಶುರುವಾಗುತ್ತಿದ್ದಂತೆ, ಜಡ್ಜ್‌ಗಳಾದ ಕೆನ್ ಜಿಯಾಂಗ್, ಜೆನ್ನಿ, ನಿಕೋಲ್, ರಾಬಿನ್ ಎಲ್ಲರೂ ಎದ್ದು ಸಹಾಯಕ್ಕೆ ಬಂದರು. ನಂತರ ವೈದ್ಯರನ್ನು ಕರೆಸಿ ಆಕೆಗೆ ಚಿಕಿತ್ಸೆ ಕೊಡಿಸಲಾಯಿತು. ಸ್ವಲ್ಪ ಹೊತ್ತು ರಿಯಾಲಿಟಿ ಶೋದ ಶೂಟಿಂಗ್ ಸ್ಥಗಿತಗೊಳಿಸಿ, ನಂತರ ಮತ್ತೆ ಶೂಟಿಂಗ್ ಶೂರು ಮಾಡಲಾಯಿತು. ಇನ್ನು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.