Health Tips: ಮನೋಶಾಸ್ತ್ರಜ್ಞೆಯಾಗಿರುವ ಡಾ.ರೂಪಾರಾವ್ ಅವರು, ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ನಿಮಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಮಕ್ಕಳು ದಾರಿ ತಪ್ಪಲು ಯಾರು ಕಾರಣ ಎಂಬ ಬಗ್ಗೆ ವಿವರಿಸಿದ್ದಾರೆ.
ತಜ್ಞರು ಹೇಳುವ ಪ್ರಕಾರ, ತಂದೆ-ತಾಯಿ ಮತ್ತು ಮಕ್ಕಳ ನಡುವೆ ಎಮೋಷನಲ್ ಬಾಂಡಿಂಗ್ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಗ್ಯಾಜೇಟ್ಸ್. TV, Mobile, Computer ಸೇರಿ ಹಲವು ಉಪಕರಣಗಳು ಬಂದು, ಜನ ಅದರಲ್ಲೇ ಸಮಯ ಕಳೆಯಲು ಶುರು ಮಾಡಿದ್ದಾರೆ. ಇದೇ ತಂದೆ ಮಕ್ಕಳು, ತಾಯಿ ಮಕ್ಕಳು ನಡುವಿನ ಸಂಬಂಧವನ್ನು ದೂರ ಮಾಡಲು ಶುರು ಮಾಡಿದ್ದು.
ಮಕ್ಕಳು ಅತ್ತರೆ, TV Mobile ತೋರಿಸಿಬಿಡೋದು, ಅದನ್ನ ಸಮಾಧಾನ ಮಾಡುವುದು ಬಿಟ್ಟು, Mobile, TV ತೋರಿಸುವ ಕೆಲಸ ಮಾಡುವುದರಿಂದ, ತಾಯಿ ಮಗು, ತಂದೆ ಮಗುವಿನ ನಡುವಿನ ಮಾತುಕತೆ ಕಡಿಮೆಯಾಗುತ್ತದೆ. ಮುಂಚೆ ಎಲ್ಲಾ ಮಕ್ಕಳು ಅಪ್ಪ ಅಮ್ಮನ ಬಳಿ ಕಥೆ ಹೇಳು ಎಂದು ಕೇಳುತ್ತಿದ್ದರು. ಕಥೆಯನ್ನು ಇಮ್ಯಾಜಿನ್ ಮಾಡಿಕ“ಳ್ಳುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ಏನಾದರೂ ವಿಷಯ ತಿಳಿಯಬೇಕು ಅಂದ್ರೆ, ಅವರು ಗೂಗಲ್ ಸರ್ಚ್ ಮಾಡುತ್ತಾರೆ. ಇದರಿಂದ ಅವರ ಯೋಚನಾ ಲಹರಿ ಕುಗ್ಗುತ್ತಿದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.