Thursday, November 21, 2024

Latest Posts

Criminal cases : ಪೋಷಕರೇ ತಪ್ಪದೇ ಈ ಸುದ್ದಿ ನೋಡಿ ; ಬೆಚ್ಚಿಬೀಳಿಸುತ್ತೇ ಸೂಸೈಡ್ ವರದಿ!

- Advertisement -

ಈ ಸುದ್ದಿ ನಿಜಕ್ಕೂ ಕನ್ನಡಿಗರನ್ನ ಬೆಚ್ಚಿಬೀಳಿಸುವಂತಿದೆ. ಸೂಸೈಡ್ ಕೇಸ್​​ನಲ್ಲಿ ಮಹಾರಾಷ್ಟ್ರವೇ ನಂಬರ್ 1 ಆಗಿದ್ರೆ, ಕರ್ನಾಟಕ 4ನೇ ಸ್ಥಾನದಲ್ಲಿದೆ. ದೇಶದ ಭವಿಷ್ಯ ರೂಪಿಸಲಿರುವ ವಿದ್ಯಾರ್ಥಿಗಳೇ ಸೂಸೈಡ್​​ಗೆ ಬಲಿಯಾಗ್ತಾ ಇದ್ದಾರಾ? ಹಾಗಿದ್ರೆ ದಿನೇ ದಿನೇ ಸಾವಿನ ಪ್ರಮಾಣ ಜಾಸ್ತಿಯಾಗಲು ಕಾರಣವೇನು

ಹೀಗೊಂದು ಆತಂಕಕಾರಿ ವಿಷಯವನ್ನ ಎನ್​ಜಿಒ ವರದಿಯೊಂದು ಹೇಳಿದೆ. ದೇಶದ ಫ್ಯೊಚರ್ ಆಗಿರುವ ವಿದ್ಯಾರ್ಥಿಗಳೇ ಇಂದು ಸೂಸೈಡ್ ಮಾಡಿಕೊಳ್ತಾ ಇದ್ದಾರಂತೆ… ಅದರಲ್ಲೂ ಅಚ್ಚರಿಯ ವಿಷ್ಯ ಅಂದ್ರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಸದ್ಯ ರೈತರ ಸಾವಿನ ಸಂಖ್ಯೆಯನ್ನ ಕೂಡ ಮೀರಿಸಿವೆಯಂತೆ… ಇಂತಹ ಆತಂಕಕಾರಿ ವಿಷ್ಯವನ್ನ ಜಾಗತಿಕವಾಗಿ ಶಾಲಾ ಮಕ್ಕಳಿಗೆ ಹಲವಾರು ರೀತಿಯಲ್ಲಿ ನೆರವು ನೀಡುವಂತ “ಐಸಿ3″ನಾನ್ ಗವರನ್ಮೆಂಟ್ ಸಂಸ್ಥೆಯೊಂದು, 2021-2022 ಸಾಲಿನ ನ್ಯಾಶನಲ್ ಕ್ರೈಂ ರೆಕಾರ್ಡ್​ ಬ್ಯುರೋ ವರದಿಯ ಆಧಾರದ ಮೇಲೆ ಹೇಳಿದೆ.

ಹಾಗಿದ್ರೆ ಆ ಭಯಾನಕ ವರದಿಯಲ್ಲಿ ಏನಿದೆ ಅಂತಾ ನೋಡೊದಾದ್ರೆ.. 2021 ರಲ್ಲಿ ದೇಶದ್ಯಾಂತ 13,089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇ.4.5 ರಷ್ಟು ಹೆಚ್ಚಿದೆ.. ಕಳೆದ ವರ್ಷ ದೇಶದಲ್ಲಿ ಆದ ಒಟ್ಟು ಸೂಸೈಡ್ ಕೇಸ್​​ನಲ್ಲಿ ವಿದ್ಯಾರ್ಥಿಗಳ ಪಾಲು ಶೇ.8ರಷ್ಟಿದೆ. ಜೊತೆಗೆ 2002ರಿಂದ 2011 ವರ್ಷಕ್ಕೆ ಹೋಲಿಸಿದ್ರೆ 2012 ರಿಂದ 2021 ವರ್ಷದವರೆಗೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಶೇ, 57 ರಷ್ಟು ಹೆಚ್ಚಿದೆ. ಅಂದ್ರೆ ಒಟ್ಟು 97,571 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತೊಂದು ಬೆಚ್ಚಿಬೀಳಿಸೋ ಅಂಶ ಅಂದ್ರೆ ದೇಶದಲ್ಲಿ ಮಹಾರಾಷ್ಟ್ರ ವಿದ್ಯಾರ್ಥಿಗಳ ಆತ್ಮಹತ್ಯೆ ಕೇಸ್​ನಲ್ಲಿ ಮೊದಲ ಸ್ಥಾನವನ್ನ ಪಡೆದುಕೊಂಡಿದೆ. 2021 ರಲ್ಲಿ 1834 ಆತ್ಮಹತ್ಯೆ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಇನ್ನು ಉಳಿದಂತೆ ಮಧ್ಯಪ್ರದೇಶ ದಲ್ಲಿ 1308, ತಮಿಳುನಾಡಿನಲ್ಲಿ 1246 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿ ಹೇಳಿದೆ. ವಿಶೇಷವಾಗಿ ಕರ್ನಾಟಕದಲ್ಲೂ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ. ಸುಮಾರು 855 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಹೀಗಾಗಿ ದೇಶದಲ್ಲಿ ಕರ್ನಾಟಕ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.

ದೇಶದ ಒಟ್ಟು ವಿದ್ಯಾರ್ಥಿಗಳ ಸಾವಿನಲ್ಲಿ ಈ 4 ರಾಜ್ಯಗಳ ಪಾಲು ಶೇ.46ರಷ್ಟಿದೆ.. ಜೊತೆಗೆ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲು ಕೂಡ ಶೇ.29ರಷ್ಟಿದೆ ಎಂದು ವರದಿ ಹೇಳಿದೆ.ವಿಶೇಷ ಅಂದ್ರೆ
2021 ಮತ್ತು ಅದರ ಹಿಂದಿನ 6 ವರ್ಷಗಳಲ್ಲಿ ರೈತರ ಆತ್ಮಹತ್ಯೆ ಶೇ.12ರಷ್ಟು ಇಳಿದಿತ್ತು. ಅದರೆ ವಿಪರ್ಯಾಸ ಇದೀಗ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಶೇ.62ರಷ್ಟು ಏರಿಕೆಯಾಗಿದೆ. 2021ರಲ್ಲಿ 10881 ರೈತರು ಮತ್ತು 13089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಸ್ಷಷ್ಟಪಡಿಸಿದೆ.

ಹಾಗಿದ್ರೆ ವಿದ್ಯಾರ್ಥಿಗಳ ಸಾಲು ಸಾಲು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾದ್ರೂ ಏನು ಅನ್ನೋದನ್ನ ನೋಡೋದಾದ್ರೆ, ವಿದ್ಯಾರ್ಥಿಗಳ ಮೇಲೆ ಹೆಚ್ಚಾಗುತ್ತಿರುವ ಶೈಕ್ಷಣಿಕ ಒತ್ತಡ, ಉದ್ಯೋಗ ಆಯ್ಕೆಯ ಒತ್ತಡ, ಹಾಗೂ ಕಾಲೇಜಿನಲ್ಲಿ ನಡೆಯುವ ಡೊನೇಶನ್ ಅವ್ಯವಹಾರ, ರ್‍ಯಾಗಿಂಗ್‌ ಮತ್ತು ಮಾನಸಿಕ ಒತ್ತಡದ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಗುರಿಯಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ. ಇಂತಹದ್ದೊಂದು ವರದಿ ಬಂದಿರುವುದು ನಿಜಕ್ಕೂ ದೇಶವನ್ನು ತಲ್ಲಣಗೊಳಿಸಿದೆ.

- Advertisement -

Latest Posts

Don't Miss