Hubballi : ಪಾರ್ಕಿಂಗ್ ಸಮಸ್ಯೆ ಕುರಿತು ಕರ್ನಾಟಕ ಟಿವಿ ವರದಿ ಬಿತ್ತರಿಸಿದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೇತ್ತುಕೊಂಡ ಮಾರ್ಷಲ್ ನಿಯೋಜನೆ ಮಾಡಿದ್ದಾರೆ. ಕರ್ನಾಟಕ ಟಿವಿ ಮಾಧ್ಯಮದ ವರದಿ ಪ್ರಸಾರಗೊಂಡ ಕೆಲವು ಗಂಟೆಗಳಲ್ಲಿಯೇ ಇಂಪ್ಯಾಕ್ಟ್ ಆಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರದ ಜನರಿಗೆ ತ್ವರಿತ ಸಾರಿಗೆ ಸೇವೆ ನೀಡುವ ಬಿ.ಆರ್.ಟಿ.ಎಸ್ ಕಾರಿಡಾರಿನ ಫುಟ್ ಪಾತ್ ಮೇಲೆ ಬೈಕ್ ನಿಲ್ಲಿಸುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಹೌದು.. ರಾಜ್ಯದ ಏಕೈಕ ತ್ವರಿತ ಸೇವೆ ಖ್ಯಾತಿಯ ಹು-ಧಾ ಬಿಆರ್‌ಟಿಎಸ್ ಕೆಲ ಬಸ್ ನಿಲ್ದಾಣಗಳ ಪಾದಚಾರಿ ಜಾಗ ಈಗ ಪಾರ್ಕಿಂಗ್ ಸ್ಥಳವಾಗಿ ಬದಲಾಗುತ್ತಿವೆ. ಹು-ಧಾ ಮಧ್ಯೆ ಸಂಚರಿಸುವ ಚಿಗರಿ ಬಸ್ ನಿಲ್ದಾಣಗಳಲ್ಲಿ ಫುಟ್‌ಪಾತ್ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಅಮರಗೋಳದ ಎಪಿಎಂಸಿ 3ನೇ ದ್ವಾರದ ಬಸ್ ನಿಲ್ದಾಣ, ನವನಗರದ ಬಸ್ ನಿಲ್ದಾಣ, ಆರ್‌ಟಿಓ ಬಸ್ ನಿಲ್ದಾಣ ಹಾಗೂ ಇಸ್ಕಾನ್ ಮಂದಿರ ಬಸ್ ನಿಲ್ದಾಣದ ಪ್ರಯಾಣಿಕರು ಅಲೆದಾಡುವ ಫುಟ್‌ಪಾತ್‌ಗಳಲ್ಲಿ ಬೈಕ್‌ಗಳ ಹಾವಳಿ ಹೆಚ್ಚಾಗಿದೆ. ಈ ಕುರಿತು ಕರ್ನಾಟಕ ಟಿವಿ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಗೆ ಎಚ್ಚೇತ್ತುಕೊಂಡ ಅಧಿಕಾರಿಗಳು ಮಾರ್ಷಲ್ ನಿಯೋಜನೆ ಮಾಡಿ ಸಮಸ್ಯೆಗೆ ಬ್ರೇಕ್ ಹಾಕಿದ್ದಾರೆ.
ಇನ್ನೂ ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ವಾಹನಗಳನ್ನು ಫುಟ್ ಪಾತ್ ಮೇಲೆಯೇ ಪಾರ್ಕಿಂಗ್ ಮಾಡುತ್ತಿರುವುದು ಪಾದಾಚಾರಿಗಳು ನಡುರಸ್ತೆಯಲ್ಲಿಯೇ ಓಡಾಡುವಂತಾಗಿದೆ. ಹುಬ್ಬಳ್ಳಿಯ ಶಿರೂರ್ ಪಾರ್ಕಿನಲ್ಲಿ ಸೈಕಲ್ ಪಾತ್ ಎಂದು ಸೈಕಲ್ ಸಂಚಾರಕ್ಕೆ ಸ್ಥಳಾವಕಾಶ ನೀಡಿದೆ. ಆದರೆ ಇದು ಬೈಕ್ ಹಾಗೂ ಕಾರ್ ಪಾರ್ಕಿಂಗ್ ಅಡ್ಡೆಯಾಗಿರುವುದು ಪಾದಚಾರಿಗಳಿಗೂ ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.
Letter : ಸಿಬ್ಬಂದಿ ವೇತನಕ್ಕೆ ಸರ್ಕಾರಕ್ಕೆ ಪತ್ರ : ಶಕ್ತಿ ತುಂಬಲು ಬೇಕಿದೆ 66 ಕೋಟಿ ನೆರವು…!
School : ಎಣ್ಮಕಜೆ ಗ್ರಾ.ಪಂ. ಸಾಂತ್ವನ ವಿಶೇಷ ಬಡ್ಸ್ ಶಾಲೆ ನೂತನ ಕಟ್ಟಡ ಉದ್ಘಾಟನೆ