Friday, July 11, 2025

Latest Posts

Parking : ಪುಟ್ ಪಾತ್ ಮೇಲೆ ಪಾರ್ಕಿಂಗ್: ಹುಬ್ಬಳ್ಳಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಆಡಿದ್ದೇ ಆಟ..!

- Advertisement -

Hubballi News :  ಅವಳಿನಗರದ ಜನರಿಗೆ ಎಲ್ಲಿ ವಾಹನ ಪಾರ್ಕ್ ಮಾಡಬೇಕೋ ಎಲ್ಲಿ ಮಾಡಬಾರದೋ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಬೆಳೆದಂತೆ ಪಾರ್ಕಿಂಗ್ ಸಮಸ್ಯೆ ಕೂಡ ಉಲ್ಬಣಗೊಳ್ಳುತ್ತಿದೆ. ಈಗ ಅವಳಿನಗರದ ಪಾರ್ಕಿಂಗ್ ಸಮಸ್ಯೆ ಚಿತ್ರಣವನ್ನು ಬಿಚ್ಚಿಡುತ್ತಿದೆ ನಿಮ್ಮ  ಕರ್ನಾಟಕ ಟಿವಿ….

ರಾಜ್ಯದ ಏಕೈಕ ತ್ವರಿತ ಸೇವೆ ಖ್ಯಾತಿಯ ಹು-ಧಾ ಬಿಆರ್‌ಟಿಎಸ್ ಕೆಲ ಬಸ್ ನಿಲ್ದಾಣಗಳ ಪಾದಚಾರಿ ಜಾಗ ಈಗ ಪಾರ್ಕಿಂಗ್ ಸ್ಥಳವಾಗಿ ಬದಲಾಗುತ್ತಿವೆ. ಹು-ಧಾ ಮಧ್ಯೆ ಸಂಚರಿಸುವ ಚಿಗರಿ ಬಸ್ ನಿಲ್ದಾಣಗಳಲ್ಲಿ ಫುಟ್‌ಪಾತ್ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಅಮರಗೋಳದ ಎಪಿಎಂಸಿ 3ನೇ ದ್ವಾರದ ಬಸ್ ನಿಲ್ದಾಣ, ನವನಗರದ ಬಸ್ ನಿಲ್ದಾಣ, ಆರ್‌ಟಿಓ ಬಸ್ ನಿಲ್ದಾಣ ಹಾಗೂ ಇಸ್ಕಾನ್ ಮಂದಿರ ಬಸ್ ನಿಲ್ದಾಣದ ಪ್ರಯಾಣಿಕರು ಅಲೆದಾಡುವ ಫುಟ್‌ಪಾತ್‌ಗಳಲ್ಲಿ ಬೈಕ್‌ಗಳ ಹಾವಳಿ ಹೆಚ್ಚಾಗಿದೆ.

ಇಲ್ಲಿಯ ಸುತ್ತಮುತ್ತಲಿನ ಸಾರ್ವಜನಿಕರು ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಬಸ್ ನಿಲ್ದಾಣದ ಫುಟ್‌ಪಾತ್‌ಗಳ ಮೇಲೆ ಬೈಕ್ ನಿಲ್ಲಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಾರೆ. ಕೆಲಸ ಮುಗಿಸಿಕೊಂಡು ಮರಳಿ ಸಂಜೆ ಬಂದು ಬೈಕ್ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಇನ್ನೂ ಕೆಲವರು ಬಸ್ ನಿಲ್ದಾಣಗಳ ಪಾದಚಾರಿ ಸ್ಥಳಗಳನ್ನು ಬೈಕ್ ಪಾರ್ಕಿಂಗ್ ಮಾಡಿಕೊಂಡಿದ್ದಾರೆ.

ಇನ್ನೂ ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ವಾಹನಗಳನ್ನು ಫುಟ್ ಪಾತ್ ಮೇಲೆಯೇ ಪಾರ್ಕಿಂಗ್ ಮಾಡುತ್ತಿರುವುದು ಪಾದಾಚಾರಿಗಳು ನಡುರಸ್ತೆಯಲ್ಲಿಯೇ ಓಡಾಡುವಂತಾಗಿದೆ. ಹುಬ್ಬಳ್ಳಿಯ ಶಿರೂರ್ ಪಾರ್ಕಿನಲ್ಲಿ ಸೈಕಲ್ ಪಾತ್ ಎಂದು ಸೈಕಲ್ ಸಂಚಾರಕ್ಕೆ ಸ್ಥಳಾವಕಾಶ ನೀಡಿದೆ. ಆದರೆ ಇದು ಬೈಕ್ ಹಾಗೂ ಕಾರ್ ಪಾರ್ಕಿಂಗ್ ಅಡ್ಡೆಯಾಗಿರುವುದು ಪಾದಚಾರಿಗಳಿಗೂ ಸಂಕಷ್ಟ ತಂದೊಡ್ಡಿದೆ.

ಜನರ ಓಡಾಟಕ್ಕೆಂದೇ ಸೀಮಿತವಾದ ಪಾದಚಾರಿ ಮಾರ್ಗದಲ್ಲಿ ಬೈಕ್ ನಿಲ್ಲಿಸುತ್ತಿರುವುದರಿಂದ ಬಸ್ ಪ್ರಯಾಣಿಕರು, ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಸಮಸ್ಯೆ ಎದುರಾಗಿದೆ. ಪ್ರಯಾಣಿಕರ ಸುರಕ್ಷೆಯ ಸೌಲಭ್ಯ ಒದಗಿಸಲು ಫುಟ್‌ಪಾತ್ ನಿರ್ಮಿಸಲಾಗಿದೆ. ಬೈಕ್ ಅಲ್ಲಿ ನಿಲ್ಲಿಸುವುದರಿಂದ ಪ್ರಯಾಣಿಕರು ರಸ್ತೆಯಲ್ಲಿ ಅಲೆದಾಡುತ್ತಿದ್ದು, ಚಿಗರಿ ಬಸ್ ಸಂಚಾರಕ್ಕೂ ಸಮಸ್ಯೆಯಾಗಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ.

Siddaramaiah : ಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ…!

Naleen Kumar Kateel : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ : ಕಟೀಲ್

Rama Kshathriya : ಕಾರ್ಕಳ ರಾಮ ಕ್ಷತ್ರೀಯ ಸಂಘದ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ

- Advertisement -

Latest Posts

Don't Miss