Friday, April 18, 2025

Latest Posts

Patna ; ನೀಟ್ ಹಗರಣದಲ್ಲಿ ಸಂಘಟಿತ ಜಾಲ!

- Advertisement -

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ತನಿಖೆ ನಡೆಸುತ್ತಿರುವ ಬಿಹಾರ ಸರ್ಕಾರದ ಆರ್ಥಿಕ ಅಪರಾಧಗಳ ಘಟಕ (ಇಒಯು) ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ ನೀಟ್-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದು ಸ್ಪಷ್ಟವಾಗಿದೆ. ಇದರ ಹಿಂದೆ ಸಂಘಟಿತಜಾಲದ ಕೈವಾಡವಿದೆ ಎಂದು ತಿಳಿಸಲಾಗಿದೆ.
ಮೇ.5ರಂದು ನಡೆದಿದ್ದನೀಟ್ ಪರೀಕ್ಷೆವೇಳೆ ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆದ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಬಿಹಾರ ಆರ್ಥಿಕ ಅಪರಾಧ ಘಟಕ ತನಿಖೆ ವಹಿಸಿಕೊಂಡು ಈವರೆಗೆ 18 ಜನರನ್ನು ಬಂಧಿಸಿದೆ. ಈಗ ತಾನು ಈವರೆಗೆ ನಡೆಸಿದ ತನಿಖೆಯ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ವರದಿ ರೂಪದಲ್ಲಿ ನೀಡಿದೆ.
ತನಿಖೆಯಲ್ಲಿ ನಮಗೆ 3 ಅಂಶಸ್ಪಷ್ಟವಾಗಿವೆ. ಇದುವರೆಗಿನ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಶ್ನೆಪತ್ರಿಕೆ ಸೋರಿಕೆ ಸ್ಪಷ್ಟವಾಗಿದೆ. ಈ ಹಗರಣದಲ್ಲಿ ಅಂತಾರಾಜ್ಯ ಗ್ಯಾಂಗ್ ಶಾಮೀಲಾಗಿದೆ. ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಉತ್ತರ ರವಾನಿಸುವಲ್ಲಿ ಕುಖ್ಯಾತವಾಗಿರುವ ಬಿಹಾರದ ‘ಸಾಲ್ವರ್ಸ್ ಗ್ಯಾಂಗ್​ನ ಪಾತ್ರವಿದೆ ಎಂದು 6 ಪುಟದ ವರದಿಯಲ್ಲಿ ಬಿಹಾರ ಪೊಲೀಸರು ಹೇಳಿದ್ದಾರೆ.
ಬಂಧಿತರು ಸೋರಿಕೆ ಆದ ಪ್ರಶ್ನೆಪತ್ರಿಕೆಯ ಜೆರಾಕ್ಸ್ ಪ್ರತಿಸುಟ್ಟಿದ್ದು, ಅದರ ಭಾಗಶಃ ಪ್ರತಿ ಜಪ್ತಿ ಮಾಡಲಾಗಿದೆ. ವಿಚಾರಣೆ ಮತ್ತು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಸೋರಿಕೆ ಆಗಿದ್ದು ಸ್ಪಷ್ಟವಾಗಿದೆ. ಇದಲ್ಲದೆ ಜಾರ್ಖಂಡ್​ನಲ್ಲಿ ಕೆಲವರನ್ನು ಬಂಧಿಸಲಾಗಿದೆ. ಹೀಗಾಗಿ ಸಾಲ್ವರ್‍ಗ್ಯಾಂಗ್ ಹೆಸರಿನ ಪ್ರಶ್ನೆಪ್ರತ್ರಿಕೆ ಸೋರಿಕೆಯ ಅಂತಾರಾಜ್ಯ ಜಾಲಇದರಲ್ಲಿ ಭಾಗಿಯಾಗಿದ್ದು ಸ್ಪಷ್ಟವಾಗಿದೆ ಎಂದು ವರದಿ ವಿವರಿಸಿದೆ.
ನೀಟ್-ಯುಜಿಯಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,563 ಅಭ್ಯರ್ಥಿಗಳಿಗೆ ಭಾನುವಾರ ಮರುಪರೀಕ್ಷೆ ನಡೆದಿದ್ದು, ಈ ಪೈಕಿ 813 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದಾರೆ. 750 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮೇ 5ರಂದು 6 ಕೇಂದ್ರಗಳಲ್ಲಿ ತಡವಾಗಿ ಪರೀಕ್ಷೆ ಆರಂಭವಾಗಿತ್ತು ಎಂಬ ಕಾರಣ ನೀಡಿ ಆ ಸಮಯ ನಷ್ಟ ಸರಿದೂಗಿಸಲು 1563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕನೀಡಲಾಗಿತ್ತು. ಆದರೆ ಅದು ವಿವಾದಕ್ಕೆ ಈಡಾದ ಕಾರಣ ಈ ಅಂಕಪಡೆದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ಗ್ರೇಸ್ ಅದ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ಸುಪ್ರೀಂಗೆ ತಿಳಿಸಿತ್ತು. ಈ ಪ್ರಕಾರ 7 ಕಡೆ ಭಾನುವಾರ ಮರುಪರೀಕ್ಷೆ ನಡೆಸಲಾಯಿತು.

- Advertisement -

Latest Posts

Don't Miss