Monday, July 22, 2024

Latest Posts

ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ

- Advertisement -

National News: ಹೋದ ತಿಂಗಳಷ್ಟೇ ಬಾಲಿವುಡ್, ಟಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್, ತಮ್ಮ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಎಂಬ ಬಾಲಿವುಡ್ ನಿರ್ಮಾಪಕನನ್ನು, ಗೋವಾದಲ್ಲಿ ವಿವಾಹವಾಗಿದ್ದರು.

ಬಳಿಕ ವಿದೇಶಕ್ಕೆ ಹೋಗಿ, ಈ ಜೋಡಿ ಹನಿಮೂನ್ ಮುಗಿಸಿ, ಬಂದಿತ್ತು. ಆದರೆ ಇದೀಗ ಮದುವೆಯಾಗಿ ಕೇವಲ ಒಂದೇ ತಿಂಗಳಿಗೆ ಜಾಕಿ ಕೋಟಿ ಕೋಟಿ ಸಾಲ ಮಾಡಿಕೊಂಡು, ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. 250 ಕೋಟಿ ಸಾಲದ ಸುಳಿಯಲ್ಲಿ ರಾಾಕುಲ್ ಪತಿ ಇದ್ದು, ತಮ್ಮ ಆಸ್ತಿ ಮಾರಾಟ ಮಾಡಿ, ಸಾಲ ತೀರಿಸಲು ಜಾಕಿ ನಿರ್ಧರಿಸಿದ್ದಾರೆ.

ಬಡೇ ಮಿಯಾ ಚೋಟೆ ಮಿಯಾ ಎಂಬ ಸಿನಿಮಾಗೆ ಜಾಕಿ ಭಗ್ನಾನಿ 320 ಕೋಟಿ ಬಂಡವಾಳ ಹಾಕಿದ್ದರು. ಆದರೆ ಈ ಸಿನಿಮಾ ಫ್ಲಾಪ್ ಆಯಿತು. ಹಾಗಾಗಿ ನಷ್ಟವಾಗಿದೆ. ಅಲ್ಲದೇ, ಈ ಸಿನಿಮಾದಲ್ಲಿ ಕೆಲಸ ಮಾಡಿದ ಕೆಲ ಕೆಲಸಗಾರರಿಗೆ ಜಾಕಿ ಇನ್ನು ಕೂಡ ಸಂಬಳವನ್ನೇ ನೀಡಿಲ್ಲ.

ಹೀಗಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ಜಾರಿ, ತಮ್ಮ 7 ಅಂತಸ್ತಿನ ಆಫೀಸನ್ನು ಮಾರಾಟ ಮಾಡಿದ್ದಾರೆ. ಅಲ್ಲದೇ, ಇವರ ಸಂಸ್ಥೆಯಲ್ಲಿ ಕೆಲಸ ಮಾಡುವ 80ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆದು, ಮನೆಗೆ ಕಳಿಸಲಾಗಿದೆ.

ಒಟ್ಟಾರೆಯಾಗಿ, ಕೋಟ್ಯಾಧೀಶನಾಗಿದ್ದ ಪತಿಗೆ ಬಂದ ಈ ಗತಿಯಿಂದ, ನಿರ್ಮಾಪಕನನ್ನು ಮದುವೆಯಾಗಿ ಜೀವನದಲ್ಲಿ ಸೆಟಲ್ ಆಗಿ ಬಿಡೋಣ ಅಂದುಕೊಂಡಿದ್ದ ರಾಕುಲ್ ಪ್ರೀತ್‌ಗೆ ಮಾತ್ರ, ಭಾರೀ ನಿರಾಸೆಯುಂಟಾಗಿರಬಹುದು.

ಸೂರಜ್ ರೇವಣ್ಣ ಕೇಸ್ ಬಗ್ಗೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದಿಷ್ಟು..

ಹುಬ್ಬಳ್ಳಿ ಆಕಾಶ್ ಹಿರೇಮಠ ಕೊ*ಲೆ ಪ್ರಕರಣ: 8 ಜನರ ಬಂಧನ

ಪ್ರಾಥಮಿಕ ತನಿಖೆಯಲ್ಲಿ ತಲೆಗೆ ಗಾಯವಾಗಿರುವ ಹಿನ್ನಲೆ ಆಕಾಶ ಸಾವನ್ನಪ್ಪಿದ್ದಾನೆ : ಕಮೀಷನರ್..

- Advertisement -

Latest Posts

Don't Miss