Hubli News: ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದ ವಾಹನಗಳ ಹರಾಜಿಗೆ ಜನರು ಮುಗಿಬಿದ್ದರು. ಹುಬ್ಬಳ್ಳಿ ಗ್ರಾಮೀಣ ಹೊರಠಾಣೆ ಬಂಡಿವಾಡದಲ್ಲಿ ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡಿದ್ದ 12 ದ್ವಿಚಕ್ರ ವಾಹನಗಳ ಹರಾಜು ಪ್ರಕ್ರಿಯೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನೂರಾರು ಜನ ಹಾಜರಿದ್ದರು. ಬಳಿಕ ಪಿಎಸ್ಐ ಸಚಿನ್ ಅಲಮೇಲ್ಕರ್ ವಾಹನ ಹರಾಜು ಪ್ರಕ್ರಿಯೆ ನಡೆಸಿದರು.
ಮುಂಗಡ 5,000 ಸಾವಿರ ರೂ. ಪಾವತಿಸಿ ರಸೀದಿ ಪಡೆದವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ ಜನರು ಉತ್ತಮ ಮಟ್ಟದಲ್ಲಿ ಬಿಡ್ ಕೂಗಲು ಆರಂಭಿಸಿದರು. ವಾಹನಗಳು ಹೆಚ್ಚಿನ ಬೆಲೆಗೆ ಹರಾಜಾದವು.
ಇನ್ನು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 12 ವಾಹನಗಳ ವಾರಸುದಾರರು ಪತ್ತೆಯಾಗದ ಕಾರಣ ಹರಾಜು ಮಾಡಲಾಗುತ್ತಿದೆ. ಈ ವಾಹನಗಳನ್ನು ಸಾರ್ವಜನಿಕ ಬಹಿರಂಗ ಹರಾಜು ಮಾಡಲು ನ್ಯಾಯಾಲಯದಿಂದ ಅನುಮತಿ ಪಡೆದಿದೆ. ಬಂಡಿವಾಡದಲ್ಲಿನ ಗ್ರಾಮೀಣ ಠಾಣೆ ಆವರಣದಲ್ಲಿ ಹರಾಜು ಹಾಕಲಾಗುತ್ತಿದೆ ಎಂದು ಗ್ರಾಮೀಣ ಪಿಎಸ್ಐ ಸಚಿನ್ ತಿಳಿಸಿದರು.