- Advertisement -
ಕರ್ನಾಟಕ ಟಿವಿ : ಇನ್ನು ವಿಶಾಖಪಟ್ಟಣಂ ವಿಷಾನಿಲ ದುರಂತಕ್ಕೆ ಕಾರಣವಾಗಿದ್ದ ಎಲ್ ಜಿ ಪಾಲಿಮರ್ಸ್ ಕಂಪನಿ ಶಾಶ್ವತವಾಗಿ ಮುಚ್ಚುವಂತೆ ಒತ್ತಾಯಿಸಿ ದುರಂತದಲ್ಲಿ ಸಾವನ್ನಪ್ಪಿದ್ದ ಮೃತದೇಹವನ್ನ ಇಟ್ಟು ನೂರಾರು ಜನ ಕಂಪನಿ ಮುಂದೆ ಪ್ರತಿಭಟನೆ ಮಾಡಿದ್ರು. ಮೊನ್ನೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ 11 ಮಂದಿ ಮೃತದೇಹವನ್ನ ಇಂದು ಆಸ್ಪತ್ರೆಯಿಂದ ಕೊಡಲಾಯ್ತು.. ಮೃತರ ಸಂಬಂಧಿಕರು ಗ್ರಾಮಸ್ಥರು ನೇರವಾಗಿ ಶವಗಳನ್ನ ಫ್ಯಾಕ್ಟರಿ ಮುಂದೆ ಇಟ್ಟು ಈ ಕೂಡಲೇ ಫ್ಯಾಕ್ಟರಿಯನ್ನ ಶಾಶ್ವತವಾಗಗಿ ಮುಚ್ಚುವಂತೆ ಒತ್ತಾಯಿಸಿದ್ರು.. ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ಕಾರರ ಮನವೊಲಿಸಿ ಮೃತ ದೇಹಗಳನ್ನಅಂತ್ಯ ಕ್ರಿಯೆ ಮಾಡಿಸಿದ್ದಾರೆ.. ಇನ್ನು ಆಂಧ್ರ ಸರ್ಕಾರ ಮೃತರ ಕುಟುಂಬಗಳಿಗೆ 1 ಕೋಟಿ ಪರಿಹಾರ ನೀಡಿದೆ. ಅಲ್ಲದೇ ರಾಷ್ಟ್ರೀಯ ಹಸಿರು ಪೀಠ ಎಲ್ ಜಿ ಪಾಲಿಮರ್ಸ್ ಗೆ 50 ಕೋಟಿ ದಂಡ ಕೂಡ ವಿಧಿಸಿದೆ.
- Advertisement -