Sunday, September 22, 2024

Latest Posts

NEET ವಿವಾದ ಸಿಬಿಐ ತನಿಖೆ ಕೋರಿ ಅರ್ಜಿ: ಕೇಂದ್ರ ಸರ್ಕಾರ, NTAಗೆ ಸುಪ್ರೀಂ ನೊಟೀಸ್

- Advertisement -

Central News: ನೀಟ್.. ಮೆಡಿಕಲ್ ಕೋರ್ಸ್ ಗೆ ಪ್ರವೇಶ ಪಡೆಯಬೇಕೆಂದು ಕನಸು ಹೊತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಪರೀಕ್ಷೆ.. ಈ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆಯಲು ವಿದ್ಯಾರ್ಥಿಗಳು ಹಗಲು ಇರುಳೆನ್ನದೆ ಅಭ್ಯಾಸ ಮಾಡಿರುತ್ತಾರೆ. ಆದ್ರೆ ಈ ಬಾರಿ ನೀಟ್ ಪರೀಕ್ಷೆ ಸುತ್ತ ಸುತ್ತಿಕೊಂಡ ವಿವಾದಗಳು ವಿದ್ಯಾರ್ಥಿಗಳಿಗೆ ಆಘಾತ ಮೂಡಿಸಿದೆ.

ಮೊದಲಿಗೆ ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗಳು ಹಬ್ಬಿದವು. ಬಳಿಕ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡಲು ಅವಕಾಶ ನೀಡಲಾಗಿತ್ತೆಂಬ ಆರೋಪ ಕೇಳಿಬಂತು. ಫಲಿತಾಂಶ ಪ್ರಕಟವಾದ ದಿನ 67 ವಿದ್ಯಾರ್ಥಿಗಳು ಫಸ್ಟ್ ರ್ಯಾಂಕ್ ಪಡೆದುಕೊಂಡಿದ್ದು ಅಚ್ಚರಿ ಮೂಡಿಸಿತು. ಹಾಗೆ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಎಕ್ಸಾಂ ಬರೆದಿರೋ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರೋದು ವಿವಾದಕ್ಕೆ ಕಾರಣವಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೀಟ್ ಪರೀಕ್ಷೆಯಲ್ಲಿನ ಇತರ ಅಕ್ರಮಗಳ ಆರೋಪಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಮನವಿಯ ಕುರಿತು ಸುಪ್ರೀಂಕೋರ್ಟ್ ಇಂದು ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.

ಮುಂದಿನ ವಿಚಾರಣೆಯನ್ನು ಜುಲೈ 8 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೃಪಾಂಕಗಳನ್ನು ನೀಡಿದ್ದ 1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸಲು NTA ನಿರ್ಧರಿಸಿದೆ. ಮರು ಪರೀಕ್ಷೆಯ ಫಲಿತಾಂಶವನ್ನು ಜೂನ್ 30 ರಂದು ಪ್ರಕಟಿಸಲಾಗುವುದು, ಜುಲೈ 6 ರಂದು ಪ್ರಾರಂಭವಾಗುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಎನ್ ಟಿಎ ಹೇಳಿದೆ.

- Advertisement -

Latest Posts

Don't Miss