ಇತ್ತೀಚೀನ ದಿನಗಳಲ್ಲಿ ಈ ಪ್ರವಾಸಿ ತಾಣಗಳಿಗೆ ಹೋಗಿ ಸೆಲ್ಫಿ ಪೋಟೋ ಹುಚ್ಚಿಗೆ ಬಿದ್ದು ಪ್ರಾಣ ಕಳೆದಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಲೇ ಇವೆ. ಸೋಷಿಯಲ್ ಮಿಡಿಯಾ ಲೈಕ್ಸ್ ಕಮೆಂಟ್ಸ್ ಗಳಿಗಾಗಿ ಸಾಹಸ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗುವುದು ಅಥವಾ ಬೆಟ್ಟದ ತುದಿಗೆ ಹೋಗಿ ಕೆಳಗೆ ಬೀಳುವುದು ಹೀಗೆ ಆಗುತ್ತಲೇ ಇವೆ.
ಇದಕ್ಕೆ ಮತ್ತೊಂದು ಉದಾಹರಣೆ ಎಂಬುವಂತೆ ಮೈಸೂರಿನಲ್ಲಿ ಪ್ರವಾಸಕ್ಕಾಗಿ ಬಂದಿದ್ದವನೊಬ್ಬ ಕಾವೇರಿ ನದಿ ಬಳಿ ಫೋಟೋ ತೆಗೆದುಕೊಳ್ಳಲು ಹೋಗಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಆಯತಪ್ಪಿ ಬಿದ್ದು ನಾಪತ್ತೆಯಾದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಈ ದುರಂತದ ವಿಡಿಯೋ ಫೋನ್ ನಲ್ಲಿ ಸೆರೆಯಾಗಿದ್ದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ೩೬ ವರ್ಷದ ಮಹೇಶ್ ಮೈಸೂರಿನಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ನಿರ್ಮಾಣ ಹಂತದಲ್ಲಿದ್ದ ಸೇತುವೆ ಮೇಲೆ ಫೋಟೋ ತೆಗೆದುಕೊಳ್ಳಲು ಹೋಗಿ ಆಯತಪ್ಪಿ ಬಿದ್ದಿದ್ದ, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಅವರಿಗಾಗಿ ಹುಡುಕಾಟ ನಡೆಸುತ್ತಿವೆ.
ವೈರಲ್ ಆದ ವಿಡಿಯೋದಲ್ಲಿ, ಮಹೇಶ್ ಅವರು ಹಿಂದೆ ಸರಿದು ಕಟ್ಟೆ ಮೇಲೆ ಕೂರಲು ಪ್ರಯತ್ನಿಸುತ್ತಿದ್ದರು. ಆಗ ಅವರು ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾರೆ. ಇದನ್ನು ನೋಡಿದ ಅವರ ಸ್ನೇಹಿತ ಜೋರಾಗಿ ಕಿರುಚಾಡಿದ ಬಗ್ಗೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ