Kundagola: ಕುಂದಗೋಳ: ಸರ್ಕಾರವು ನಗರ, ಪಟ್ಟಣದ ಜನರ ಆರೋಗ್ಯದ ದೃಷ್ಟಿಯಿಂದ ಕಸ ವಿಲೇವಾರಿಗೆ ಎಷ್ಟೇ ಯೋಜನೆ ತಂದರೂ, ಅತ್ಯಾಧುನಿಕ ಯಂತ್ರ ಕೊಟ್ಟರೂ, ಈ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸ ಇಂದಿಗೂ ರಸ್ತೆ ಪಕ್ಕ ಖಾಸಗಿ ಜಮೀನಿನಲ್ಲಿ ರಾಶಿ ರಾಶಿ ಸಂಗ್ರಹವಾಗಿದೆ.
ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡ್ ಮತ್ತು ಮಾರುಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಸ ಸಂಗ್ರಹಿಸಿ ಕುಂದಗೋಳ-ಶಿರೂರು ರಸ್ತೆ ಬದಿ ಹಾಗೂ ಖಾಸಗಿ ಜಮೀನಿನಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ಪರಿಣಾಮ ಜನ ಓಡಾಟಕ್ಕೆ ಕಷ್ಟವಾಗಿ ದುರ್ವಾಸನೆಯಿಂದ ರೋಗದ ಭೀತಿ ಉಂಟಾಗಿದೆ.
ಈ ವಿಷಯವಾಗಿ ಪಟ್ಟಣ ಪಂಚಾಯಿತಿ ಸಿ ವಿ ಕುಲಕರ್ಣಿ ಮುಖ್ಯಧಿಕಾರಿಗಳು ಅವರು ಪ್ರತಿಕ್ರಿಯೆ ನೀಡಿ, ವಿಲೇವಾರಿ ಆಗಿದ್ದ ಕಸದ ಇನರ್ಟ್ ಜೊತೆ ಕಸವನ್ನು ಸಹ ಅಲ್ಲಿ ಸಂಗ್ರಹ ಮಾಡಿದ್ದಾರೆ. ಸರಿಪಡಿಸುತ್ತೇವೆ ಎನ್ನುತ್ತಾರೆ.
ಕೋಟಿ ಕೋಟಿ ಹಣ ವ್ಯಯಿಸಿ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕವನ್ನು ಪಟ್ಟಣ ಪಂಚಾಯಿತಿ ನಿರ್ಮಿಸಿದ್ದರೂ ರಸ್ತೆ ಪಕ್ಕ, ಖಾಸಗಿ ಜಮೀನಿನಲ್ಲಿ ಕಸ ಹಾಕಿರೋದು ಕಾನೂನು ಬಾಹಿರ. ಈ ಬಗ್ಗೆ ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಧಾರವಾಡ