special story
ನಾವು ಇತ್ತಿಚಿನ ದಿನಗಳಲ್ಲಿ ಪರಿಸರವನ್ನು ರಕ್ಷಿಸಬೇಕು ಪ್ರಾಣಿಗಳನ್ನು ರಕ್ಷಿಸಬೇಕು ಎನ್ನುವ ದೃಷ್ಟಿಯಿಂದ ಹಲವರು ಪರಿಸರ ಸ್ನೇಹಿ ಕಾಳಜಿಗಳನ್ನು ಕೈಗೊಳ್ಳುತಿದ್ದೇವೆ. ಅದೇ ರೀತಿ ಪ್ಲಾಸ್ಟಿಕ್ ನಿಂದ ಪರಿಸರ ಹಾಳಾಗುತ್ತದೆ ಎಂದ ಅರಿತ ನಾವು ಪ್ಲಾಸ್ಟಿಕ್ ನಿಂದ ಮುಕ್ತಿಹೊಂದಲು ಮತ್ತು ಬಳಕೆ ಮಾಡಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಲು ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ . ಅದೇ ರೀತಿ ಪ್ಲಾಸ್ಟಿಕ್ ನಿಂದ ಹಲವಾರು ವಸ್ತುಗಳನ್ನು ತಯಾರಿಸಿ ಮಾರುಕಟ್ಟಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಉದಾಹರಣೆಗೆ ಪ್ಲಾಸ್ತಿಕ್ ತ್ಯಾಜ್ಯದಿಂದ ಬಾಗಿಲುಗಳನ್ನು. ಆಟಿಕೆ ಸಾಮಾನುಗಳನ್ನು ಟೇಬಲ್ ಗಳನ್ನು ಖುರ್ಚಿಗಳನ್ನು ತಯಾರು ಮಾಡಲಾಗುತ್ತಿದೆ.
ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಬಳಕೆ ಮಾಡಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ನೆಲಕ್ಕೆ ಹಾಸುವ ಟೇಲ್ಸ್ ಗಳನ್ನು ತಯಾರು ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ತ್ಯಾಜ್ಸ ದಿಂದ ಸಿದ್ದವಸ್ತುಗಳನ್ನು ತಯಾರು ಮಾಡುವ ಕಾರ್ಖಾನೆ ಇದ್ದು ಇಲ್ಲಿ ಹೊಸ ಆವಿಷ್ಕಾರವನ್ನೆ ಮಾಡಿದ್ದಾರೆ. ಇಲ್ಲಿ ತಯಾರಾಗಿರುವ ಟೇಲ್ಸಗಳನ್ನು ಈಗಾಗಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಕಲಿಕಾ ಕೆಂದ್ರದಲ್ಲಿ ಹಾಸಲಾಗಿದೆ ಇಲ್ಲಿ ನೆಲಕ್ಕೆ ಹಾಸಿರುವ ಈ ಟೇಲ್ಸ್ ಗಳನ್ನು ನೋಡಿದರೆ ಒಮ್ಮೆಲೆ ಯಾರಿಗು ಸಹ ಅನ್ನಿಸುವುದಿಲ್ಲ ಇವು ಸಿಮೆಂಟ್ಟ ಮತ್ತು ಕಾಂಕ್ರಿಟ್ ಬಳಸಿ ತಯಾರಿಸಲಾಗಿದ ಎಂದೆನಿಸದೆ ಇರದು. ಆದರೆ ಇದು ಪಕ್ಕಾ ಪ್ಲಾಸ್ಟಿಕ್ ನಿಂದ ತಯಾರಾಗಿರುವ ಟೇಲ್ಸ್ ಎಂದು ಹೇಳಿದರೆ ಒಮ್ಮೆಲೆ ನಂಬಲು ಅಸಾದ್ಯ ಅಷ್ಟೊಂದು ಗಟ್ಟಿಮುಟ್ಟಾಗಿವೆ ಈ ಟೇಲ್ಸ್ಗಳು.