Political News: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 17ನೇ ಕಂತಿನ ಹಣ ನಾಳೆ (ಜೂ.18) ಬಿಡುಗಡೆಯಾಗಲಿದೆ.
ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ನಾಳೆ ವಾರಣಾಸಿಗೆ ಭೇಟಿ ನೀಡಲಿದ್ದು ,ಈ ವೇಳೆ ಸುಮಾರು 9.3ಕೋಟಿ ರೈತರ ಖಾತೆಗಳಿಗೆ 20,000ರೂ. ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೃಷಿಕರಿಗೆ ನೆರವಾಗಲೆಂದು 2019ರಲ್ಲಿ ಜಾರಿಗೆ ತಂದಿದೆ. ಇದುವರೆಗೂ 16 ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಬಿಡುಗಡೆಯಾಗಿದೆ. ಫೆ.28ರಂದು ಫಲಾನುಭವಿ ಕೃಷಿಕರ ಖಾತೆಗಳಿಗೆ 16ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು.
ಪಿ.ಎಂ ಕಿಸಾನ್ ಯೋಜನೆಯಡಿ 4 ತಿಂಗಳಿಗೊಮ್ಮೆ 20,000ರೂ.ಗಳಂತೆ ವರ್ಷಕ್ಕೆ 3ಬಾರಿ ಹಣ ಪಾವತಿಸಲಾಗುತ್ತದೆ. ಏಪ್ರಿಲ್-ಜುಲೈ , ಆಗಸ್ಟ್-ನವೆಂಬರ್, ಮತ್ತು ಡಿಸೆಂಬರ್-ಮಾರ್ಚ್ ಹೀಗೆ 3ಕಂತುಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ.
ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲು ಫಲಾನುಭವಿ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸದ ರೈತರ ಖಾತೆಗಳಿಗೆ ಹಣ ಬಿಡುಗಡೆಯಾಗುವುದಿಲ್ಲ.
ಒಟಿಪಿ ಆಧಾರಿತ ಇ-ಕೆವೈಸಿಯನ್ನು ಆನ್ ಲೈನ್ ಮತ್ತು ಆಫ್ ಲೈನ್ ಎರಡರ ಮೂಲಕವೂ ಮಾಡಬಹುದು. ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ ಈಗಾಗಲೇ ಇ-ಕೆವೈಸಿಯನ್ನು ಪೂರ್ಣಗೊಳಿಸಿದ್ದರೆ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಎಂದು ಆನ್ ಲೈನ್ ಮೂಲಕ ಪರಿಶೀಲಿಸಬಹುದು.