Thursday, November 27, 2025

Latest Posts

ಗಾಯಗೊಂಡ ಸೈನಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ..

- Advertisement -

ಧಿಡೀರನೇ ಲಡಾಕ್‌ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ, ಅಲ್ಲಿನ ಸೈನಿಕರನ್ನು ಕುರಿತು ಭಾಷಣ ಮಾಡಿದರು. ಅಷ್ಟೇ ಅಲ್ಲದೇ, ಮೊನ್ನೆ ನಡೆದ ಚೀನಾ- ಭಾರತ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನ ಕೂಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ಗಾಯಗೊಂಡ ಸೈನಿಕರಿನ್ನಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸ್ಥಳಕ್ಕೆ ಇಂದು ಪ್ರಧಾನಿ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ಬಗ್ಗೆ ತುಂಬ ಹೆಮ್ಮೆ ಎನ್ನಿಸುತ್ತದೆ. ನಿಮ್ಮ ಈ ಸಾಹಸ ಶೌರ್ಯ ಯುವ ಪೀಳಿಗೆಗೆ ಮುನ್ನಡೆಯಲು ಸಹಕಾರಿಯಾಗಿದೆ ಎಂದಿದ್ದಾರೆ.

ಅಲ್ಲದೇ, ನಾನಿಂದು ಇಲ್ಲಿ ನಿಮಗೆ ವಂದಿಸಲು ಬಂದಿದ್ದೇನೆ. ನಿಮ್ಮನ್ನು ನೋಡಿ, ಮಾತನಾಡಿಸಿ, ಪ್ರೇರಣೆ ಪಡೆದು ಹಿಂದಿರುಗುತ್ತಿದ್ದೇನೆ. ನಮ್ಮ ಭಾರತ ಖಂಡಿತವಾಗಿಯೂ ಸ್ವಾಭಿಮಾನಿ ದೇಶವಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ ಯಾರ ಎದುರು ಎಂದಿಗೂ ಬಗ್ಗಲಿಲ್ಲ, ಬಗ್ಗುವುದೂ ಇಲ್ಲ ಎಂದು ಮೋದಿ ಹೇಳಿದ್ದಾರೆ.

ನಿಮಗೆ ನಮಿಸುತ್ತೇನೆ. ನಿಮಗೆ ಜನ್ಮ ನೀಡುವ ವೀರ ಮಾತೆಗೆ ವಂದಿಸುತ್ತೇನೆ. ನಿಮ್ಮಂಥ ವೀರ ಯೋಧರಿಗೆ ಜನ್ಮ ನೀಡಿದ ವೀರಮಾತೆಯರಿಗೆ ಶತ ಶತ ಪ್ರಣಾಮ ಮಾಡುತ್ತೇನೆ. ನಿಮ್ಮನ್ನು ಪಾಲನೆ ಪೋಷಣೆ ಮಾಡಿ ಬೆಳೆಸಿ, ದೇಶಕ್ಕಾಗಿ ನೀಡಿದ್ದಾರೆ. ನೀವು ಬೇಗ ಗುಣಮುಖರಾಗಿ ಬನ್ನಿ ನಾವೆಲ್ಲ ಸೇರಿ ಮುನ್ನಡೆಯೋಣ ಎಂದಿದ್ದಾರೆ.

- Advertisement -

Latest Posts

Don't Miss