ಪ್ರಧಾನಿ ನರೇಂದ್ರ ಮೋದಿ ಯಾವತ್ತಾದರೂ ಕ್ಷಮೆ ಕೇಳಿದ್ದನ್ನು ನೋಡಿದ್ದೀರಾ ಆದರೆ ಅವರು ಈಗ ಯಾರೋ ಮಾಡಿದ ತಪ್ಪಿಗೆ ತಾವು ಕ್ಷಮೆ ಕೇಳಿದ್ದಾರೆ. ಪ್ರಧಾನಿ ಮೋದಿ ಸಾರಿ ಕೇಳಿದ್ದಾದರೂ ಯಾಕೆ?
ಮಹಾರಾಷ್ಟ್ರದ ರಾಜಕೋಟ್ ನಲ್ಲಿ ಇದೇ ಆಗಸ್ಟ್ 26ರಂದು 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಮುರಿದು ಬಿದ್ದಿತ್ತು. ಶಿವಾಜಿ ಪ್ರತಿಮೆಯನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಸ್ವತಹ ಪ್ರಧಾನಿ ಮೋದಿ ಅವರೇ, ಉದ್ಘಾಟಿಸಿದ್ದರು. ಇದಾಗಿ ಕೇವಲ 9 ತಿಂಗಳಿಗೆ ಶಿವಾಜಿ ಪ್ರತಿಮೆ ಮುರಿದು ಬಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು. ಪ್ರತಿಮೆ ಬಿದ್ದ ಮೂರೇ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಶಿವಾಜಿ ಪ್ರತಿಮೆ ಬೀಳೋಕೆ ಕಾರಣವಾಗಿದ್ದೇ ಬೇರೆ ಆದ್ರೂ, ಯಾರೋ ಮಾಡಿದ ತಪ್ಪಿಗೆ ಈಗ ಪ್ರಧಾನಿ ಮೇಲಿಂದ ಮೇಲೆ ಕ್ಷಮೆ ಕೇಳುತ್ತಿದ್ದಾರೆ.. ಈ ಕ್ಷಮೆಯಾಚನೆ ಅನ್ನೋದರ ಹಿಂದೆ ಒಂದು ತಂತ್ರಗಾರಿಕೆ ಕೂಡ ಇದೆ..
ಇದೇ ವರ್ಷ ಅಕ್ಟೋಬರ್ ಬಳಿಕ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಗಳು ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತಗಳಿಂದ ಮುನ್ನಡೆ ಪಡೆದು ಸರ್ಕಾರ ರಚಿಸಿದೆ. ಮಹಾರಾಷ್ಟ್ರದಲ್ಲೂ ಶಿಂಧೆ ನೇತೃತ್ವದ ಶಿವಸೇನೆ ಸಹಕಾರದಲ್ಲಿ ಸರ್ಕಾರ ರಚಿಸಿದೆ. ಮೋದಿ ವರ್ಚಸ್ಸು ಕಡಿಮೆಯಾಗಿರೋದು ಲೋಕಸಭಾ ಚುನಾವಣಾ ಫಲಿತಾಂಶದಿಂದಲೇ ಗೊತ್ತಾಗಿದೆ. ಮಹಾರಾಷ್ಟ್ರದಲ್ಲೂ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವುದರಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಏರಲು ಬಾರಿ ಸರ್ಕಸ್ ಮಾಡ್ಲೇಬೇಕು.
ಇದೇ ಟೈಮಲ್ಲೇ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಮುರಿದು ಬಿದ್ದಿದೆ. ಶಿವಾಜಿ, ಮರಾಠ ಸಮುದಾಯದ ಆರಾಧ್ಯ ದೈವ..ಮಹಾರಾಷ್ಟ್ರದ ಜನರ ಪಾಲಿಕಗೆ ದೇವರು.. ಹೀಗಿದ್ದಾಗ ಮೋದಿಯಿಂದಲೇ ಉದ್ಘಾಟನೆ ಆಗಿರೋ ಪ್ರತಿಮೆ ಮುರಿದು ಬಿದ್ದಿದ್ದು ಅಲ್ಲಿನ ಬಿಜೆಪಿಗೆ ಹಿನ್ನಡೆಯಾದಂತೆ.. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಈಗ ಕ್ಷಮೆ ಕೇಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ನಮ್ಮ ಆರಾಧ್ಯ ದೇವರು, ಪ್ರತಿಮೆಗೆ ಹಾನಿಯಾಗಿ ಆರಾಧಕರಿಗೆ ನೋವುಂಟಾಗಿದೆ. ಇದಕ್ಕಾಗಿ ನಾನುಕ್ಷಮೆ ಕೇಳ್ತೀನಿ ಅಂದಿದ್ದಾರೆ. ಇನ್ನೊಂದು ಕಡೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಕೂಡ ಹೋದಲ್ಲಿ ಬಂದಲ್ಲಿ ಕ್ಷಮೆ ಕೇಳುತ್ತಿದ್ದಾರೆ..
ಮೋದಿ ಪ್ರಧಾನಿಯಾಗಿ ಹತ್ತು ವರ್ಷ ಕಳೆದು ಹೋಯಿತು ಈ ಅವಧಿಯಲ್ಲಿ ಒಂದೇ ಒಂದು ಬಾರಿ ಕ್ಷಮೆ ಅನ್ನೋದನ್ನ ಕೇಳೇ ಇಲ್ಲ. ಮಣಿಪುರ ಹಿಂಸಾಚಾರ ನಡೆದಾಗ ಮೋದಿ ಮಾತನಾಡಬೇಕು ಅಂತ ವಿಪಕ್ಷಗಳು ಪಟ್ಟು ಹಿಡಿದಿದ್ವು. ಆದರೂ ಮಣಿಪುರದ ಬಗ್ಗೆ ಪ್ರಧಾನಿ ಮೋದಿ ತುಟಿ ಪಿಟಿಕ್ ಎನ್ನಲಿಲ್ಲ. ಸಾಕಷ್ಟು ಆರೋಪಗಳು ಬಂದಾಗ್ಲೂ ಮೋದಿ ಬಾಯಲ್ಲಿ ಸಾರಿ ಅನ್ನೋ ಮಾತು ಬರಲೇ ಇಲ್ಲ.. ಆದರೆ ಈಗ ಮಹಾರಾಷ್ಟ್ರದಲ್ಲಿ ಎಲೆಕ್ಷನ್ ನಡೆಯೋ ಹೊತ್ತು.. ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರೋ ಬಿಜೆಪಿ ಈ ಬಾರಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸೀಟ್ ಗೆಲ್ಲಲೇ ಬೇಕು ಅಂತ ಹರಸಾಹಸ ಪಡುತ್ತಿದೆ ಒಂದು ವೇಳೆ ಈಗಲೂ ಸೈಲೆಂಟಾಗಿದ್ರೆ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ದೊಡ್ಡ ಪೆಟ್ಟು ಬೀಳೋದು ಖಂಡಿತ.. ಮತದಾರರ ಮುಂದೆ ಈಗ 56 ಇಂಚಿನ ಎದೆ ಕರಗಿದೆ..