‘ಬುಡಸಹಿತ ಧ್ವಂಸಗೊಳಿಸಬೇಕು’ – ಮೋದಿ ಕರೆಗೆ ಬೆಚ್ಚಿದ ಪಾಕ್ ಪ್ರಧಾನಿ!

ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್‌ನಲ್ಲಿ ನಡೀತಿರೋ SCO ಮಹಾಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿರೋ ಮಾಸ್ಟರ್‌ಕ್ಲಾಸ್ ಸ್ಪೀಚ್ ಈಗ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸಖತ್ ಸೌಂಡ್‌ ಮಾಡ್ತಿದೆ. ಅದರಲ್ಲೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಕಣ್ಣೆದುರಲ್ಲೇ ಮೋದಿಜಿ ಕೊಟ್ಟಿರೋ ಖಡಕ್ ವಾರ್ನಿಂಗ್‌ನಿಂದ ಇಡೀ ಪಾಕ್ ಪಾಳಯವೇ ಸೈಲೆಂಟ್ ಆಗಿದೆ ಅಂತಾನೇ ಹೇಳಬಹುದು.

ಹೌದು, ಬಿಶ್ಕೆಕ್ ಶೃಂಗಸಭೆಯಲ್ಲಿ ಗರ್ಜಿಸಿದ ಪ್ರಧಾನಿ ಮೋದಿ, “ಭಯೋತ್ಪಾದನೆ ಅನ್ನೋದು ಜಾಗತಿಕ ಪಿಡುಗು, ಇದರ ವಿಚಾರದಲ್ಲಿ ಯಾವುದೇ ಡಬಲ್ ಸ್ಟ್ಯಾಂಡರ್ಡ್ಸ್‌ಗೆ ಜಾಗವಿಲ್ಲ” ಅಂತ ನೇರಾನೇರ ಕಟ್‌ ಆಂಡ್‌ ಕ್ಲಿಯರ್‌ ಆಗಿ ಹೇಳಿದ್ದಾರೆ. ಟೆರರಿಸಮ್‌ಗೆ ಸಿಗುವ ಫಂಡಿಂಗ್ ಆಗಿರಬಹುದು, ಹ್ಯೂಮನ್ ರಿಕ್ರೂಟ್‌ಮೆಂಟ್ ಇರಬಹುದು ಅಥವಾ ಟೆರರಿಸ್ಟ್‌ಗಳಿಗೆ ಸಿಗುವ ಸೇಫ್‌ ಹೇವನ್‌ಗಳಿರಬಹುದು… ಒಟ್ಟಾರೆ ಆ ಇಡೀ ಭಯೋತ್ಪಾದನೆಯ ಪರಿಸರ ವ್ಯವಸ್ಥೆಯನ್ನೇ ಬುಡಸಹಿತ ಧ್ವಂಸಗೊಳಿಸಬೇಕು ಅಂತ ಜಾಗತಿಕ ರಾಷ್ಟ್ರಗಳಿಗೆ ಬಲವಾದ ಕರೆ ಕೊಟ್ಟಿದ್ದಾರೆ.

ಮೋದಿಜಿ ಈ ರಗಡ್ ಮಾತುಗಳನ್ನಾಡ್ತಾ ಇದ್ದಿದ್ರೆ, ಸಭಾಂಗಣದಲ್ಲೇ ಇದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರ ಮುಖದಲ್ಲಿ ಮುಜುಗರ ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದು, ಅದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂಡಿಯಾ ಮೇಲೆ ಅಟ್ಯಾಕ್ ಮಾಡೋಕೆ ಉಗ್ರರಿಗೆ ಕುಮ್ಮಕ್ಕು ಕೊಡ್ತಿರೋ ಪಾಕಿಸ್ತಾನದ ಕೃತ್ಯಗಳ ವಿರುದ್ಧ ಮೋದಿಜಿ ಎಸೆದಿರುವ ಈ ಬ್ರಹ್ಮಾಸ್ತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗ್ತಿದೆ.

ಇಷ್ಟೇ ಅಲ್ಲ, ಇವತ್ತಿನ ಜ್ವಲಂತ ಸಮಸ್ಯೆಯಾಗಿರೋ ಯುದ್ಧಗಳ ಬಗ್ಗೆಯೂ ಮೋದಿಜಿ ಓಪನ್ ಆಗಿ ಮಾತಾಡಿದ್ದಾರೆ. ಯುದ್ಧಭೂಮಿಯಲ್ಲಿ ಎಂದಿಗೂ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲ್ಲ! ಎಲ್ಲಾ ಬಿಕ್ಕಟ್ಟುಗಳಿಗೂ ಸಂವಾದ ಮತ್ತು ರಾಜತಾಂತ್ರಿಕತೆಯೇ ಏಕೈಕ ದಾರಿ ಅಂತ ಮಧ್ಯಪ್ರಾಚ್ಯ ಯುದ್ಧ ಹಾಗೂ ಇತರೆ ಜಾಗತಿಕ ಸಂಘರ್ಷಗಳನ್ನಉದಾಹರಣೆಯೊಂದಿಗೆ ವಿವರಿಸಿ ಗ್ಲೋಬಲ್ ಲೀಡರ್ ಛಾಪು ಮೂಡಿಸಿದ್ದಾರೆ.

ನಿನ್ನೆ ತಾನೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭೇಟಿ ಮಾಡಿದಾಗಲೂ ಮೋದಿಜಿ ಇದೇ ಸ್ಟ್ರಾಂಗ್ ಸ್ಟ್ಯಾಂಡ್ ತೆಗೆದುಕೊಂಡಿದ್ರು. ಇವತ್ತು ಎಸ್‌ಸಿಒ ವೇದಿಕೆಯಲ್ಲೂ ಅದನ್ನೇ ಪುನರುಚ್ಚರಿಸುವ ಮೂಲಕ ವಿಶ್ವಗುರು ಸ್ಥಾನದಲ್ಲಿ ಭಾರತದ ಧ್ವನಿಯನ್ನು ಮತ್ತಷ್ಟು ಗಟ್ಟಿಯಾಗಿ ಕೇಳಿಸಿದ್ದಾರೆ.

ಇದೆಲ್ಲ ನೋಡಿದ್ರೆ ‘ಬಿಶ್ಕೆಕ್ ಶೃಂಗಸಭೆಯಲ್ಲಿ ಮೋದಿಜಿ ಮಾತುಗಳು ಉಗ್ರರನ್ನು ಬೆಂಬಲಿಸುವ ದೇಶಗಳಿಗೆ ದೊಡ್ಡ ನಡುಕ ಹುಟ್ಟಿಸಿವೆ, ಇಡೀ ಜಗತ್ತಿಗೆ ಶಾಂತಿಯ ದಾರಿ ಯಾವುದು ಅನ್ನೋದನ್ನು ತೋರಿಸಿಕೊಟ್ಟಿದೆ ಅಂತ ಹೇಳಬಹುದು.

About The Author