ಭಾರತ ಮತ್ತು ಚೀನಾ ಗಡಿವಿವಾದ ಮುಂದುವರಿದಿದ್ದು, ಮೊನ್ನೆ ಮೊನ್ನೆ ತಾನೇ ಚೀನಾ ಕ್ಯಾತೆ ತೆಗೆದು ನಮ್ಮ ಭಾರತೀಯ ಯೋಧರ ಸುದ್ದಿಗೆ ಬಂದಿತ್ತು. ಭಾರತದ ಸೈನಿಕರು ಹುತಾತ್ಮರಾಗಲು ಕಾರಣರಾಗಿತ್ತು. ಇದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟ ಭಾರತೀಯ ಸೈನಿಕರು ಚೀನಾದ 40 ಸೈನಿಕರನ್ನು ಸದೆಬಡೆದಿದ್ದಾರೆ.

ಆದ್ರೆ ಇಂದು ಪ್ರಧಾನಿ ನರೇಂದ್ರ ಮೋದಿ ಸಡನ್ ಆಗಿ ಲಡಾಕ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮೋದಿಗೆ ಭಾರತೀಯ ಸೇನೆಯ ಜನರಲ್ ಬಿಪಿನ್ ರಾವತ್ ಕೂಡ ಸಾಥ್ ನೀಡಿದ್ರು.
ಈ ವೇಳೆ ಭಾರತೀಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಶೌರ್ಯ ಮತ್ತು ಭಾರತಮಾತೆಯ ರಕ್ಷಣೆಗಾಗಿ ನಿಮ್ಮ ತ್ಯಾಗ ದೊಡ್ಡದು. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಭಾರತ ಮಾತೆಯ ಖಡ್ಗವಾಗಿ ದೇಶದ ರಕ್ಷಣೆ ಮಾಡುತ್ತೀರಾ. ಅವಳ ಸೇವೆ ಮಾಡುತ್ತೀರಾ. ಈ ಕೆಲಸಕ್ಕೆ ಇಡೀ ವಿಶ್ವದಲ್ಲೇ ಯಾರೂ ಪೈಪೋಟಿ ಮಾಡಲಾಗದು ಎಂದರು.
ಅಲ್ಲದೇ, ನಿಮ್ಮ ಜೀವವನ್ನು ಪಣಕ್ಕಿಟ್ಟು ದೇಶದ ರಕ್ಷಣೆ ಮಾಡುತ್ತಿರುವ ನಿಮ್ಮ ಮೇಲೆ ನಮಗೆಲ್ಲ ಅಚಲವಾದ ನಂಬಿಕೆ ಇದೆ. ಸ್ವಾವಲಂಬಿ ಭಾರತವಾಗುವ ಸಂಕಲ್ಪ ನಿಮ್ಮಿಂದ ನೀವು ದೇಶಕ್ಕಾಗಿ ಮಾಡುವ ತ್ಯಾಗ ಬಲಿದಾನಗಳಿಂದ ಪೂರ್ಣಗೊಳ್ಳುತ್ತಿದೆ ಎಂದಿದ್ದಾರೆ.
ಇನ್ನು ಮಾತು ಮುಂದುವರಿಸಿದ ಪ್ರಧಾನಿ ಮೋದಿ, ಚೀನಾ ಭಾರತ ಯುದ್ಧದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಯೋಧರಿಗೆಲ್ಲ ಮತ್ತೊಮ್ಮೆ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ದೇಶದ ಸುದ್ದಿಗೆ ಬಂದ್ರೆ ಹಿಂದೆ ಮುಂದೆ ನೋಡದೇ, ನಿರ್ದಾಕ್ಷಿಣ್ಯವಾಗಿ ಪ್ರತ್ಯುತ್ತರ ನೀಡಿ ಎಂದು, ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ನಮ್ಮ ಸುದ್ದಿಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

