Thursday, November 27, 2025

Latest Posts

80 ಕೋಟಿ ಬಡ ಜನರಿಗೆ ಶುಭಸುದ್ದಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ..

- Advertisement -

ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ಲಾಕ್‌ಡೌನ್ ಮತ್ತು ಕೊರೊನಾ ಸೋಂಕು ಹರಡುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಗರೀಬ್ ಕಲ್ಯಾಣ್ ಯೋಜನೆಯನ್ನ ವಿಸ್ತರಿಸುವ ಮೂಲಕ ಬಡವರಿಗೆ ಶುಭಸುದ್ದಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧೀನಿ ಮೋದಿ, ಕೊರೊನಾ ಮಹಾಮಾರಿಯೊಂದಿಗೆ ಹೋರಾಡುತ್ತ, ಅನ್‌ಲಾಕ್ -2ಗೆ ಪ್ರವೇಶಿಸಿದ್ದೇವೆ. ಕೊರೊನಾ ಸಾವಿನ ಬಗ್ಗೆ ಹೇಳುವುದಾದರೆ ಭಾರತವು ಕಡಿಮೆ ಪ್ರಮಾಣದಲ್ಲಿದೆ. ಸಮಯಕ್ಕೆ ಸರಿಯಾಗಿ ಲಾಕ್‌ಡೌನ್ ಮಾಡಿದ್ದರಿಂದ. ಮತ್ತು ಬೇರೆ ನಿರ್ಧಾರಗಳಿಂದ ಭಾರತದಲ್ಲಿ ಲಕ್ಷಕ್ಕೂ ಅಧಿಕ ಜನರ ಜೀವನ ಉಳಿದಿದೆ ಎಂದಿದ್ದಾರೆ.

https://youtu.be/465Mb5bSplY

ಅಲ್ಲದೇ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ ಮಾಡಿದ್ದು, ನವೆಂಬರ್ ಅಂತ್ಯದವರೆಗೂ 80 ಕೋಟಿಗೂ ಹೆಚ್ಚು ಬಡಜನರಿಗೆ ಅನುಕೂಲವಾಗಲಿದ್ದು, ಪ್ರತಿ ಕುಟುಂಬಕ್ಕೂ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಬೆಳೆ ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಅಮೆರಿಕದ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಜನರಿಗೆ ನಾವು ಉಚಿತವಾಗಿ ಅಕ್ಕಿ ಗೋಧಿ ನೀಡುತ್ತಿದ್ದೇವೆ. ಜಗತ್ತು ನಮ್ಮನ್ನು ಅಚ್ಚರಿಯಿಂದ ನೋಡುತ್ತಿದೆ. ಇದಕ್ಕೆಲ್ಲ ರೈತ ಪಟ್ಟ ಶ್ರಮ ಕಾರಣ ಎಂದು ಹೇಳಿದ್ದಾರೆ.

- Advertisement -

Latest Posts

Don't Miss