Sunday, December 22, 2024

Latest Posts

ಪ್ರೇಮಿಗಳ ದಿನಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಸಿಹಿ ಸುದ್ದಿ… ಏನದು..?

- Advertisement -

ಪೊಗರು ಹೀರೋ ಧ್ರುವ ಸರ್ಜಾ ಪ್ರೇಮಿಗಳ ದಿನದಂದು ಅಭಿಮಾನಿಗಳ ಸಿಹಿಸುದ್ದಿ ನೀಡಿದ್ದಾರೆ. ಫೆಬ್ರವರಿ 14ರಂದು ಬಹುನಿರೀಕ್ಷಿತ ಪೊಗರು ಸಿನಿಮಾದ ಆಡಿಯೋ ಲಾಂಚ್ ಮಾಡುವುದಾಗಿ ಧ್ರುವ ತಿಳಿಸಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಬಹದ್ಧೂರ್ ಹುಡ್ಗ ಪೊಗರು ಸಿನಿಮಾದ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹಂಚಿಕೊಂಡ್ರು.

ದಾವಣೆಗೆಯ ಹೈಸ್ಕೂಲ್ ಗ್ರೌಂಡ್ ನಲ್ಲಿ ಫೆ.14 ರಂದು ಪೊಗರು ಆಡಿಯೋ ಲಾಂಚ್ ಮಾಡುತ್ತೇವೆ. ಈ ಕಾರ್ಯಕ್ರಮದಲ್ಲಿ ಕನ್ನಡ ಇಬ್ಬರು ಸ್ಟಾರ್ ಭಾಗವಹಿಸ್ತಾರೆ. ಅವರು ತುಂಬಾ ದಿನಗಳ ನಂತ್ರ ಒಟ್ಟಿಗೆ ಒಂದೇ ಸ್ಟೇಜ್ ನಲ್ಲಿ ಕಾಣಿಸಿಕೊಳ್ತಾರೆ. ಅದು ಸರ್ ಪ್ರೈಸ್ ಅಂತಾ ಹೇಳಿದ್ದಾರೆ.

ಸದ್ಯ ಫ್ಯಾನ್ಸ್ ಯಾರು ಈ ಇಬ್ಬರು ಸ್ಟಾರ್ಸ್.. ಮೇ ಬಿ ದಚ್ಚು-ಕಿಚ್ಚ ಅಂತಾ ಕೆಲವ್ರು ಊಹೇ ಮಾಡಿದ್ರೆ, ಮತ್ತೆ ಕೆಲವ್ರು ಕಿಚ್ಚ-ಅಪ್ಪು ಇರಬಹುದು ಅಂತಾರೇ. ಬಟ್ ಸದ್ಯಕ್ಕೆ ಇದು ಸಸ್ಪೆನ್ಸ್ ಆಗಿದೆ.

ಅತ್ತ ಪೊಗರು ಆಡಿಯೋ ಲಾಂಚ್ ಮಾಡ್ತಿರೋದಾಗಿ ಅನೌನ್ಸ್ ಮಾಡಿರುವ ಧ್ರುವ, ಅಭಿಮಾನಿಗಳಿಗೆ ಒಂದು ಬೇಡಿಕೆ ಇಟ್ಟಿದ್ದಾರೆ. ಇಂಟ್ರೊಡಕ್ಷನ್‌ ಹಾಡು ರಿಲೀಸ್‌ ಮಾಡ್ಬೇಕಾ ಅಥವಾ ತಾಯಿ ಸೆಂಟಿಮೆಂಟ್‌ ಇರುವ ಹಾಡು ಬಿಡುಗಡೆ ಮಾಡಬೇಕಾ ಇಲ್ಲವೇ ಒಂದು ನಿಮಿಷದ ಟ್ರೇಲರ್‌ ಬಿಡುಗಡೆ ಮಾಡಬೇಕಾ ಎಂಬುದನ್ನು ಅಭಿಮಾನಿಗಳು ನಿರ್ಧರಿಸಬೇಕು. ಬಹುಮತ ನೋಡಿಕೊಂಡು ಯಾವ ಆಡಿಯೋ ರಿಲೀಸ್‌ ಅನ್ನೋದನ್ನ ನಿರ್ಧರಿಸುತ್ತೇವೆ ಎಂದಿದ್ದಾರೆ. ಈಗಾಗ್ಲೇ ಪೊಗರು ಖರಾಬು ಸಾಂಗ್ ಕನ್ನಡ ಮಾತ್ರವಲ್ಲ ನೆರೆರಾಜ್ಯದಲ್ಲೂ ಟ್ರೇಂಡ್ ಕ್ರಿಯೇಟ್ ಮಾಡಿದ್ದು, ಇದೀಗ ಪೊಗರು ಅಡ್ಡದಿಂದ ಗುನು-ಗುನಗಲು ಮತ್ತಷ್ಟು ಟ್ರ್ಯಾಕ್ಸ್ ಬರ್ತಿವೆ.

- Advertisement -

Latest Posts

Don't Miss