ಬ್ರಿಟನ್: ಇತ್ತೀಚಿನ ಅಕ್ರಮ ಸಂಬಂದ ಪ್ರಕರಣಗಳು ಜಾಸ್ತಿಯಾಗ್ತಿವೆ ಇದರಿಂದಾಗಿ ಸಂಸಾರಗಳು ಹಾಳಾಗುತ್ತಿವೆ. ಮಕ್ಕಳು ಬೀದಿಪಾಲಾಗ್ತಿವೆ, ಕೊಲೆ ಪ್ರಕರಣಗಳು ನಡೆಯುತ್ತಿವೆ . ಮದುವೆಯಾದರೂ ಪರಸಂಗ ಮಾಡಿ ತಮ್ಮ ಅಮೂಲ್ಯವಅದ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ ಇಂತಹುದೆ ಘಟನೆಯೊಂದು ಬ್ರಿಟನ್ ದೇಶದಲ್ಲಿ ನಡೆದು ಸಂಸಾರ ಒಡೆದುಹೋಗಿದೆ.
ಬ್ರಿಟನ್ ಮಹಿಳೆಯೊಬ್ಬರು.. ‘ನನ್ನ ಪತಿ ಹಾಗೂ ನನ್ನ ತಾಯಿ 22 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಬಹಳ ದಿನಗಳಿಂದ ಬಹಿರಂಗವಾಗದೆ ಗುಟ್ಟಾಗಿ ಉಳಿದಿದೆ’ ಎಂದು ಮ್ಲಾನವದನರಾಗಿ ಹೇಳಿಕೊಂಡಿದ್ದಾರೆ. ಪತಿಯ ಅಕ್ರಮ ಸಂಬಂಧದಿಂದ ಮೋಸ ಹೋಸ ಮಹಿಳೆ ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ನಾನು ನನ್ನ ಪತಿಯಿಂದ ಮೋಸ ಹೋಗಿದ್ದೇನೆ. ಇದು ನನ್ನ ಜೀವನದುದ್ದಕ್ಕೂ ನನ್ನನ್ನು ಕಾಡಿತ್ತದೆ ಮುಂದೆಯೂ ಕಾಡುತ್ತದೆ. ಪತಿ ಮತ್ತು ತಾಯಿ ಒಟ್ಟಿಗೆ ಮೋಸ ಮಾಡುವುದನ್ನು ನಾನು ಅರಗಿಸಿಕೊಳ್ಳುವುದಾದರೂ ಹೇಗೆ ಈ ವಿಷಯ ಮೊದಲೇ ತಿಳಿದಿದ್ದರೆ ನಾನೇ ಒಂದು ನಿರ್ಧಾರಕ್ಕೆ ಬರುತ್ತಿದ್ದೆ. ಆದರೆ, ಇಬ್ಬರೂ ನನಗೆ ಕೆಟ್ಟದಾಗಿ, ಅಸಹ್ಯಕರವಾಗಿ ಮೋಸ ಮಾಡಿದ್ದಾರೆ’ ಎಂದು ತಮ್ಮ ದುಃಖ ತೋಡಿಕೊಂಡಿದ್ದಾರೆ. ಇದಲ್ಲದೆ, ಅವರ ಅಕ್ರಮ ಸಂಬಂಧದ ಫಲವಾಗಿ ಮಕ್ಕಳು ಸಹ ಜನಿಸಿವೆ. ಈ ವಿಚಾರವೂ ಸಂತ್ರಸ್ತ ಮಹಿಳೆಗೆ ಈಗ ಗೊತ್ತಾಗಿದೆ!
ಬ್ರಿಟನ್‌ನ ಈ ಮಹಿಳೆ ತನ್ನ 18ನೇ ವಯಸ್ಸಿನಲ್ಲಿ ತನ್ನ ಗೆಳೆಯನನ್ನು ಮದುವೆಯಾದಳು. ಬಳಿಕ ಗಂಡನ ಮನೆಗೆ ಶಿಫ್ಟ್ ಆಗಿದ್ದಳು. ಆದರೆ, ಆ ವೇಳೆಗಾಗಲೇ ಪತಿ ಹಾಗೂ ತಾಯಿ ನಡುವೆ ಸಂಬಂಧ ಶುರುವಾಗಿದ್ದು, ಹೊರಗೆ ಹೋಗುವುದಾಗಿ ಹೇಳಿ ತಾಯಿಯನ್ನು ಭೇಟಿಯಾಗುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಆದರೆ, ಇತ್ತೀಚೆಗೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಪತ್ನಿ ಇತ್ತೀಚೆಗೆ ರಜೆಯ ಮೇಲೆ ಊರಿಗೆ ತೆರಳಿದ್ದಾಗ ಗಂಡ ಮತ್ತು ಆಕೆಯ ಚಿಕ್ಕಮ್ಮನ ರಾಸಲೀಲೆ ನಡೆಸಿದ್ದಾರೆ. ರಜೆ ಮುಗಿಸಿಕೊಂಡು ನೇರವಾಗಿ ಅಮ್ಮನ ಮನೆಗೆ ಹೋದಳು. ಆದರೆ, ಅಲ್ಲಿ ಅವಳು ತನ್ನ ಗಂಡ ಮತ್ತು ತಾಯಿ ಇಬ್ಬರನ್ನೂ ನೋಡಬಾರದ ಸ್ಥಿತಿಯಲ್ಲಿ ನೋಡಿದ್ದಾಳೆ. ಅದರೊಂದಿಗೆ ಇಡೀ ವಿಷಯ ಬಯಲಾಯಿತು. ಅದನ್ನು ಸಹಿಸಲಾಗದೆ ಮಹಿಳೆ, ತನ್ನ ಮಕ್ಕಳನ್ನು ಕರೆದುಕೊಂಡು ಪತಿ ಮತ್ತು ತಾಯಿಯಿಂದ ದೂರ ಹೋಗಿದ್ದಾಳೆ. ಸ್ವತಂತ್ರವಾಗಿ ದುಡಿದು ಬದುಕುತ್ತೇನೆ ಎಂದಿದ್ದಾರೆ.