ಹೊಟೇಲ್, ಮಾಲ್, ಶಾಪ್ ಅಂಗಡಿ ಮಾಲೀಕರಿಗೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತ ಹೋಗುತ್ತಿದ್ದು, ಬೆಂಗಳೂರಿನ ಕೆಲ ಏರಿಯಾಗಳನ್ನ ಸೀಲ್‌ಡೌನ್ ಮಾಡಲಾಗಿದೆ. ಇನ್ನು ಕೆಲ ಕಡೆ ಸೋಶಿಯಲ್ ಡಿಸ್ಟೆನ್ಸಿಂಗ್ ಮೆಂಟೇನ್ ಮಾಡಲಾಗುತ್ತಿಲ್ಲ. ಅದೂ ಅಲ್ಲದೇ ಮಾಸ್ಕ್ ಹಾಕದೇ ಕೆಲವರು ಓಡಾಡುತ್ತಿದ್ದಾರೆ. ಈ ಕಾರಣಕ್ಕೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೊಟೇಲ್, ಮಾಲ್, ಶಾಪ್ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಾಸ್ಕರ್ ರಾವ್, ಅಂಗಡಿ ಮುಂಗಟ್ಟು, ಮಾಲ್, ಆಫೀಸ್, ಬ್ಯಾಂಕ್, ಹೊಟೇಲ್‌ಗಳಲ್ಲಿ ಯಾವ ರೀತಿ ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ನಾವು ಈಗಾಗಲೇ ತಿಳಿಸಿದ್ದೇವೆ. ಆದ್ರೆ ನೀವು ಸರಿಯಾಗಿ ಮಾಸ್ಕ್ ಧರಿಸದಿದ್ದಲ್ಲಿ , ಸಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ನಿಮ್ಮ ಕಚೇರಿಯ ಮೇಲೆ ರೇಡ್ ಮಾಡಿ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಲಾಕ್‌ಡೌನ್ ಕೊಂಚ ಸಡೀಲಿಕೆ ಮಾಡಿದ್ದೇ ತಡ, ಜನ ರಾಜಾರೋಷವಾಗಿ ತಿರುಗಲು ಶುರು ಮಾಡಿದ್ದಾರೆ. ಅಲ್ಲದೇ, ಕೆಲ ಹೊಟೇಲ್, ಅಂಗಡಿಗಳಲ್ಲೂ ಸರಿಯಾದ ನಿಯಮಗಳನ್ನು ಅನುಸರಿಸುತ್ತಿಲ್ಲ. ಅಲ್ಲದೇ ಕೆಲಕಡೆ ಗ್ರಾಹಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿಲ್ಲ.
